ಸಾರಾಂಶ
ಸೇವೆ, ಶ್ರಮದಾನ ಎಂಬುದು ಶಾಲೆಗಳಲ್ಲಿ, ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ನಿರ್ವಹಿಸುವಾಗ ಶಿಕ್ಷಕರು, ಸಿಬ್ಬಂದಿ ಸೂಕ್ತ ಎಚ್ಚರಿಕೆ ವಹಿಸಬೇಕಿದೆ. ಇತ್ತೀಚೆಗೆ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತಾ ಪ್ರಕರಣಗಳನ್ನು ಗಮನಿಸಿ ಈ ಬಗ್ಗೆ ಜಾಗೃತಿ ವಹಿಸುವುದು ಉತ್ತಮ ಎಂದು ಹೊಳೆಹೊನ್ನೂರು ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆ ನಿಕಟಪೂರ್ವ ಮುಖ್ಯಶಿಕ್ಷಕ ಮೊಹಿದ್ದೀನ್ ಜೆ. ಸಲಹೆ ನೀಡಿದ್ದಾರೆ.
ಹೊಳೆಹೊನ್ನೂರು: ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಕೆಲಸ ಮಾಡುವುದು ಸರ್ಕಸ್ ಮಾಡಿದಂತೆ ಆಗುತ್ತದೆ ಎಂದು ನಿಕಟಪೂರ್ವ ಮುಖ್ಯಶಿಕ್ಷಕ ಮೊಹಿದ್ದೀನ್ ಜೆ. ಸಾಬ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆ ಆದ ಮೊಹಿದ್ದೀನ್ ಜೆ. ಸಾಬ್ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಂದು ಕಾರ್ಯವನ್ನು ಸಂಭಾಳಿಸಿಕೊಂಡು ಹೋಗಬೇಕು. ಶಾಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆದರೂ ಅದು ಮುಖ್ಯಶಿಕ್ಷಕನ ತಲೆದಂಡ ಆಗುತ್ತದೆ. ಇತ್ತೀಚೆಗೆ ಮಕ್ಕಳ ಹಕ್ಕು ಕಾಯ್ದೆಯಡಿ ಮಕ್ಕಳು ತಮ್ಮ ಶಾಲೆ ಪರಿಸರ ಸ್ವಚ್ಛತೆ ಮಾಡುವುದು ಒಂದರ್ಥದಲ್ಲಿ ತಪ್ಪಾಗುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಅಂತಹ ಯಾವುದೇ ರೀತಿಯ ಪ್ರಮಾದಗಳು ನಡೆಯದಂತೆ ಸಮಾಜ ಹಾಗೂ ಪೋಷಕರು ಸಹಕಾರ ನೀಡಬೇಕು ಎಂದರು.
ಸಿಆರ್‌ಪಿ ಎ.ಕೆ.ಮಂಜಪ್ಪ, ಬಿಜೆಪಿ ಸ್ಥಳೀಯ ಮುಖಂಡ ಇ.ರಮೇಶ್, ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷೆ ಶ್ವೇತಾ ಅಧ್ಯಕ್ಷತೆ ವಹಿಸಿದ್ದರು. ಅಗಸನಹಳ್ಳಿ ಶಾಲೆ ಮುಖ್ಯಶಿಕ್ಷಕ ಒ.ಚಂದ್ರಪ್ಪ, ಸಹಶಿಕ್ಷಕರಾದ ಗಂಗಮ್ಮ ಎಸ್.ಪಾಟೀಲ್, ಕೆ.ಆರ್. ಪರಿಮಳ, ಸರ್ಕಾರಿ ನೌಕರರ ಸಹಕಾರಿ ಸಂಘದ ಕಾರ್ಯದರ್ಶಿ ಬಿ.ಮೈಲಾರಪ್ಪ, ನಿವೃತ್ತ ಶಿಕ್ಷಕ ಪ್ರಹ್ಲಾದ್, ಶಾಲೆ ಸಿಬ್ಬಂದಿ, ಎಸ್‍ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.ಪ್ರಭಾರ ಮುಖ್ಯಶಿಕ್ಷಕ ಎಸ್.ಮಹಾಂತೇಶಪ್ಪ ಸ್ವಾಗತಿಸಿ, ಬಿ.ಟಿ.ಕಮಲಮ್ಮ ನಿರೂಪಿಸಿದರು. ಸಹಶಿಕ್ಷಕಿ ಸಿ.ಪಿ.ಸುಜಾತ ವಂದಿಸಿದರು.
- - --6ಎಚ್‍ಎಚ್‍ಆರ್3:
ಹೊಳೆಹೊನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮೊಹಿದ್ದೀನ್ ಜೆ. ಸಾಬ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.