ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ದೇಶಕಟ್ಟುವ ಶಕ್ತಿ ತುಂಬುತ್ತಾರೆ

| Published : Nov 04 2025, 04:00 AM IST

ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ದೇಶಕಟ್ಟುವ ಶಕ್ತಿ ತುಂಬುತ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನತ್ತ ಕೊಂಡುಯುವವರೇ ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ದೇಶಕಟ್ಟುವ ಶಕ್ತಿ ತುಂಬುತ್ತಾರೆ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ವಿದ್ಯಾರ್ಥಿಗಳನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನತ್ತ ಕೊಂಡುಯುವವರೇ ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ದೇಶಕಟ್ಟುವ ಶಕ್ತಿ ತುಂಬುತ್ತಾರೆ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.

ಹಿಡಕಲ್ ಡ್ಯಾಮಿನ ಶಿವಾಲಯ ಮಂದಿರದಲ್ಲಿ ಏರ್ಪಡಿಸಿದ ಹಿರಿಯ ಸಾಹಿತಿ ಎಸ್.ಎಂ.ಶಿರೂರ ಅಭಿನಂದನಾ ಸಮಾರಂಭ ಹಾಗೂ ಶಿವಪ್ರಭೆ ಗ್ರ್ರಂಥದ ಲೋಕಾರ್ಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಲಿಸಿದ ಜ್ಞಾನ ಮಾಸದೆ ಕೊನೆಯವರಗೂ ಅಜರಾಮರವಾಗಿರಲು ಸಾಧ್ಯ. ಒಬ್ಬ ಶಿಕ್ಷಕ ಮನಸು ಮಾಡಿದರೇ ಗ್ರಾಮ, ಸಮಾಜದ, ಪರಿವರ್ತನೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಸಾಹಿತಿ ಎಸ್.ಎಂ.ಶಿರೂರ ಅವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಸಲ್ಲಿಸಿದ ಸೇವೆ ಅನನ್ಯ ಎಂದರು.ಮಾಜಿ ಸಚಿವ ಎ.ಬಿ.ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿ ಎಸ್.ಎಂ.ಶಿರೂರ ಅವರು ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಕತೆ-ಕವನಗಳಿಂದ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನಾಡಿಗೆ ನೀಡಿದ್ದಾರೆ. ಈ ಸಮಾರಂಭ ಯುವಕರಿಗೆ ಸ್ಫೂರ್ತಿಯಾಗಲಿದ್ದು, ಯುವಕರು ಕೂಡಾ ಸಾಹಿತ್ಯದತ್ತ ಒಲವು ತೊರಿ ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸಲಿ ಎಂದು ತಿಳಿಸಿದರು.ಗುತ್ತಿಗೆದಾರರಾದ ಬಸವರಾಜ ಮಟಗಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಲ್.ಎಸ್.ಶ್ಯಾಸ್ತ್ರಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮತ್ತೋರ್ವ ಸಾಹಿತಿ ರಾಜಶೇಖರ ಇಚ್ಚಂಗಿ ಗ್ರಂಥದ ಬಗ್ಗೆ ಪರಿಚಯ ನೀಡಿದರು. ಸಾಹಿತಿ ಬಸವರಾಜ ಗಾರ್ಗಿ ಅಭಿನಂದನಾಪರ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಪಾಶ್ಚಾಪೂರದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಘೋಡಗೇರಿಯ ಕಾಶಿನಾಥ ಮಹಾಸ್ವಾಮಿಗಳು ಹತ್ತರಗಿಯ ಕಾರೀಮಠದ ಗುರುಸಿದ್ದ ಮಹಾಸ್ವಾಮಿಗಳು, ಉಳ್ಳಾಗಡ್ಡಿ-ಖಾನಾಪೂರದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಹಿರಿಯ ಸಾಹಿತಿ ಎಲ್.ವಿ.ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಿ, ಆರ್.ಕರುಣಾಶೆಟ್ಟಿ, ಹಿರಿಯ ಸಾಹಿತಿ ಶಿವಾನಂದ ಪುರಾಣಿಕಮಠ, ಯುವ ಧುರೀಣ ರವಿಂದ್ರ ಜಿಂಡ್ರಾಳಿ, ಬಸವರಾಜ ಖಡಕಭಾವಿ, ಡಾ.ಸತೀಶ ಗವತಿ, ಬಿ.ಆರ್.ಸರನೋಬತ, ಬಾಬು ನಾಯಿಕ ಹಣುಮಂತರಾವ್ ನಾಗಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಕಾಶ ಅವಲಕ್ಕಿ ಸ್ವಾಗತಿಸಿದರು. ಪ್ರಕಾಸ ಹೊಸಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಗುಂಡಾಳಿ ಅಭಿನಂದನಾ ಪತ್ರವನ್ನು ಓದಿ ಅರ್ಪಿಸಿದರು. ಸಿ.ಎಂ.ದರ್ಬಾರೆ ಕಾರ್ಯಕ್ರಮ ನಿರೂಪಿಸಿದರು.