ಧಾರವಾಡ:
ಬೋಧನಾ ವೃತ್ತಿಗೆ ನೇಮಕಗೊಂಡ ಶಿಕ್ಷಕರು ಅನ್ಯ ಕಾರ್ಯಗಳ ಹೊರೆಯಿಂದ ಸಂಪೂರ್ಣ ಮುಕ್ತಗೊಳ್ಳಬೇಕು. ಶಾಲಾ ವೇಳೆಯ ಎಲ್ಲ ಅವಧಿಗಳಲ್ಲಿ ಶಿಕ್ಷಕರು ತರಗತಿ ಬೋಧನೆಗೆ ಮೀಸಲಾಗಿರಬೇಕೆಂದು ನಿವೃತ್ತ ಅಧ್ಯಾಪಕಿ ಸುರೇಖಾ ಲೋಕೂರ ಹೇಳಿದರು.ತಾಲೂಕಿನ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿನ್ನೆಲೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕ-ಶಿಕ್ಷಕಿಯರು ಪೂರ್ಣ ಕಾಲಿಕವಾಗಿ ತರಗತಿಗಳಲ್ಲಿಯೇ ಉಳಿಯಬೇಕು. ವಿದ್ಯಾರ್ಥಿಗಳ ಒಡನಾಟದಲ್ಲಿದ್ದು ಅವರ ಕಲಿಕೆಯ ಗುಣಮಟ್ಟ ಸುಧಾರಣೆಗೆ ಪೂರಕವಾದ ಬೋಧನೆ ಮಾಡಬೇಕು. ಅನ್ಯ ಕಾರ್ಯಗಳ ಒತ್ತಡವಿಲ್ಲದ ಮುಕ್ತ ವಾತಾವರಣ ಮತ್ತು ಕಾಲಾವಕಾಶ ಅಧಿಕವಾಗಬೇಕು ಎಂದರು.ಈ ವೇಳೆ ಮಲ್ಲಿಕಾರ್ಜುನ ಜಕ್ಕಣ್ಣವರ, ಶಂಕರ ಕರವಿನಕೊಪ್ಪ, ಎನ್.ಜಿ. ಗುರುಪುತ್ರನವರ, ನಾಗರತ್ನಾ ರೇವಡಿ, ಸುಕನ್ಯಾ ಲೋಕೂರ, ಯಶೋದಾ ದಳವಾಯಿ, ಅಜಿತ ದೇಸಾಯಿ, ಮಂಜುನಾಥ ಪೂಜಾರ, ಸಂಜನಾ ಕರವಿನಕೊಪ್ಪ, ದೀಪಾ ಗಾಣಿಗೇರ, ಬಡೇಖಾನ್ನವರ, ಲಕ್ಷ್ಮೀ ಕುರಗುಂದ ಅವರು ಅಭಿನಂದನಾಪರ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕುರಗುಂದ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ತಳವಾರ ಸ್ವಾಗತಿಸಿದರು. ಶಿವಾನಂದ ಹೂಗಾರ ನಿರೂಪಿಸಿದರು. ಗಣೇಶ ಕುಂದಣಗಾರ ವಂದಿಸಿದರು.