ಶಿಕ್ಷಕರು ಹೊಸತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

| Published : Sep 20 2024, 01:50 AM IST / Updated: Sep 20 2024, 01:51 AM IST

ಶಿಕ್ಷಕರು ಹೊಸತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್
Share this Article
  • FB
  • TW
  • Linkdin
  • Email

ಸಾರಾಂಶ

ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮ ನಡೆಯಿತು. ಉಡುಪಿ ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್‌ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶಿಕ್ಷಕರು ಬದಲಾಗುವ ಪರಿಸ್ಥಿತಿಯಲ್ಲಿ ತಮ್ಮನ್ನು ಒಗ್ಗಿಸಿಕೊಂಡು ಸೂಕ್ತ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ಉಡುಪಿ ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್‌ ಕರೆ ನೀಡಿದರು.ಅವರು ರೊಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಉಡುಪಿ ಡಯಟ್ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಾ ಇದೆ. ಅದರ ಸಂಪೂರ್ಣ ಉಪಯೋಗ ಪಡೆಯುವಂತೆ ತಿಳಿಸಿದರು.ಸೋದೆ ವಾದಿರಾಜಮಠ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿ, ರೋಟರಿಯು ಇಂತಹ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಅಭಿನಂದಿಸಿ ಇದರ ಸಂಪೂರ್ಣ ಸದುಪಯೋಗ ಪಡೆಯುವಂತೆ ತಿಳಿಸಿದರು.ರೋಟರಿ ಅಧ್ಯಕ್ಷ ಗುರುರಾಜ ಭಟ್, ವಲಯ ಸೇನಾನಿ ಹೇಮಂತಕಾಂತ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಇನ್ನರ್ ವೀಲ್ ಅದ್ಯಕ್ಷೆ ಸುರೇಖ ಕಲ್ಕೂರ್ ಸ್ವಾಗತಿಸಿದರು. ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಮದಿಸಿದರು. ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ಶಬನಮ್ ಶೇಖ್, ಇಂಗ್ಲಿಷ್ ವಿಷಯದ ಬಗ್ಗೆ, ಗಣೇಶ್ ಶೆಟ್ಟಿಗಾರ್ ಗಣಿತದ ಬಗ್ಗೆ ಮತ್ತು ಡಯಟ್ ಉಪನ್ಯಾಸಕ ಯೋಗನಾರಸಿಂಹ ಶಿಕ್ಷಣದಲ್ಲಿ ತಂತ್ರಜ್ಞಾನದ ಉಪಯೋಗದ ಬಗ್ಗೆ ತರಬೇತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ರೂಪಾ ಕಿಣಿ ಮಾತನಾಡಿದರು.

ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಅನಂತರಾಮ ಬಲ್ಲಾಳ, ಸುಬ್ರಹ್ಮಣ್ಯ ಕಾರಂತ್, ಪದ್ಮಿನಿ ಭಟ್, ಶುಭ ಬಾಸ್ರಿ, ಸಾಧನ ಮುಂಡ್ಕೂರ್, ವನಿತಾ ಉಪಾಧ್ಯಾಯ, ಶಾಲಿನಿ ರಾಘವೇಂದ್ರ ಮತ್ತು ಕಡಿಯಾಳಿ ಶಾಲೆಯ ಆಡಳಿತ ಅಧಿಕಾರಿ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು.