ಸಾರಾಂಶ
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಾಲಾ ಸಭಾಂಗಣದಲ್ಲಿ ನಡೆದ ತಮ್ಮ 70ನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಶಿಕ್ಷಕರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಕಾಟಚಾರಕ್ಕೆ ಮಕ್ಕಳಿಗೆ ಪಾಠ ಪ್ರವಚನ ನೀಡಿದರೆ ಸಾಲದು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಟ್ಟು ಪಾಠ ಪ್ರವಚನ ಬೋಧಿಸಬೇಕು ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಾಲಾ ಸಭಾಂಗಣದಲ್ಲಿ ನಡೆದ ತಮ್ಮ 70ನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಶಿಕ್ಷಕರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಕಾಟಚಾರಕ್ಕೆ ಮಕ್ಕಳಿಗೆ ಪಾಠ ಪ್ರವಚನ ನೀಡಿದರೆ ಸಾಲದು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.
ಪೋಷಕರು ಕೂಡ ತಮ್ಮ ಮಕ್ಕಳ ಕಲಿಕಾ ಗ್ರಹಿಕೆ ಬಗ್ಗೆ ಆಗಾಗ್ಗೆ ಶಿಕ್ಷಕರ ಜತೆ ಸಮಲೋಚನೆ ನಡೆಸಬೇಕು. ಪೋಷಕರು ಮತ್ತು ಶಿಕ್ಷಕರು ಪರಸ್ಪರ ಸಂಪರ್ಕದಲ್ಲಿರುಬೇಕು ಎಂದು ಸಲಹೆ ನೀಡಿದರು.ಸಂಸ್ಥೆ ಶಿಕ್ಷಕರು ತಮ್ಮ ಹುಟ್ಟುಹಬ್ಬ ಆಚರಿಸುತ್ತಿರುವ ವಿಚಾರ ತಿಳಿದು ಅವರಿಗೆ ಕರೆದು ಬುದ್ದಿ ಹೇಳಿದೆ. ಆದರೂ ನನ್ನ ಮೇಲೆ ಅಭಿಮಾನ ಇಟ್ಟು ಸಂಸ್ಥೆ ನೂರಾರು ಪುಟಾಣಿ ಮಕ್ಕಳ ಸಮ್ಮುಖದಲ್ಲಿ ನನ್ನ ಜನ್ಮ ದಿನವನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ಇದೇ ವೇಳೆ ಜೆ.ಎನ್.ರಾಮಕೃಷ್ಣೇಗೌಡರನ್ನು ಶಿಕ್ಷಕರು ಮತ್ತು ಸಿಬ್ಬಂದಿವರ್ಗ ಆತ್ಮೀಯವಾಗಿ ಅಭಿನಂದಿಸಿದರು. ಹಿರಿಯ ಪತ್ರಕರ್ತರಾದ ಬಿ.ಎಸ್.ಜಯರಾಮು, ಕುಮಾರಸ್ವಾಮಿ, ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ ಸೇರಿದಂತೆ ಶಿಕ್ಷಕವರ್ಗ ಹಾಗೂ ಸಿಬ್ಬಂದಿ ಇದ್ದರು.-----------
18ಕೆಎಂಎನ್ ಡಿ25ಪಾಂಡವಪುರ ಬಿಜಿಎಸ್ ಶಿಕ್ಷಣ ಸಂಸ್ಥೆ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಕರು ಜೆ.ಎನ್.ರಾಮಕೃಷ್ಣೇಗೌಡರನ್ನು ಅಭಿನಂದಿಸಿದರು.