ಸಾರಾಂಶ
-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿದ ಬಿಇಓ ಸಿಎಂ ತಿಪ್ಪೇಸ್ವಾಮಿ
-------ಕನ್ನಡಪ್ರಭ ವಾರ್ತೆ ಹಿರಿಯೂರು: ಶಿಕ್ಷಕರು ವೃತ್ತಿಪರತೆ ಹೆಚ್ಚು ಮಾಡಿಕೊಳ್ಳುವ ಕಡೆ ಮತ್ತು ಜ್ಞಾನ ವಿಸ್ತರಣೆಯ ಕಡೆಗೆ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ನಗರದ ಎ ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಒತ್ತಡದ ಬದುಕಿನ ನಡುವೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ನೀಡಬೇಕು. ನಮ್ಮ ಮನಸ್ಸನ್ನು ನಾವು ಮೊದಲು ಅರಿತರೆ ಮಾತ್ರ ವಿದ್ಯಾರ್ಥಿಗಳ ಮನಸ್ಸನ್ನು ಅರಿಯಲು ಸಾಧ್ಯವಾಗುತ್ತದೆ. ಇಂದಿನ ಜಂಜಾಟದ, ಅವಸರದ ಜೀವನ ಶೈಲಿಯಲ್ಲಿ ಶಿಕ್ಷಕರು ತಮ್ಮ ಮನಸ್ಸನ್ನು ಶಾಂತವಾಗಿ, ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳ ಬದುಕನ್ನು, ಭವಿಷ್ಯವನ್ನು ಬರೆಯಲು ಸಾಧ್ಯವಾಗುತ್ತದೆ. ನಾವು ಕಲಿತದ್ದನ್ನು ಮಾತ್ರ ಕಲಿಸಲು ಆಗುವುದರಿಂದ ಶಿಕ್ಷಕರು ಆಳವಾದ ಅಧ್ಯಯನ ಮತ್ತು ಜ್ಞಾನ ವೃದ್ಧಿಯ ಕಡೆ ಆಸಕ್ತಿ ವಹಿಸಬೇಕು. ಕೃಷ್ಣ ಜನ್ಮಾಷ್ಠಮಿಯ ದಿನದ ಈ ಕಾರ್ಯಕ್ರಮ ವಿಶೇಷವಾಗಿದ್ದು, ಶ್ರೀಕೃಷ್ಣ ಜಗದ ಮೊದಲ ಸಂವಹನಕಾರ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಈ ತಿಪ್ಪೇರುದ್ರಪ್ಪ, ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ನಾಯ್ಕ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಭಾಗ್ಯ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಸುಂದರ್ ರಾಜ್, ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ, ಎನ್ ಪಿ ಮಹೇಶ್, ಜಿ ಎಸ್ ಕಿರಣ್, ಬಿಜೆ ರಾಘವೇಂದ್ರಚಾರಿ, ಶಿವಲಿಂಗಪ್ಪ, ಮಂಜುನಾಥ್, ಹನುಮಂತರೆಡ್ಡಿ ಮುಂತಾದವರು ಹಾಜರಿದ್ದರು.
-----ಚಿತ್ರ 1,2 ನಗರದ ಎ ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಬಿಇಓ ಸಿಎಂ ತಿಪ್ಪೇಸ್ವಾಮಿ ಉದ್ಘಾಟಿಸಿ ಮಾತನಾಡಿದರು.