ಸಾರಾಂಶ
ಸದೃಢ ಸಮಾಜದ ಆಸ್ತಿಯಾದ ಮಕ್ಕಳಿಗೆ ವಿದ್ಯೆ, ಬುದ್ಧಿಯನ್ನೂ ಧಾರೆಯೆರೆದು ಅವರನ್ನು ಸರಿ ದಾರಿಗೆ ತಂದು ಸತ್ಪ್ರಜೆಗಳಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇಂತಹ ಶಿಕ್ಷಕರು ದೈಹಿಕವಾಗಿ ಮತ್ತು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಿದರೆ ಮಾತ್ರ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುಗೆ ನೀಡಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮದ್ದೂರು
ಶಿಕ್ಷಕರು ಬೋಧನೆ ಜೊತೆಗೆ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳೀರಯ್ಯ ಸೋಮವಾರ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ಪೂರ್ವಭಾವಿಯಾಗಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದೃಢ ಸಮಾಜದ ಆಸ್ತಿಯಾದ ಮಕ್ಕಳಿಗೆ ವಿದ್ಯೆ, ಬುದ್ಧಿಯನ್ನೂ ಧಾರೆಯೆರೆದು ಅವರನ್ನು ಸರಿ ದಾರಿಗೆ ತಂದು ಸತ್ಪ್ರಜೆಗಳಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇಂತಹ ಶಿಕ್ಷಕರು ದೈಹಿಕವಾಗಿ ಮತ್ತು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಿದರೆ ಮಾತ್ರ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುಗೆ ನೀಡಲು ಸಾಧ್ಯ ಎಂದರು.ಶಿಕ್ಷಕರು ತಮ್ಮ ದೈನಂದಿನ ಚಟುವಟಿಕೆ ಜೊತೆಗೆ ಕ್ರೀಡೆಗೂ ಕೆಲಕಾಲ ಮೀಸಲು ಇಡುವುದರಿಂದ ವೃತ್ತಿ ಜೊತೆಗೆ ಆರೋಗ್ಯವಂತ ವ್ಯಕ್ತಿಯಾಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ನಾಗೇಶ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ದೇವರಾಜು, ಬಡ್ತಿ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಂದ್ರ, ಜಿಲ್ಲಾ ಕಾರ್ಯದರ್ಶಿ ಶಂಕರೇಗೌಡ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಸತೀಶ್ ಕುಮಾರ್, ಯೋಗಾನಂದ, ರಾಮಚಂದ್ರ, ಶ್ರೀನಿವಾಸ್ ಕುಮಾರ್, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಕ್ರೀಡಾಕೂಟದಲ್ಲಿ ಅನುದಾನ, ಅನುದಾನ ರಹಿತ, ವಸತಿ, ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ನೂರಾರು ಶಿಕ್ಷಕರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.