ಶಿಕ್ಷಕರು ಹೊಸ ವಿಷಯಗಳ ಕುರಿತು ಬೋಧಿಸಿ: ಹಿರೇಮಠ

| Published : Mar 01 2024, 02:22 AM IST

ಸಾರಾಂಶ

ಬಸವಕಲ್ಯಾಣ ನಗರದ ಎಸ್.ಎಸ್.ಕೆ. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ಅಭಿವೃಧಿ ಕಾರ್ಯಗಾರ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಪ್ರಸ್ತುತ ಶಿಕ್ಷಣದಲ್ಲಿ ಐಸಿಟಿ ಲಕ್ಷಣಗಳು ಮತ್ತು ಉಪಯೋಗದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಐಸಿಟಿ ಉಪಯೋಗದಲ್ಲಿ ಹೇಗೆ ಮಹತ್ವ ಪಡೆದುಕೊಂಡಿದೆ ಎಂದು ಬಸವಕಲ್ಯಾಣದ ಎಂಜಿನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಸುವರ್ಣಲತಾ ಹಿರೇಮಠ ವಿವರಿಸಿದರು.

ನಗರದ ಎಸ್ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಫೆ.28ರಿಂದ 7 ದಿನಗಳ ಕಾಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಇಂದಿನ ಗಣಕಯಂತ್ರ ಯುಗದಲ್ಲಿ ಅದಕ್ಕೆ ಹೊಂದಿಕೊಂಡು ಮಕ್ಕಳಿಗೆ ಹೊಸ ಹೊಸ ಅಧ್ಯಯನಗಳ ಬಗ್ಗೆ ಪಾಠ ಹೇಳಿ ಕೊಡಬೇಕಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹುಮನಾಬಾದ ಸರ್ಕಾರಿ ಪದವಿ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸಂಪತ ಕುಮಾರಿ ಮಾತನಾಡಿ, ಐಸಿಟಿ ಉಪಯೋಗ ಮತ್ತು ಅದರ ದುಷ್ಟಪರಿಣಾಮಗಳನ್ನು ಕುರಿತು ಹಲವಾರು ಉದಾಹರಣೆಗಳ ಮೂಲಕ ಮಕ್ಕಳಿಗೆ ತಿಳಿಯುವಂತೆ ವಿವರಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಎವಲೆ ಮಾತನಾಡಿದರು. ಡಾ.ಶಿವಕುಮಾರ ಪಾಟೀಲರು ಸ್ವಾಗತಿಸಿದರು. ಗ್ರಂಥಪಾಲಕ ಸೂರ್ಯಕಾಂತ ನಾಸೆ, ಪ್ರೊ. ವಿಠೋಬಾ ಡೊಣ್ಣೇಗೌಡರು, ಪ್ರೋ. ಆರ್.ಡಿ. ಬಾಲಿಕಿಲೆ, ಪ್ರೊ.ಶಾಂತಕುಮಾರ ಬಿ., ಪ್ರೊ.ಲಕ್ಷ್ಮಿಬಾಯಿ ಬಿ., ಪ್ರೊ.ಸುರೇಶ ಎಚ್.ಆರ್.ಸನತ ರೆಡ್ಡಿ, ಶೀತಲ ರೆಡ್ಡಿ, ಕಲ್ಯಾಣಪ್ಪ.ಎನ್ ಹಾಗೂ ಶಿಕ್ಷಕೇತರ ಸಿಬ್ಬಂದಿ ವಿನಾಯಕ ಮೂಳ್ಳುರು, ಹೇಮರೆಡ್ಡಿ.ಎಲ್, ರಾಜಕುಮಾರ ಎಚ್. ಉಲ್ಲಾಸ ಬೋಕ್ಕೆ ಮತ್ತು ದತ್ತಾತ್ರಿ.ಎಮ್ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.