ರಾಮನಗರ: ಜಿಲ್ಲೆಯಲ್ಲಿ ಸೋಮವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಹೂ ನೀಡಿ ಬರ ಮಾಡಿಕೊಂಡರು.
ಇಷ್ಟು ದಿನ ಬೇಸಿಗೆ ರಜೆಯಲ್ಲಿ ಆಡಿಕೊಂಡಿದ್ದ ಮಕ್ಕಳು ಸೋಮವಾರ ಶಾಲಾ ಸಮವಸ್ತ್ರ ಧರಿಸಿ, ಸ್ನೇಹಿತರೊಂದಿಗೆ ಗುಂಪುಗುಂಪಾಗಿ ಶಾಲೆಗೆ ಆಗಮಿಸಿದರು. ಸಣ್ಣ ಮಕ್ಕಳು ಸಹೋದರರೊಂದಿಗೆ ಹೆಜ್ಜೆ ಹಾಕಿದರು. ಜಿಲ್ಲೆಯ ಕೆಲವೆಡೆ ಶಾಲೆಗಳಲ್ಲಿ ಸಾರ್ವಜನಿಕರು ಸಿಹಿ ಹಂಚಿ, ಹಬ್ಬದ ರೀತಿಯಲ್ಲಿ ಬರ ಮಾಡಿಕೊಂಡರು. ಸೋಮವಾರ ಬೆಳಗ್ಗೆ ಶಾಲಾ ಆವರಣದಲ್ಲಿ ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಶೃಂಗಾರ ಮಾಡಲಾಗಿತ್ತು.ಪಠ್ಯಪುಸ್ತಕ - ಸಮವಸ್ತ್ರ ವಿತರಣೆ:ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಶಾಲೆಗಳಲ್ಲಿ ಮಧ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ವಿತರಿಸಲಾಯಿತು. ಶಾಲೆಯ ಸುತ್ತಮುತ್ತಲಿನ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪ್ರತಿನಿಧಿಗಳು ಪಾಲ್ಗೊಂಡು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.
(ಇದನ್ನು ಬೇರೆಯೆ ಸುದ್ದಿ ಮಾಡಿ)ವಿಶೇಷತೆಗೆ ಸಾಕ್ಷಿಯಾದ ಕೇತಗಾನಹಳ್ಳಿ ಸರ್ಕಾರಿ ಶಾಲೆಗಳು
ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಅಲಂಕರಿಸಿದ ಬಂಡಿಯಲ್ಲಿ ಕರೆತಂದು ಸ್ವಾಗತ ಕೋರಲಾಯಿತು. ಶಾಲೆಗಳ ಮುಖ್ಯ ದ್ವಾರವನ್ನು ತಳಿರು-ತೋರಣಗಳು ಮತ್ತು ಆಕರ್ಷಕ ರಂಗೋಲಿಯಿಂದ ಶೃಂಗರಿಸಲಾಗಿತ್ತು. ಶಾಲೆಗೆ ಆಗಮಿಸಿದ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು ಸಿಹಿ ಹಂಚಿ, ಗುಲಾಬಿ ಹೂವು ನೀಡಿ, ಹಣೆಗೆ ತಿಲಕವಿಟ್ಟು ಹಬ್ಬದ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಬಿಇಒ ಪಿ.ಸೋಮಲಿಂಗಯ್ಯ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲದೆ ಪೋಷಕರ ಜವಾಬ್ದಾರಿಯೂ ಅತಿ ಮುಖ್ಯ. ಮನೆಯಲ್ಲಿ ಮಕ್ಕಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಮಕ್ಕಳ ಹಾಜರಾತಿ, ಶೈಕ್ಷಣಿಕ ಪ್ರಗತಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಹಾಗೂ ಶಾಲೆ ಮೂಲ ಸೌಕರ್ಯಗಳ ಕುರಿತು ಪೋಷಕರು ಮತ್ತು ಶಿಕ್ಷಕರ ನಡುವೆ ಮುಕ್ತ ಹಾಗೂ ಸುದೀರ್ಘ ಚರ್ಚೆ ನಡೆಯಿತು. ಶಾಲೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಪೋಷಕರು ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ಹಂಚಿಕೊಂಡರು.ಈ ವೇಳೆ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಗಣ್ಯರು, ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಕೋಟ್..............ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ವಿನೂತನವಾಗಿ ಮಕ್ಕಳನ್ನು ಬಂಡಿಗಳಲ್ಲಿ ಕರೆತರುವುದು, ಗುಲಾಬಿ ಹೂ, ಸಿಹಿ ವಿತರಣೆ ಮಾಡಿ ಮಕ್ಕಳನ್ನು ಸ್ವಾಗತಿಸಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಮಾಡಲಾಗಿದೆ. ಶಾಲಾ ಪ್ರಾರಂಭೋತ್ಸವ ಜೊತೆಗೆ ದಾಖಲಾತಿ ಆಂದೋಲನ, ಪೋಷಕರು ಮತ್ತು ಶಿಕ್ಷಕರ ಪ್ರಥಮ ಸಭೆಯೂ ಯಶಸ್ವಿಯಾಗಿ ನಡೆದಿದೆ.
- ಸ್ವಾಮಿ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಕೋಟ್ ...............
2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಸೋಮವಾರ ಆರಂಭಗೊಂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಪ್ರತಿಯೊಂದು ಶಾಲೆಯು ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಬರ ಮಾಡಿಕೊಂಡಿತು. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂವು, ಸಿಹಿ ಹಂಚಲಾಯಿತು.-ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ
1ಕೆಆರ್ ಎಂಎನ್ 2,3,4,5.ಜೆಪಿಜಿವಿವಿಧ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿಕೊಳ್ಳಲಾಯಿತು.