ಹಲಗೂರು:
ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಸೋಮವಾರ ಆರಂಭವಾದ ಹಿನ್ನೆಲೆಯಲ್ಲಿ ಶಾಲೆಗೆ ಪ್ರಥಮ ಬಾರಿಗೆ ಸೇರ್ಪಡೆಯಾದ ಮಕ್ಕಳು, ಹಳೆಯ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಚಾಕಲೇಟು ಮತ್ತು ಗುಲಾಬಿ ಹೂವು ನೀಡಿ ಸ್ವಾಗತ ಕೋರಿದರು.ಮುಖ್ಯ ಶಿಕ್ಷಕಿ ಶಕುಂತಲಾ ಮಾತನಾಡಿ, ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಆಸಕ್ತಿ ವಹಿಸುತ್ತಿರುವ ಪೋಷಕ ವೃಂದಕ್ಕೆ ನಾವು ಆಭಾರಿ. ಶಾಲೆಯಲ್ಲಿ ಉನ್ನತ ಶಿಕ್ಷಕರಿಂದ ಉತ್ತಮ ಬೋಧನೆ ದೊರೆಯುತ್ತಿರುವುದರಿಂದ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಮೇ 18ರಿಂದ ದಾಖಲಾತಿ ಪ್ರಾರಂಭಿಸಿದ್ದೇವೆ. ಈಗಾಗಲೇ ಆಂಗ್ಲ ಮಾಧ್ಯಮಕ್ಕೆ 79 ಮಕ್ಕಳು, ಕನ್ನಡ ಮಾಧ್ಯಮಕ್ಕೆ 70 ಮಕ್ಕಳು ದಾಖಲಾಗಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ ಸರಿ ಸುಮಾರು 550 ಮಕ್ಕಳಿದ್ದಾರೆ ಎಂದರು.ನಂತರ ಶಾಲೆ ಎಸ್‌ಟಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರೊಂದಿಗೆ ಪೋಷಕರೆಲ್ಲರೂ ಬಂದು ಸಭೆ ನಡೆಸಿದರು. ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದ್ದು, ಶೈಕ್ಷಣಿಕ ಪ್ರಗತಿಗೆ ಸಹಕರಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಬಿಇಒ ಉಮಾ ಅವರನ್ನು ಅಭಿನಂದಿಸಿದರು.
ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸಿಹಿ ಊಟ, ಬಾಳೆಹಣ್ಣು ನೀಡಲಾಯಿತು. ಈ ವೇಳೆ ಎಂ ಕೃಷ್ಣೇಗೌಡ, ಲಿಂಗೇಗೌಡ, ಸಿದ್ದರಾಜು, ಎಂ.ಬಸವರಾಜು, ಡಿ.ಪಿ.ಮಹೇಶ್, ಹನುಮಯ್ಯ, ಮಂಜುಳಾ, ಸಹನಾ, ಯಮುನಾ ಸೇರಿದಂತೆ ಇತರರು ಇದ್ದರು.
ನಾಳೆ ರಾಗಿ ಲಕ್ಷ್ಮಣಯ್ಯ ಸ್ಮಾಕ ಉಪನ್ಯಾಸ, ಸನ್ಮಾನ
ಮಂಡ್ಯ: ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ೨೯ ಮತ್ತು ೩೦ನೇ ವರ್ಷದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ, ಸನ್ಮಾನ ಸಮಾರಂಭ ಜೂ.೩ರಂದು ಬೆಳಗ್ಗೆ ೧೦.೩೦ಕ್ಕೆ ತಾಲೂಕಿನ ವಿ.ಸಿ.ಫಾರಂನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಸ್ಯತಳಿ ಕೃಷಿ ವಿಜ್ಞಾನಿ ಡಾ.ಶರಣ ಬಸವೇಶ್ವರ ಅಂಗಡಿ ಬೆಳೆ ಸುಧಾರಣೆ ಮತ್ತು ರೈತ ಸಮೃದ್ಧಿ ಕುರಿತು ಉಪನ್ಯಾಸ ನೀಡುವರು. ಪತ್ರಕರ್ತ ಕೆ.ನರಸಿಂಹಮೂರ್ತಿ ಕೋಲ್ಮಿಂಚು ಪುಸ್ತಕ ಬಿಡುಗಡೆ ಮಾಡುವರು. ಪುಸ್ತಕದ ಕರ್ತೃ ಪ್ರೊ.ಎಂ.ನಾರಾಯಣಸ್ವಾಮಿ ಉಪಸ್ಥಿತರಿರುವರು.ಅಧ್ಯಕ್ಷತೆಯನ್ನು ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಕೆ.ಬೋರಯ್ಯ ವಹಿಸುವರು. ಟಿ.ಎಂ.ಅಪರ್ಣ, ಆರ್.ಸ್ಫೂರ್ತಿ ಅವರಿಗೆ ಕೆ.ಕೆ.ಅವಧಾನಿ ವಿದ್ಯಾರ್ಥಿ ಪ್ರಶಸ್ತಿ, ಚಲುವಯ್ಯ, ತನುಜಾ, ಎಂ.ಪುಟ್ಟಮಲ್ಲೇಗೌಡ, ಕೆ.ಎ.ಮಂಜೇಗೌಡ ಅವರಿಗೆ ರೈತ ಪ್ರಶಸ್ತಿ, ಆರ್.ಸಂತೋಷ್‌ಕುಮಾರ್ ಅವರಿಗೆ ರೈತ ಹಾಲು ಪ್ರಶಸ್ತಿ ನೀಡಿ ಗೌರವಿಸಲಾಗುವುದು.