ಕಡೂರುಎಸ್ಎಸ್.ಎಲ್ .ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಫಲಿತಾಂಶ ಶೇ. 100 ರಷ್ಟು ಬರುವಂತೆ ಶಿಕ್ಷಕರು ಶ್ರಮ ಹಾಕುವ ಮೂಲಕ ಇಲಾಖೆ ಆದೇಶದಂತೆ ಕ್ರಮವಹಿಸಬೇಕು ಎಂದು ಡಿಡಿಪಿಐ ತಿಮ್ಮರಾಜು ಹೇಳಿದರು,

ಸರ್ಕಾರಿ ಫ್ರೌಢಶಾಲೆಯಲ್ಲಿ (ಜಿಜೆಸಿ) ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣದ ಫಲಿತಾಂಶ ಸುಧಾರಣಾ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಕಡೂರು

ಎಸ್ಎಸ್.ಎಲ್ .ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಫಲಿತಾಂಶ ಶೇ. 100 ರಷ್ಟು ಬರುವಂತೆ ಶಿಕ್ಷಕರು ಶ್ರಮ ಹಾಕುವ ಮೂಲಕ ಇಲಾಖೆ ಆದೇಶದಂತೆ ಕ್ರಮವಹಿಸಬೇಕು ಎಂದು ಡಿಡಿಪಿಐ ತಿಮ್ಮರಾಜು ಹೇಳಿದರು,

ಪಟ್ಟಣದ ಸರ್ಕಾರಿ ಫ್ರೌಢಶಾಲೆಯಲ್ಲಿ (ಜಿಜೆಸಿ) ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣದ ಫಲಿತಾಂಶ ಸುಧಾರಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ನಮಗೆ ಹಿರಿಯ ಅಧಿಕಾರಿಗಳು ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗತ್ಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ನೀಡಿದ್ದಾರೆ. ಅದಕ್ಕೆ ಪೂರಕ ವಾಗಿ ನಿಮಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಬ್ಲೂಪ್ರಿಂಟ್ ನೀಡಿರುವುದು ನಮಗೆ ವರದಾನವಾಗಿದೆ. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಾದ ನೀವು ಒಟ್ಟಾರೆ ಪರೀಕ್ಷೆ ಫಲಿತಾಂಶ ಶೇ./ 100 ರಷ್ಟು ಬರುವಂತೆ ಕ್ರಮ ಕೈಗೊಂಡು. ಇಲಾಖೆ ಆದೇಶದಂತೆ ಒಂದು ಮಕ್ಕಳು ಫೇಲಾಗದಂತೆ ಕ್ರಮ ವಹಿಸಬೇಕು. ನಮ್ಮಲ್ಲಿ ವೀಕ್ ಇರುವ ಮಕ್ಕಳು 50 ಪ್ಲಸ್ ಫಲಿತಾಂಶ ಬರುವಂತೆ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆ 8ನೇ ಸ್ಥಾನದಲ್ಲಿತ್ತು. ಈ ಭಾರಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮುಖೇನ ನೂರರಷ್ಟು ಫಲಿತಾಂಶ ಬರಲು ಶ್ರಮ ಹಾಕಬೇಕು ಎಂದರು. ಪರೀಕ್ಷೆಯಲ್ಲಿ ಮಕ್ಕಳು ಸುಲಭವಾಗಿ 13 ಅಂಕಗಳನ್ನು ಪಡೆವ ಪ್ರಶ್ನೆಗಳನ್ನು ತಯಾರಿಸಬೇಕು. ಹಾಗಾಗಿ ಇಲಾಖೆ ಆದೇಶದಂತೆ ಶಿಕ್ಷಕರು ಯಾವ ವಿಷಯದಲ್ಲಿ ವಿದ್ಯಾರ್ಥಿ ಹಿಂದಿದ್ದಾನೆಂದು ತಿಳಿಯಬೇಕು. ಅಲ್ಲದೆ ವಿಷಯಗಳ ಕ್ರೂಢೀಕರಣಕ್ಕಾಗಿ ಈ ತರಬೇತಿಯಲ್ಲಿ ಗಣಿತ, ವಿಜ್ಞಾನದ ಮಾದರಿ ನೀಡಲಾಗುತ್ತಿದೆ. ಸುಲಭವಾಗಿ ಬರೆಯುವಂತೆ ಪ್ರಶ್ನೆ ತಯಾರು ಮಾಡಿ ವಿದ್ಯಾರ್ಥಿ ಫೇಲಾಗದಂತೆ ಅಭ್ಯಾಸ ಮಾಡಿಸಿ ಎಂದರು. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಲೋಕೇಶ್ ಮಾತನಾಡಿ, ಮಕ್ಕಳನ್ನು ಶಿಕ್ಷಕರು ಮೊದಲು ನಗು ಮೊಗದಿಂದ ಮಾತನಾಡಿಸಿದಲ್ಲಿ ಆ ಮಗು ಹೆದರಿಕೆ ಬಿಟ್ಟು ನಿಮ್ಮ ಜೊತೆ ಮಾತನಾಡಲು ಇಷ್ಟಪಡುತ್ತದೆ. ಹಾಗಾಗಿ ಬುದ್ಧಿವಂತ ಮಕ್ಕಳಿ ಗಿಂತ ಎಲ್ಲರನ್ನು ಸಮಾನವಾಗಿ ಕಾಣುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿ ಉತ್ತಮ ಫಲಿತಾಂಶಕ್ಕೆ ಅಗತ್ಯವಿರುವ ಅಂಕಗಳನ್ನು ನೀಡಲೇಬೇಕು. ಇದರಿಂದ ಶೇಕಡವಾರು ಫಲಿತಾಂಶ ಹೆಚ್ಚಳವಾಗಲಿದೆ ಎಂದರು.

ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಪ್ಪ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗುವಲ್ಲಿ ನಿಮ್ಮ ಪಾತ್ರ ಕೂಡ ಮುಖ್ಯ ವಾಗಿದೆ. ಹಾಗಾಗಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಖುಷಿಯಾಗಿ ಬರುವಂತ ಕೆಲಸ ಮಾಡಬೇಕು. ಆತ. ದಡ್ಡ ಎಂದು ಹೇಳುವು ದಕ್ಕಿಂತ ಅಂತವರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಪರೀಕ್ಷೆ ಎದುರಿಸುವಂತೆ ಮಾಡಬೇಕು. ರಾಜ್ಯ ಸರ್ಕಾರ ನೀಡಿರುವ ಸೂಚನೆಯಂತೆ ಉತ್ತಮ ಫಲಿತಾಂಶ ಬರುವಂತೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಕಡೂರು ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಎಲ್ಲರೂ ಶ್ರಮ ಹಾಕೋಣ ಎಂದು ಹೇಳಿದರು. ಕಾರ್ಯಾಗಾರದಲ್ಲಿ ನೋಡಲ್ ಅಧಿಕಾರಿ ಶಿವಕುಮಾರ್, ಕಡೂರು ಸರಕಾರಿ ಫ್ರೌಢಶಾಲೆ (ಜಿಜೆಸಿ) ಪ್ರಾಂಶುಪಾಲರಾದ ಎಚ್.ಆರ್. ರೇಖಾ, ತರಬೇತುದಾರರಾದ ನಾಗರಾಜ್, ಅಶೋಕ್, ವಿಜಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

9ಕೆಕೆಡಿಯು1.

ಕಡೂರು ಪಟ್ಟಣದ ಸರಕಾರಿ ಫ್ರೌಢಶಾಲೆಯಲ್ಲಿ (ಜಿಜೆಸಿ) ಪ್ರೌಢಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಿಕೆಯ ಕಾರ್ಯಾಗಾರದಲ್ಲಿ ಡಿಡಿಪಿಐ ತಿಮ್ಮರಾಜು ಮಾತನಾಡಿದರು.