ಸಾರಾಂಶ
ಶಿಕ್ಷಕ ವೃತ್ತಿ ಜಗತ್ತಿನಲ್ಲಿ ಸಾರ್ವಕಾಲಿಕವಾಗಿ ಗೌರವಿಸಲ್ಪಡುತ್ತದೆ. ಇದ್ದಾಗಲೂ ಶಿಕ್ಷಕ, ನಿವೃತ್ತಿಯಾಗಲೂ ಶಿಕ್ಷಕ, ನಾಳೆ ನಾವು ಈ ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಶಿಕ್ಷಕ ಎಂದು ಸ್ಮರಿಸುವ ವೃತ್ತಿಯದು ಎಂದು ಬಾಗಲಕೋಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಬಡದಾನಿ ಹೇಳಿದರು.
ಶಿಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿಕ್ಷಕ ವೃತ್ತಿ ಜಗತ್ತಿನಲ್ಲಿ ಸಾರ್ವಕಾಲಿಕವಾಗಿ ಗೌರವಿಸಲ್ಪಡುತ್ತದೆ. ಇದ್ದಾಗಲೂ ಶಿಕ್ಷಕ, ನಿವೃತ್ತಿಯಾಗಲೂ ಶಿಕ್ಷಕ, ನಾಳೆ ನಾವು ಈ ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಶಿಕ್ಷಕ ಎಂದು ಸ್ಮರಿಸುವ ವೃತ್ತಿಯದು ಎಂದು ಬಾಗಲಕೋಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಬಡದಾನಿ ಹೇಳಿದರು.ತಾಲೂಕಿನ ಮಲ್ಲಾಪುರ ಪು.ಕೇ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶಿಕ್ಷಕ ಎಚ್.ಎಸ್. ಪೂಜಾರಿ ಅವರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಅತ್ಯಂತ ಕ್ರಿಯಾಶೀಲ ಶಿಕ್ಷಕ ಎಚ್.ಎಸ್. ಪೂಜಾರ ಅವರಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಈಗ ಸರಕಾರಿ ನೌಕರಿ ಪಡೆಯದಿದ್ದರೂ ಕೂಡ ಉತ್ತಮ ಸಂಸ್ಕಾರವಂತರಾಗಿ, ವಿದ್ಯಾವಂತರಾಗಿ ಭವಿಷ್ಯ ರೂಪಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರು, ಯಾವುದೇ ಕಠಿಣ ಕೆಲಸವಿದ್ದರೂ ಅದನ್ನು ಮಾಡಿಯೇ ತಿರುತ್ತೇನೆಂಬ ಹಠ ಅವರಲ್ಲಿತ್ತು. ಗ್ರಾಮದಲ್ಲಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಕೀರ್ತಿ ಇವರದು. ಗ್ರಾಮಸ್ಥರೊಂದಿಗೆ ಒಡನಾಟ, ಮಕ್ಕಳೊಂದಿಗೆ ಮಕ್ಕಳಾಗಿ ಪ್ರೀತಿ, ವಿಶ್ವಾಸವನ್ನು ಗಳಿಸಿ ಅಚ್ಚುಮೆಚ್ಚಿನ ಮೇಷ್ಟ್ರು ಆಗಿದ್ದಾರೆ ಎಂದು ಬಣ್ಣಿಸಿದರು.
ಶಾಲೆಯ ಮುಖ್ಯ ಶಿಕ್ಷಕ ವೈ.ಡಿ. ಕಿರಸೂರ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಣಪತಿ ಲಾಗಲೋಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಬೀರಣ್ಣವರ, ಬಾಗಲಕೋಟೆ ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ ಪದರಾ, ಶಾಲಾ ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))