ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು : ಜಿ.ಆರ್. ದಿವಾಕರ್‌

| Published : Sep 25 2024, 12:54 AM IST

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು : ಜಿ.ಆರ್. ದಿವಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ವೃತ್ತಿ ಪವಿತ್ರ ವೃತ್ತಿಯಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಆರ್. ದಿವಾಕರ್‌ ತಿಳಿಸಿದರು. ಶನಿವಾರ ಸಂಜೆ ರೋಟರಿ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್‌ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ನರಸಿಂಹರಾಜಪುರ ತಾಲೂಕಿನ ಶಿಕ್ಷಕರಾದ ಗೀತಾ ಹಾಗೂ ಶುಭ ಅವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದು ನಮ್ಮ ತಾಲೂಕಿಗೆ ಹೆಮ್ಮೆ ಎಂದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಿಕ್ಷಕರ ವೃತ್ತಿ ಪವಿತ್ರ ವೃತ್ತಿಯಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಆರ್. ದಿವಾಕರ್‌ ತಿಳಿಸಿದರು.

ಶನಿವಾರ ಸಂಜೆ ರೋಟರಿ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್‌ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ನರಸಿಂಹರಾಜಪುರ ತಾಲೂಕಿನ ಶಿಕ್ಷಕರಾದ ಗೀತಾ ಹಾಗೂ ಶುಭ ಅವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದು ನಮ್ಮ ತಾಲೂಕಿಗೆ ಹೆಮ್ಮೆ ಎಂದರು.

ಇಂಜಿನಿಯರ್‌ ರಜತ್‌ ಭದ್ರಾ ಡ್ಯಾಂ ಕುರಿತು ಉಪನ್ಯಾಸ ನೀಡಿ, 1960 ರ ಸುಮಾರಿಗೆ ಪ್ರಾರಂಭವಾದ ಭದ್ರಾ ಡ್ಯಾಂ ಆಣೆಕಟ್ಟು ನಿರ್ಮಿಸಲು ಆಗಿನ ಕಾಲದಲ್ಲೇ ₹ 520 ಕೋಟಿ ವೆಚ್ಚವಾಗಿತ್ತು. ಈ ಡ್ಯಾಂ ನಿರ್ಮಾಣವಾದಾಗ 27 ಸಾವಿರ ಎಕ್ರೆ ಮುಳುಗಡೆಯಾಗಿದೆ. 4 ಲಕ್ಷ ಎಕ್ರೆಗೆ ನೀರಾವರಿಯಾಗಿದೆ ಎಂದರು.

ನಿವೃತ್ತ ಇಂಜಿನಿಯರ್ ಎಸ್‌.ಟಿ.ಗೌಡ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ವೃತ್ತಿಯಲ್ಲಿ ವಿಶ್ವಾಸ, ಬದ್ಧತೆ, ಮತ್ತು ಶಿಸ್ತಿನಿಂದ ನಮ್ಮ ಆತ್ಮ ಒಪ್ಪುವಂತೆ ಕಾರ್ಯ ನಿರ್ವಹಿಸಿದರೆ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ. ಸರ್‌ ಎಂ. ವಿಶ್ವೇಶರಯ್ಯ ಅವರ ಜನ್ಮ ದಿನವನ್ನು ಇಂಜಿನಿಯರ್ಸ್‌ ಡೇ ಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶುಭ, ಗೀತಾ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ರೋಟರಿ ಸದಸ್ಯರಾದ ಎಸ್‌.ಎಸ್‌.ಶಾಂತಕುಮಾರ್‌, ಪಿ.ಕೆ.ಬಸವರಾಜಪ್ಪ, ಮುತ್ತಿನಕೊಪ್ಪ ಸುಂದರೇಶ್‌, ಬಿ.ಟಿ.ವಿಜಯಕುಮಾರ್‌, ಎಸ್.ಎನ್‌.ಲೋಕೇಶ್‌, ಎನ್‌.ಕೆ.ಕಿರಣ್‌ ಮಾತನಾಡಿದರು.

ಸಭೆಯಲ್ಲಿ ರೋಟರಿ ಸದಸ್ಯರಾದ ಇ.ಸಿ.ಜೋಯಿ, ಜಿ.ಎ.ಶ್ರೀಕಾಂತ್‌, ಅಭಿಷೇಕ್‌, ನವೀನ್‌, ಕೆ.ಎಸ್‌.ರಾಜಕುಮಾರ್‌ ಮತ್ತಿತರರು ಇದ್ದರು.