ಸಾರಾಂಶ
ದಾಬಸ್‍ಪೇಟೆ: ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದುದು. ಕಠಿಣ ಪರಿಶ್ರಮ, ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸಿ ಅವರ ಸಾಧನೆಯನ್ನು ಸಂಭ್ರಮಿಸುವ ಶ್ರೇಷ್ಠ ಶಿಕ್ಷಕರಾಗಬೇಕು ಎಂದು ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಯಂಟಗಾನಹಳ್ಳಿ ಪ್ರೌಢಶಾಲೆಯ 1996- 97ನೇ ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.29 ವರ್ಷದ ನಂತರ ಶಿಕ್ಷಕರನ್ನು ಗೌರವಿಸುವ ಶ್ರೇಷ್ಠ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳು ಮುಂದಾಗಿರುವುದು ಶ್ಲಾಘನೀಯವಾದುದು, ಈಗ ಶಿಕ್ಷಕರು ಪೆಟ್ಟು ಕೊಟ್ಟರೆ ನಾಳೆ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿ ಇಂದಿನ ಶಿಕ್ಷಣದಲ್ಲಿ ಇದೆ. ಗುರುವಿಗೆ ಗೌರವ ನೀಡದ ಯಾವುದೇ ವ್ಯಕ್ತಿ ಸಾಧಕನಾಗುವುದಿಲ್ಲ ಎಂದರು.
247 ಕೋಟಿ ರು. ಅನುದಾನ: ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಡಾ.ಹುಲಿಕಲ್ ನಟರಾಜು ಮಾತನಾಡಿ, ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಮಾಡಲು ಸರ್ಕಾರ 247 ಕೋಟಿ ರು. ಅನುದಾನ ನೀಡಿದೆ. ಯಂಟಗಾನಹಳ್ಳಿ ಶಾಲೆಗೆ ಉತ್ತಮ ಪ್ರಯೋಗಾಲಯವನ್ನು ನೀಡುವ ಕೆಲಸ ಮಾಡುತ್ತೇನೆ. ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗದರ್ಶಕರು, ಆದರ್ಶವಾಗಬೇಕಾಗಿದೆ ಎಂದರು.ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗಹನುಮಯ್ಯ, ನಿರ್ದೇಶಕ ಸಂಪತ್, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ಶೋಭಾ ಜಯರಾಮು, ಪವಿತ್ರ ಚಿಕ್ಕಹನುಮೇಗೌಡ, ನಿವೃತ್ತ ಶಿಕ್ಷಕ ಭೀಮರಾಜು, ವಿಎಸ್‍ಎಸ್‍ಎನ್ ಅಧ್ಯಕ್ಷ ಹನುಮೇಗೌಡ, ಹಳೆ ವಿದ್ಯಾರ್ಥಿಗಳಾದ ಮುನಿರಾಜು, ಚಿಕ್ಕಹನುಮೇಗೌಡ, ಸಂತೋಷನಾಯಕ್, ಗಂಗೇಗೌಡ, ನರಸಿಂಹಮೂರ್ತಿ, ಹನುಮಂತರಾಜು, ಸಿದ್ದರಾಜು, ಸುಕನ್ಯಾ, ಪಾರ್ವತಮ್ಮ, ಶೋಭ ಗಿರೀಶ್, ಚನ್ನೇಗೌಡ ಮತ್ತಿತರರು ಭಾಗವಹಿಸಿದ್ದರು.