ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು: ಡಾ.ಅಭಿನವ ಬಸವಲಿಂಗ ಶಿವಾಚಾರ್ಯರು

| Published : Aug 08 2024, 01:35 AM IST

ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು: ಡಾ.ಅಭಿನವ ಬಸವಲಿಂಗ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವೂ ಸಮಾಜಕ್ಕೆ ನೀಡಿ ಸಮಾಜದ ಋಣ ತೀರಿಸಬೇಕು ಎಂದು ನಾಗಣಸೂರ ತುಪ್ಪಿನ ಮಠದ ಡಾ.ಅಭಿನವ ಬಸವಲಿಂಗ ಶಿವಾಚಾರ್ಯರು ಕುಡಗನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ವಯೋ ನಿವೃತ್ತಿ ಸಮಾರಂಭದಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಯುವ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ನಾಗಣಸೂರ ತುಪ್ಪಿನ ಮಠದ ಡಾ.ಅಭಿನವ ಬಸವಲಿಂಗ ಶಿವಾಚಾರ್ಯರು ಹೇಳಿದರು.

ತಾಲೂಕಿನ ಕುಡಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಚಂದ್ರಕಾಂತ ಧೂಳಪ್ಪ ಸಪಳಿಯವರ ವಯೋನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವೂ ಸಮಾಜಕ್ಕೆ ನೀಡಿ ಸಮಾಜದ ಋಣ ತೀರಿಸಬೇಕು. ಶಿಕ್ಷಣ ಜೊತೆಗೆ ಸಂಸ್ಕಾರ ಬಹಳ ಮುಖ್ಯ ಎಂದು ಹೇಳಿದರು.

ಮಾಶಾಳದ ಮರುಳರಾಧ್ಯ ಶಿವಾಚಾರ್ಯರು ಮಾತನಾಡಿ, ಜ್ಞಾನ ಮತ್ತು ಕೌಶಲ್ಯ ಒಂದೇ. ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ ಜೊತೆಗೆ ಶಿಸ್ತು ಓದುವ ಹವ್ಯಾಸವನ್ನು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಮಕ್ಕಳಲ್ಲಿ ಸಂಸ್ಕಾರಗಳನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿ ಉಜ್ವಲ ಭವಿಷ್ಯ ಕಂಡುಕೊಂಡು ಸಮಾಜದಲ್ಲಿ ಮಕ್ಕಳಿಗೆ ಉನ್ನತ ಹುದ್ದೆಗೆ ಪ್ರೇರಣೆಯೇ ಶಿಕ್ಷಕರು. ಹೀಗಾಗಿ ಶಿಕ್ಷಕರ ಸೇವೆ ಅಮೂಲ್ಯವಾದದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಅಳ್ಳಗಿ, ಉಪಾಧ್ಯಕ್ಷ ಶಾವರಸಿದ್ದ ಜಮಾದಾರ, ಸದಸ್ಯರಾದ ಕುಮಾರಗೌಡ ಪಾಟೀಲ, ರುಕ್ಮಿಣಿ ಸಿಂಗೆ ಮುಖಂಡರಾದ ಶಂಕರಗೌಡ ಪಾಟೀಲ, ಶರಣಬಸಪ್ಪ ಅಳ್ಳಗಿ, ಉಮೇಶಗೌಡ ಬಿರಾದಾರ, ಪ್ರಭುಲಿಂಗ ಕೊಟ್ನಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಉಪಾಧ್ಯಕ್ಷ ಪರಮೇಶ್ವರ ದೇಸಾಯಿ, ಜಗದೇವಪ್ಪ ಕೋರಳ್ಳಿ, ತಾಲೂಕಾಧ್ಯಕ್ಷ ಗಾಂಧಿ, ದಫೇದಾರ ಸಂಗಮನಾಥ, ಮ್ಯಾಳೇಶಿ ಸಂಜೀವ, ಬಗಲಿ ಹೈದರಸಾಬ ಚೌಧರಿ, ಮಹೇಶ ಅಂಜುಟಗಿ, ಶೋಭರಾಜ ಮ್ಯಾಳೇಶಿ, ಅನ್ಸರ್‌ಸಾಬ ಜಮಾದಾರ, ಶಿವಾನಂದ ದ್ಯಾಮಗೋಳ ಸೇರಿದಂತೆ ಶಿಕ್ಷಕರಾದ ಭೀಮಣ್ಣ ವಾಯಿ, ಮಲ್ಲಿಕಾರ್ಜುನ ವಾಲಿ, ಬಾಬುರಾವ ಆಲೂರ, ಪ್ರಕಾಶ ಮಸಳಿ ಇತರರಿದ್ದರು.