ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಶಿವ ಶರಣ ವಚನಗಳನ್ನು ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಮನೆಯಲ್ಲಿ ಬೋಧಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ ಮನವಿ ಮಾಡಿದರು. ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಕ್ಕನ ಬಳಗ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ, ಸಿದ್ದಗಂಗಾ ಮಠದ ಲಿಂಗಕ್ಯ ಡಾ. ಶಿವಕುಮಾರ ಸ್ವಾಮಿ ಹಾಗೂ ಕೆರಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶರಣ ಪರಂಪರೆಯಲ್ಲಿ ಶರಣ ವಚನಗಳು ಇಂದಿಗೂ ಅನುಕರಣಿಯವಾಗಿವೆ. ವಿಶ್ವಗುರು ಶ್ರೀ ಬಸವೇಶ್ವರ ಕಾಲದಲ್ಲಿನ ವಚನ ಸಾಹಿತ್ಯ ಬಹಳ ಕ್ರಾಂತಿಯನ್ನೇ ಮಾಡಿತ್ತು. ವಚನಗಳನ್ನು ಎಲ್ಲರೂ ಕಲಿಯಬೇಕಿದೆ. ತಮ್ಮ ಮಕ್ಕಳಿಗೆ ಬಸವಣ್ಣ, ಸಿದ್ದರಾಮೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ ವಚನಗಳನ್ನು ಕಲಿಸಿದರೆ ಮಕ್ಕಳು ಉತ್ತಮ ಸಂಸ್ಕಾರಯುತವಾಗಿ ಬೆಳಸಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಹ್ಯಾದ್ರಿ ಜಂಗಮ್ ಶರಣೆ ಅಕ್ಕಮಹಾದೇವಿ ಬಗ್ಗೆ ಉಪನ್ಯಾಸ ನೀಡಿದರು. ಅಮ್ಮಸಂದ್ರ ಅಕ್ಕನ ಬಳಗದ ಶರಣೆ ಇಂದ್ರಮ್ಮರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷರಾದ ದೇವಮ್ಮ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಗೀತಾ ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಿಳಾ ಘಟಕದ ಅಧ್ಯಕ್ಷೆ ಟಿ.ಆರ್.ಪುಷ್ಪಾವತಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ರೂಪಶ್ರೀ, ಪ್ರಧಾನ ಕಾರ್ಯದರ್ಶಿ ಸುನಿಲ್ ಬಾಬು, ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಕಾರ್ಯದರ್ಶಿ ಶಿವಾನಂದ್, ಮಹಾಸಭಾ ಸದಸ್ಯರು, ಅಕ್ಕನ ಬಳಗದ ಸದಸ್ಯರು ಇತರರು ಇದ್ದರು.