ಕುಕ್ಕೆ: ಟೀಂ ಇಂಡಿಯಾ ಥ್ರೋಡೌನ್‌ ತಜ್ಞ ರಾಘವೇಂದ್ರ ಮಹಾಭಿಷೇಕ ಸೇವೆ

| Published : Jul 11 2024, 01:34 AM IST

ಕುಕ್ಕೆ: ಟೀಂ ಇಂಡಿಯಾ ಥ್ರೋಡೌನ್‌ ತಜ್ಞ ರಾಘವೇಂದ್ರ ಮಹಾಭಿಷೇಕ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಕುಕ್ಕೆಗೆ ಬಂದಿದ್ದ ಅವರು, ಟೀಂ ಇಂಡಿಯಾ ವಿಶ್ವಚಾಂಪಿಯನ್ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರ ಟೀಂ ಇಂಡಿಯಾದ ತ್ರೋಡೌನ್ ತಜ್ಞ ರಾಘವೇಂದ್ರ ಬುಧವಾರ ಭೇಟಿ ನೀಡಿದರು. ಆರಂಭದಲ್ಲಿ ಶ್ರೀ ದೇವರ ದರ್ಶನ ಮಾಡಿದ ಅವರು ಸಂಕಲ್ಪ ಮಾಡಿದರು. ಬಳಿಕ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಮರ್ಪಿಸಿದರು. ಈ ಹಿಂದೆ ಕುಕ್ಕೆಗೆ ಬಂದಿದ್ದ ಅವರು, ಟೀಂ ಇಂಡಿಯಾ ವಿಶ್ವಚಾಂಪಿಯನ್ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು.

ಇವರಿಗೆ ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯ ಶಾಲು ಹೊದಿಸಿ ಮಹಾಪ್ರಸಾದ ಮತ್ತು ಮಹಾಭಿಷೇಕದ ಪ್ರಸಾದ ನೀಡಿದರು.

ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ತೆರಳಿದ ಅವರನ್ನು ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು. ದೇವಳದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್‌., ಹರೀಶ್, ಕೃಷ್ಣಪ್ರಸಾದ್ ಕೆ.ಜಿ ಭಟ್, ಸುಬ್ರಹ್ಮಣ್ಯದ ಅವರ ಸ್ನೇಹಿತರಾದ ಪಪ್ಪು ಲೋಕೇಶ್, ದೀಪಕ್ ನಂಬಿಯಾರ್ ಇದ್ದರು.