ವೈದ್ಯಕೀಯ ತಂತ್ರಜ್ಞಾನದಲ್ಲಾಗುವ ಬದಲಾವಣೆ ಕ್ಯಾನ್ಸರ್‌ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ಕ್ಯಾನ್ಸರ್‌ ಹೊಂದಿದ ರೋಗಿಗಳು ಗುಣಮುಖರಾಗಿ ಸಾಮಾನ್ಯರಂತೆ ನಿರ್ಭೀತವಾಗಿ ಜೀವನ ಸಾಗಿಸಲು ಸಾಧ್ಯ ಎಂದು ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಣೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವೈದ್ಯಕೀಯ ತಂತ್ರಜ್ಞಾನದಲ್ಲಾಗುವ ಬದಲಾವಣೆ ಕ್ಯಾನ್ಸರ್‌ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ಕ್ಯಾನ್ಸರ್‌ ಹೊಂದಿದ ರೋಗಿಗಳು ಗುಣಮುಖರಾಗಿ ಸಾಮಾನ್ಯರಂತೆ ನಿರ್ಭೀತವಾಗಿ ಜೀವನ ಸಾಗಿಸಲು ಸಾಧ್ಯ ಎಂದು ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಣೆ ಹೇಳಿದರು.

ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಸಂಪತಕುಮಾರ ಶಿವಣಗಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕ್ಯಾನ್ಸರ್‌ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ಎಂದೊಡನೆ ರೋಗಿಗಳು ಬೆಚ್ಚಿ ಬೀಳುತ್ತಾರೆ. ಅವರಲ್ಲಿರುವ ಭಯವನ್ನು ಹೋಗಲಾಡಿಸುವ ಕಳಕಳಿಯನ್ನು ತೋರ್ಪಡಿಸಬೇಕು. ಸಾಮಾಜಿಕವಾಗಿ ಅವರನ್ನು ದೂರವಿಡದೇ, ನಾವು ಜೀವನ ನಡೆಸುತ್ತೇವೆ ಎಂಬ ಆಶಾಭಾವನೆ ಅವರಲ್ಲಿ ಮೂಡಬೇಕು. ಅದರಂತೆ ರೋಗಿಗಳೂ ಕೂಡ ನಿಗದಿತ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕೆಂದು ತಿಳಿಸಿದರು.ಆರ್ಥಿಕ ಹಾಗೂ ಸಮಾಜಿಕವಾಗಿ ಬಳಲುವ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವೆಲ್ಲರೂ ಕೈಜೋಡಿಸಿ, ಅವರಿಗೆ ವಿಶೇಷ ನೆರವು ನೀಡುತ್ತ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಬೇಕು. ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕಾಗಿದೆ ಎಂದರು.ಕ್ಯಾನ್ಸರ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಮಾತನಾಡಿ, ಅತ್ಯಾಧುನಿಕವಾಗಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳಿಗೆ ಸತ್ಕರಿಸಲಾಯಿತು. ರೋಗಿಗಳು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಅಂಚೆ ಇಲಾಖೆಯ ಬೆಳಗಾವಿ ವಿಭಾಗದಿಂದ ಅಂಚೆ ಕವರ ಬಿಡುಗಡೆಗೊಳಿಸಲಾಯಿತು.ಸಮಾರಂಭದಲ್ಲಿ ಜೆ.ಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ‍್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಆರಿಫ್ ಮಾಲ್ದಾರ, ಕ್ಲಿನಿಕಲ್ ಆಡಳಿತಾಧಿಕಾರಿ ಹಾಗೂ ರೆಡಿಯೇಶನ್ ಅಂಕಾಲಾಜಿಯ ಡಾ.ಇಮ್ತಿಯಾಜ್‌ ಅಹ್ಮದ, ಕ್ಯಾನ್ಸರ್‌ ತಜ್ಞವೈದ್ಯರಾದ ಡಾ.ಕುಮಾರ ವಿಂಚುರಕರ, ಡಾ.ಮಹೇಶ ಕಲ್ಲೋಳ್ಳಿ, ಡಾ.ಸಂತೋಷ ಮಠಪತಿ, ಡಾ.ರಶ್ಮಿ ಪಾಟೀಲ, ಡಾ.ರಾಜೇಂದ್ರ ಮೆಟಗುಡಮಠ, ಡಾ.ರೋಹನ ಭಿಸೆ, ಡಾ.ಸಪ್ನಾ.ಕೆ, ಡಾ.ರಾಘವೇಂದ್ರ ಸಾಗರ, ಡಾ.ರೋಹಿತ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.