ಮುಂದಿನ 15 ವರ್ಷದಲ್ಲಿ ತಂತ್ರಜ್ಞಾನವೇ ವಿಶ್ವ ಆಳಲಿದೆ: ಡಾ.ಶಿವಪ್ರಸಾದ ಎಸ್.ಎಂ.

| Published : Feb 17 2025, 12:32 AM IST

ಮುಂದಿನ 15 ವರ್ಷದಲ್ಲಿ ತಂತ್ರಜ್ಞಾನವೇ ವಿಶ್ವ ಆಳಲಿದೆ: ಡಾ.ಶಿವಪ್ರಸಾದ ಎಸ್.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಞಾನದ ಈ ನಾಗಾಲೋಟಕ್ಕೆ ನಾವೆಲ್ಲರೂ ಅಣಿಯಾಗಬೇಕಾಗಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಐಐಟಿ ಡೀನ್ ಡಾ.ಶಿವಪ್ರಸಾದ ಎಸ್.ಎಂ.ಹೇಳಿದರು.

ಧಾರವಾಡ: ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಭಾರಿ ಸಂಶೋಧನೆಗಳಾಗುತ್ತಿವೆ. ಮುಂದಿನ 15 ವರ್ಷದಲ್ಲಿ ಈ ಮೂರು ತಂತ್ರಜ್ಞಾನಗಳು ವಿಶ್ವವನ್ನೇ ಆಳಲಿವೆ ಎಂದು ಐಐಟಿ ಡೀನ್ ಡಾ.ಶಿವಪ್ರಸಾದ ಎಸ್.ಎಂ.ಹೇಳಿದರು.

ಧಾರವಾಡ ಲಯನ್ಸ್ ಸಂಸ್ಥೆಯು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸ್ಟ್ರಿಕ್ಟ್ 317ಬಿ ರೀಜನ್ 3ರ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದರು.

ತಂತ್ರಜ್ಞಾನದ ಈ ನಾಗಾಲೋಟಕ್ಕೆ ನಾವೆಲ್ಲರೂ ಅಣಿಯಾಗಬೇಕಾಗಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ. ಜ್ಞಾನ, ಪರಿಶ್ರಮ ಹಾಗೂ ಆವಿಷ್ಕಾರದ ಸೂತ್ರವನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು ಎಂದರು.

ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಬೆಂಗಳೂರಿನ ಡಾ. ಪಿ.ಆರ್.ಎಸ್. ಚೇತನ, ''''''''ಧನಾತ್ಮಕ ಭಾವನೆ ನಮ್ಮ ಮನಸ್ಸಿಗೆ ದೃಢತೆಯನ್ನು ನೀಡುತ್ತದೆ. ಧನಾತ್ಮಕತೆ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ. ಮನಸ್ಸು ಸಂತೋಷದಿಂದಿದ್ದರೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುತ್ತೇವೆ ಎಂದು ಹೇಳಿದರು.

ಲಯನ್ ಅರವಿಂದ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಾಧಿಕ್ ಶೇಖ್ ಮತ್ತು ಸಯ್ಯದ್ ಇಸ್ಮಾಯಿಲ್ ತಂಗಲ್ ವರದಿ ವಾಚನ ಮಾಡಿದರು.

ಜಿಲ್ಲಾ ಮಾಜಿ ಗವರ್ನರ್ ಹರ್ಷ ದೇಸಾಯಿ, ವನಿತಾ ಹೆಬಸೂರ, ಕವಿತಾ ಅಂಗಡಿ, ವೃಷಭ ಕರೋಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೀಜನ್ 3ರ ಎಂಟು ಲಯನ್ಸ್ ಸಂಸ್ಥೆಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ನಮ್ರತಾ ಪಾಟೀಲ, ಅನುಪಮಾ ಶೆಟ್ಟಿ, ಶ್ರೀಕಾಂತ ದೇವಗಿರಿ, ಪ್ರಕಾಶ ಕುಲಕರ್ಣಿ, ಸುರೇಶ ಗುದಗನವರ ಮತ್ತಿತರರು ಹಾಜರಿದ್ದರು.

ಲಯನ್ಸ್ ಅಧ್ಯಕ್ಷ ಗುರುರಾಜ ಪಿಸೆ ಸ್ವಾಗತಿಸಿದರು. ಮುಕುಂದ ಹೆಬ್ಲಿಕರ ಧ್ವಜ ವಂದನೆ ಮಾಡಿದರು. ಶೈಲಾ ಕರಗುದರಿ ಹಾಗೂ ಡಾ. ಉಷಾ ಗದ್ದಗಿಮಠ ಜಂಟಿಯಾಗಿ ನಿರೂಪಿಸಿದರು. ಡಾ. ರಾಜಶ್ರೀ ಗುದಗನವರ ವಂದಿಸಿದರು.