ಆಲೋಚನೆ ಇಲ್ಲದ ತಂತ್ರಜ್ಞಾನ ಹಾನಿಕಾರಕ: ಪ್ರೊ. ಕೆ.ಪಣಿರಾಜ್

| Published : Oct 23 2024, 12:47 AM IST

ಆಲೋಚನೆ ಇಲ್ಲದ ತಂತ್ರಜ್ಞಾನ ಹಾನಿಕಾರಕ: ಪ್ರೊ. ಕೆ.ಪಣಿರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಧ್ವನಿ ವಿನ್ಯಾಸದ ಐದು ದಿನಗಳ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಲೆಯ ಪ್ರದರ್ಶನದ ಧ್ವನಿ ವಿನ್ಯಾಸದಲ್ಲಿ ತಂತ್ರಜ್ಞಾನವನ್ನು ಚಿಂತನ ಶೀಲವಾಗಿ ಬಳಸಬೇಕಾಗುತ್ತದೆ. ಇಲ್ಲದಿದ್ದರೆ ಅದರ ಪರಿಣಾಮ ಅರ್ಥಹೀನವಾಗುತ್ತದೆ. ಆಲೋಚನೆಯಿಲ್ಲದ ತಂತ್ರಜ್ಞಾನವು ಹಾನಿಕಾರಕವೂ ಆಗಬಹುದು ಎಂದು ಲೇಖಕ ಪ್ರೊ. ಫಣಿರಾಜ್ ಹೇಳಿದರು.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಸಂಗೀತಗಾರ ಋತ್ವಿಕ್ ಕಾಯ್ಕಿಣಿ ಅವರು ನಡೆಸುತ್ತಿರುವ ಧ್ವನಿ ವಿನ್ಯಾಸದ ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಿನಿಮಾ ಜಗತ್ತಿನಲ್ಲಿ ಧ್ವನಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಶಬ್ದದ ಪರಿಣಾಮವನ್ನು ಹೆಚ್ಚಿಸಲು ಮೌನವನ್ನು ಪರಿಣಾಮಕಾರಿಯಾಗಿ ಬಳಸಬೇಕಾಗಿದೆ ಎಂದು ಅವರು ಹೇಳಿದರು.

ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಎಲ್ಲ ಕಲೆಗಳಲ್ಲಿ ಧ್ವನಿಯ ತಾತ್ವಿಕತೆ ಮತ್ತು ಸೌಂದರ್ಯ ಪ್ರಜ್ಞೆಯ ಅಗತ್ಯವನ್ನು ಒತ್ತಿ ಹೇಳಿದರು.ನಂತರ ಶ್ರೀ ಋತ್ವಿಕ್ ಕಾಯ್ಕಿಣಿ ಅವರು ಧ್ವನಿ ವಿನ್ಯಾಸದ ಮೂಲಭೂತ ಅಂಶಗಳೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದರು.ಕಾರ್ಯಾಗಾರ ಅ.25ರಂದು ವರೆಗೆ ಜಿಸಿಪಿಎಎಸ್, ಮಾಹೆಯಲ್ಲಿರುವ ಸರ್ವೋದಯ ಸಭಾಂಗಣದಲ್ಲಿ ನಡೆಯಲಿದೆ.