ತಹಸೀಲ್ದಾರ್ ಮಧ್ಯಸ್ತಿಕೆ: ರಸ್ತೆ ಸಮಸ್ಯೆಗೆ ಪರಿಹಾರ

| Published : Apr 16 2025, 12:37 AM IST

ತಹಸೀಲ್ದಾರ್ ಮಧ್ಯಸ್ತಿಕೆ: ರಸ್ತೆ ಸಮಸ್ಯೆಗೆ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಭೆಯಲ್ಲಿ ಸಾಧಕ ಬಾಧಕ ಚರ್ಚಿಸಲಾಯಿತು. ಜಮೀನು ಮಾಲೀಕರೊಂದಿಗೆ ಮಾತುಕತೆ ಫಲಪ್ರದವಾಗಿ ನಡೆದು ರಾಜಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥವಾಯಿತು.

ಶಿಗ್ಗಾಂವಿ: ಕೃಷಿ ಕೆಲಸಕ್ಕಾಗಿ ಜಮೀನಿಗೆ ತೆರಳಲು ಸುಸಜ್ಜಿತ ರಸ್ತೆಯಿಲ್ಲದೇ ನಾಲ್ಕೈದು ವರ್ಷಗಳಿಂದ ಹೈರಾಣಾಗಿದ್ದ ನೂರಾರು ರೈತರು ತಾಲೂಕು ದಂಡಾಧಿಕಾರಿ ರವಿಕುಮಾರ ಕೊರವರ ಅವರ ಮಧ್ಯಸ್ತಿಕೆ ಫಲಪ್ರದಗೊಂಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆತಾಲೂಕಿನ ಗಂಗೆಬಾವಿ ಶ್ರೀಮಠದ ಆವರಣದಲ್ಲಿ ಮಂಗಳವಾರ ನಡೆದ ಸಂಧಾನ ಸಭೆ ನಡೆಯಿತು. ನೂರಾರು ಎಕರೆ ವಿಸ್ತೀರ್ಣದ ತಾಲೂಕಿನ ಗಂಗೆಬಾವಿ ಧಾರ್ಮಿಕ ಕ್ಷೇತ್ರದ ಎದುರಿನ ಭಾಗದಲ್ಲಿನ ಜಮೀನಿಗೆ ತೆರಳಲು ಹೊಸೂರು ಹಾಗೂ ಎತ್ತಿನಹಳ್ಳಿ ಗ್ರಾಮದ ಕೃಷಿಕರಿಗೆ ಸುಸಜ್ಜಿತ ರಸ್ತೆ ಬಳಸಲು ತೊಂದರೆಯಾಗಿತ್ತು. ಕಂದಾಯ ಕಚೇರಿಗೆ ನಿರಂತರ ಬರುವ ತಕರಾರು ಅರ್ಜಿಗಳನ್ನು ಪರಿಶೀಲಿಸಿದ ತಹಸೀಲ್ದಾರ್ ರವಿ ಕೊರವರ ಅವರು, ಸ್ಥಳಕ್ಕೆ ತೆರಳಿ ರೈತ ಸಂಘಟನೆ ಹಾಗೂ ಜಮೀನು ಮಾಲೀಕರ ಪ್ರತಿನಿಧಿಗಳ ಸಭೆ ನಡೆಸಿ ಚರ್ಚೆ ನಡೆಸಿದರು.

ಇಬ್ಬರ ಆಹವಾಲು ಪರಿಶೀಲಿಸಿ ಕೃಷಿಕರಿಗೆ ಅನಕೂಲವಾಗುವ ಹಾಗೇ ಸಮತಟ್ಟಲ್ಲದ ಪ್ರದೇಶದಿಂದ ಕೃಷಿ ಪರಿಕರ ಹಾಗೂ ಉತ್ಪನಗಳನ್ನು ಸಾಗಿಸಲು ಸಾಧಕ ಬಾಧಕ ಚರ್ಚೆ, ಮುಕ್ತ ಮಾತುಕತೆಯ ಮೂಲಕ ಅನುಕೂಲತೆ ಒದಗಿಸಿದರು. ಜಮೀನು ಮಾಲೀಕರೊಂದಿಗೆ ಮಾತುಕತೆ ಫಲಪ್ರದವಾಗಿ ನಡೆದು ರಾಜಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥವಾಯಿತು.ರೈತ ಸಂಘಟನೆಯ ಅಧ್ಯಕ್ಷ ಮುತ್ತಣ್ಣ, ಗುಡಗೇರಿ, ನಿಂಗಪ್ಪ ಬೆಂಚ್ಚಳ್ಳಿ, ಈರಪ್ಪ ಸುಣಗಾರ, ಗದಿಗಯ್ಯ, ನಾಗನೂರುಮಠ, ಅರುಣ ಇಂದೂರು, ಸುರೇಶ ದೇವತಿ, ರಾಜೂ ಸಾಲಗಾವಿ, ಶಿವಾನಂದ ಅದರಗುಂಚಿ, ರಾಜು ಬಿಂದಲಿ, ಮಲ್ಲೇಶ ಸುಣಗಾರ, ಲಕ್ಷ್ಮಣ ಸುಣಗಾರ, ಮಂಜಪ್ಪ ನೆಲ್ಲೂರು ಅಲ್ಲದೇ ಸುತ್ತಮುತ್ತಲಿನ ಗ್ರಾಮದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.ರಂಗಕಲೆ ಹವ್ಯಾಸವಾಗಿ ರೂಢಿಸಿಕೊಳ್ಳಿ

ರಾಣಿಬೆನ್ನೂರು: ಜೀವಸಂಕುಲದಲ್ಲಿ ಅತ್ಯಂತ ಬುದ್ಧಿವಂತನಾದ ಮನುಷ್ಯ ಕಲೆಗಳ ಮೂಲಕ ದೇವರೊಂದಿಗೂ ಮಾತನಾಡಬಹುದೆಂದು ತೋರಿಸಿಕೊಟ್ಟಿದ್ದಾನೆ ಎಂದು ದೊಡ್ಡಾಟ ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಪರಿಮಳಾ ಜೈನ್ ತಿಳಿಸಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ, ರಾಜ- ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶಿಷ್ಟ ಕಲಾ ಪ್ರಕಾರ ರಂಗಭೂಮಿ ಒಂದು ರಸಯಾತ್ರೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜತೆಗೆ ರಂಗಭೂಮಿಯನ್ನು ಒಂದು ಹವ್ಯಾಸವನ್ನಾಗಿ ಬೆಳೆಸಿಕೊಳ್ಳಬೇಕೆಂದು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡರ ವಹಿಸಿದ್ದರು.ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಪ್ರೊ. ರೇಖಾ ಶಿಡೇನೂರ, ಹೊನ್ನಮ್ಮ ತಳವಾರ, ಭಾಗ್ಯವತಿ ದೇಶಪಾಂಡೆ, ಕಾರ್ಯಕ್ರಮ ಸಂಯೋಜಕ ಪ್ರೊ. ಸಾಯಿಲತಾ ಮಡಿವಾಳರ, ಪ್ರೊ. ಶೋಭಾ ದೊಡ್ಡನಾಗಳ್ಳಿ ಸೇರಿದಂತೆ ಮತ್ತಿತರರು ಇದ್ದರು.