ಮತಗಟ್ಟೆ ಕೇಂದ್ರಗಳಿಗೆ ತಹಸೀಲ್ದಾರ ಭೇಟಿ

| Published : Nov 20 2023, 12:45 AM IST

ಸಾರಾಂಶ

ತಹಸೀಲ್ದಾರ ಮಂಗಳಾ ಎಂ. ಅವರು ಪಟ್ಟಣದ ನಾನಾ ಮತಗಟ್ಟೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹುಲಸಗೇರಿ, ಕಟಗೇರಿ, ಜಮ್ಮನಕಟ್ಟಿ, ಕೊಂಕಣಕೊಪ್ಪ ಗ್ರಾಮಗಳ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಮತಗಟ್ಟೆ ಕೇಂದ್ರಗಳ ಪರೀಶಿಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ರಾಜ್ಯಾದ್ಯಂತ ರಾಜ್ಯ ಚುನಾವಣಾ ಆಯೋಗದಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಮತದಾರರ ವಿಶೇಷ ನೊಂದಣಿ ಕಾರ್ಯದ ನಿಮಿತ್ತ ಪಟ್ಟಣ ಸೇರಿ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ವಿಶೇಷ ನೋಂದಣಿ ಕಾರ್ಯ ನಡೆಯಿತು.

ತಹಸೀಲ್ದಾರ ಮಂಗಳಾ ಎಂ. ಅವರು ಪಟ್ಟಣದ ನಾನಾ ಮತಗಟ್ಟೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹುಲಸಗೇರಿ, ಕಟಗೇರಿ, ಜಮ್ಮನಕಟ್ಟಿ, ಕೊಂಕಣಕೊಪ್ಪ ಗ್ರಾಮಗಳ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಮತಗಟ್ಟೆ ಕೇಂದ್ರಗಳ ಪರೀಶಿಲನೆ ನಡೆಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಹೊಸದಾಗಿ ನೋಂದಣಿ ಆಗಿರುವ ಮತದಾರರ, ತಿದ್ದುಪಡಿಗೆ ಬಂದ ಅರ್ಜಿ ಸೇರಿ ಇನ್ನಿತರ ವಿಷಯಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ, ಕಂದಾಯ ನೀರಿಕ್ಷಕ ಎಸ್.ಎಚ್.ಜೋಗಿನ, ಗ್ರಾಮ ಆಡಳಿತ ಅಧಿಕಾರಿಗಳಾದ ಎಂ.ಎಸ್.ಗುಡಿಸಾಗರ, ಎಸ್.ಡಿ.ಭಗವತಿ, ಇತರರು ಇದ್ದರು.

ಗುಳೇದಗುಡ್ಡ ರೇಲ್ವೆ ಸ್ಟೇಶನ್ ಗ್ರಾಮದ ಮತಗಟ್ಟೆ ಸಂಖ್ಯೆ 55ರಲ್ಲಿ ಮತಗಟ್ಟೆ ಅಧಿಕಾರಿ ಬಾಲು ಹೊಸಮನಿ ಅವರು ಮತಗಟ್ಟೆ ವಿಶೇಷ ನೊಂದಣಿ ನಿಮಿತ್ತ ಯುವ ಮತದಾರರಿಗೆ ಮಾಹಿತಿ ನೀಡಿದರು. ಗ್ರಾಮದಲ್ಲಿನ 18ಕ್ಕೂ ಹೆಚ್ಚು ಯುವ ಮತದಾರರಿಗೆ ಮಾಹಿತಿ ನೀಡಿ, ಮತದಾರರ ಚೀಟಿ ಮಾಡಿಸುವಂತೆ ತಿಳಿಸಿದರು.