ಮಳೆ ಹಾನಿ ಮನೆಗಳಿಗೆ ತಹಸೀಲ್ದಾರ್ ಭೇಟಿ

| Published : Oct 26 2024, 01:13 AM IST

ಸಾರಾಂಶ

ದಾಬಸ್‌ಪೇಟೆ: ವಾರದಿಂದ ಸುರಿದ ಧಾರಾಕಾರ ಮಳೆಯಿಂದ ತೊರೆಕೆಂಪೋಹಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಮೃತ್ ಆತ್ರೇಶ್ ಭೇಟಿ ನೀಡಿ ಧೈರ್ಯ ಹೇಳುವ ಜೊತೆಗೆ ಪರಿಹಾರ ಭರವಸೆ ನೀಡಿ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದರು.

ತೊರೆಕೆಂಪಹಳ್ಳಿ ಗ್ರಾಮದಲ್ಲಿ ೨೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರರು, ನೀರು ನುಗ್ಗಿದ ಮನೆಗಳ ಮಾಲೀಕರ ಖಾತೆಗೆ ನೇರ ಹಣ ಜಮಾ ಮಾಡುವ ಭರವಸೆ ನೀಡಿದರು.

ಕಾಲುವೆ ಒತ್ತುವರಿಯಿಂದ ನೀರು ನೇರವಾಗಿ ಗ್ರಾಮಕ್ಕೆ ನುಗ್ಗಿದೆ ಎಂದು ಮನೆ ಮಾಲೀಕರು ದೂರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಕೆ.ನಾಗರಾಜು, ಟಿ.ನಾಗರಾಜು, ಗ್ರಾಪಂ ಸದಸ್ಯ ಕುಮಾರ್ ಸ್ಥಳೀಯ ಜಮೀನು ಮಾಲೀಕರ ಮನಹೊಲಿಸಿ ಕಾಲುವೆ ತೆರವು ಮಾಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿಸಿದರು.

ಈ ವೇಳೆ ರಾಜಸ್ವ ನಿರೀಕ್ಷಕ ಚಂದ್ರು, ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಗ್ರಾಮ ಲೆಕ್ಕಾಧಿಕಾರಿ ಕುಮಾರ್, ಶರಣಬಸಪ್ಪ ಉಪಸ್ಥಿತರಿದ್ದರು.

ಪೋಟೋ 6 :

ತೊರೆಕೆಂಪಹಳ್ಳಿ ಗ್ರಾಮಕ್ಕೆ ನೆಲಮಂಗಲ ತಹಸೀಲ್ದಾರ್ ಅಮೃತ್ ಆತ್ರೇಶ್ ಹಾಗೂ ಮುಖಂಡರು ಭೇಟಿ ನೀಡಿ ನೀರು ನುಗ್ಗಿದ ಮನೆಗಳನ್ನು ಪರಿಶೀಲಿಸಿದರು.