ದಕ್ಷಿಣದ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ರೇವಂತ್‌

| Published : Apr 22 2024, 02:00 AM IST / Updated: Apr 22 2024, 07:03 AM IST

ದಕ್ಷಿಣದ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ರೇವಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರ ಹಾಗೂ ಆದಾಯದಲ್ಲಿ ಪಾಲು ಹಂಚಿಕೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಉತ್ತರ ಭಾರತಕ್ಕೆ ಪ್ರಥಮ ಆದ್ಯತೆ ಮತ್ತು ದಕ್ಷಿಣ ಭಾರತದ ಬಗ್ಗೆ ಮಲತಾಯಿ ಧೋರಣೆ. ಇದು ಪ್ರಧಾನಿ ನರೇಂದ್ರ ಮೋದಿ ಡಿಎನ್‌ಎಯಲ್ಲೇ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ ರೆಡ್ಡಿ ದೂರಿದ್ದಾರೆ.

 ಬೆಂಗಳೂರು :  ಅಧಿಕಾರ ಹಾಗೂ ಆದಾಯದಲ್ಲಿ ಪಾಲು ಹಂಚಿಕೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಉತ್ತರ ಭಾರತಕ್ಕೆ ಪ್ರಥಮ ಆದ್ಯತೆ ಮತ್ತು ದಕ್ಷಿಣ ಭಾರತದ ಬಗ್ಗೆ ಮಲತಾಯಿ ಧೋರಣೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಡಿಎನ್‌ಎಯಲ್ಲೇ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ ರೆಡ್ಡಿ ದೂರಿದ್ದಾರೆ. 

ಅಷ್ಟೇ ಅಲ್ಲದೆ, ಕರ್ನಾಟಕ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಮುಂದಾದ ಬಹುರಾಷ್ರೀಯ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಕಚೇರಿಯಿಂದ ಬೆದರಿಕೆಯ ದೂರವಾಣಿ ಕರೆ ಮಾಡಿ ಗುಜರಾತ್‌ನಲ್ಲೇ ಹೂಡಿಕೆ ಮಾಡುವಂತೆ ಒತ್ತಡ ಹಾಕಲಾಗಿತ್ತು ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಆಗಮಿಸಿರುವ ರೇವಂತ ರೆಡ್ಡಿ ಅವರು ಮಾಧ್ಯಮಗಳೊಂದಿಗೆ ಅನೌಪಚಾರಿಕ ಮಾತುಕತೆ ವೇಳೆ ಪ್ರಧಾನಿ ಮೋದಿ ಸರ್ಕಾರ ಹೇಗೆಲ್ಲ ದಕ್ಷಿಣ ಭಾರತದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಾದ್ಯಂತವಾಗಿ ವಿವರಿಸಿದರು.

ಅಧಿಕಾರ ಹಂಚಿಕೆಯಿರಲಿ ಅಥವಾ ಆದಾಯದಲ್ಲಿ ಪಾಲು ನೀಡುವುದೂ ಸೇರಿದಂತೆ ಪ್ರತಿಯೊಂದರಲ್ಲೂ ಮುಖ್ಯಧಾರೆ ಉತ್ತರ ಭಾರತಕ್ಕೆ ಹರಿಯಬೇಕು. ಅದರ ಎರಚಲು ಮಾತ್ರ ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯಬೇಕು ಎಂಬ ಮನೋಗುಣ ಬಿಜೆಪಿ ಮೂಲ ಗುಣ ಎಂದರು. ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಪ್ರಧಾನಿ ಉತ್ತರ ಭಾರತೀಯರಾದರೆ ರಾಷ್ಟ್ರಪತಿ ಹುದ್ದೆ ದಕ್ಷಿಣ ಭಾರತೀಯರಿಗೆ ಸಿಗುತ್ತಿತ್ತು. 

ವಿದೇಶಾಂಗ ವ್ಯವಹಾರ, ರಕ್ಷಣೆ, ಹಣಕಾಸು ಸೇರಿದಂತೆ ಐದಾರು ಪ್ರಮುಖ ಖಾತೆಗಳಲ್ಲಿ ನಾಲ್ಕು ಉತ್ತರ ಭಾರತೀಯರಿಗೆ ದೊರಕಿದರೆ ಮೂರು ದಕ್ಷಿಣ ಭಾರತೀಯರಿಗೆ ಸಿಗುತ್ತಿತ್ತು. ಸ್ಪೀಕರ್‌ ಹುದ್ದೆ ಉತ್ತರ ಭಾರತೀಯರಿಗಾದರೇ, ಡೈಪ್ಯುಟಿ ಸ್ಪೀಕರ್‌ ಹುದ್ದೆ ದಕ್ಷಿಣದವರಿಗೆ ಇರುತ್ತಿತ್ತು. ಹೀಗೆ ಉತ್ತರ ಹಾಗೂ ದಕ್ಷಿಣದವರಿಗೆ ಅಧಿಕಾರದಲ್ಲಿ ಪಾಲು ಬಹುತೇಕ ಸಮಾನವಾಗಿರಬೇಕು ಎಂಬ ಅಲಿಖಿತ ಒಪ್ಪಂದ ಪಾಲನೆಯಾಗುತ್ತಿತ್ತು.ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಕ್ಷಿಣ ಭಾರತೀಯರಿಗೆ ದೊರಕಿರುವ ಅಧಿಕಾರದ ಪಾಲನ್ನು ನೋಡಿದರೆ ಬಿಜೆಪಿಯು ದಕ್ಷಿಣದವರ ಆಂತರ್ಯದಲ್ಲಿ ಹೊಂದಿರುವ ಭಾವ ಏನು ಎಂದು ಅರ್ಥವಾಗುತ್ತದೆ. 

ಕಳೆದ ಬಾರಿ ಕರ್ನಾಟಕವು 25 ಸಂಸದರನ್ನು ಬಿಜೆಪಿಗೆ ನೀಡಿತ್ತು. ತೆಲಂಗಾಣವು ಉತ್ತಮ ಸಂಖ್ಯೆಯ ಸಂಸದರನ್ನು ನೀಡಿತ್ತು. ಆದರೆ, ಇಡೀ ದಕ್ಷಿಣ ಭಾರತಕ್ಕೆ ದೊರಕಿದ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಕೇವಲ ಎರಡು ಮಾತ್ರ ಎಂದರು. ಸಚಿವ ಸ್ಥಾನ ನೀಡದಿದ್ದರೂ ಪಕ್ಷದ ಅಧ್ಯಕ್ಷ ಸ್ಥಾನವನ್ನಾದರೂ ದಕ್ಷಿಣದವರಿಗೆ ನೀಡಬಹುದಿತ್ತಲ್ಲ. ಅದನ್ನು ಬಿಜೆಪಿ ನಿರಾಕರಿಸಿದೆ. ಅಷ್ಟೇ ಏಕೆ, ದಕ್ಷಿಣದ ಪ್ರಭಾವಿ ನಾಯಕರಾದ ವೆಂಕಯ್ಯ ನಾಯ್ಡು, ಸದಾನಂದಗೌಡ ಅವರಂತಹವರನ್ನು ಮನೆಗೆ ಕಳುಹಿಸುವ ತಂತ್ರ ಮಾಡಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಮುಖ್ಯ ಕಾರಣ ಉತ್ತರ ಭಾರತದಲ್ಲಿ ಅಸ್ತಿತ್ವ ಉಳಿಸಿಕೊಂಡರೆ ಸಾಕು ಅಧಿಕಾರ ಹಿಡಿಯಬಹುದು ಎಂಬ ಮನಃಸ್ಥಿತಿ ಕಾರಣ. ದಕ್ಷಿಣದಲ್ಲಿ ಬೀಳುವ ಮತಗಳು ಸೀಟುಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಕಾರಣಕ್ಕೆ ಇಡೀ ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ ತೋರಲಾಗುತ್ತಿದೆ ಎಂದು ದೂರಿದರು.ಹೀಗಾಗಿಯೇ ಬುಲೆಟ್‌ ಟ್ರೈನ್‌, ಸಾಬರಮತಿ ಎಕ್ಸ್‌ಪ್ರೆಸ್‌, ಸ್ಮಾರ್ಟ್ ಸಿಟಿಯಂತಹ ಬೃಹತ್‌ ಯೋಜನೆಗಳನ್ನು ಗುಜರಾತಿಗೆ ಹಾಗೂ ಉತ್ತರ ಭಾರತಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ದಕ್ಷಿಣ ಭಾರತಕ್ಕೆ ಒಂದೇ ಒಂದು ಹೆಗ್ಗುರುತಿನ ಯೋಜನೆ ನೀಡಿಲ್ಲ ಎಂದರು. ದಕ್ಷಿಣ ಭಾರತದಲ್ಲಿ ತಮಗೆ ಬೀಳುವ ಮತಗಳು ಸೀಟುಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಅರಿವು ಬಿಜೆಪಿಗೆ ಇರುವುದರಿಂದಲೇ ಅವರು ಪ್ರಧಾನಿಯನ್ನು ನೇರವಾಗಿ ಆಯ್ಕೆ ಮಾಡುವ ನೇರ ಅಧ್ಯಕ್ಷೀಯ ಚುನಾವಣೆ ವ್ಯವಸ್ಥೆ ಜಾರಿಗೆ ತರುವ ಗುಪ್ತ ಅಜೆಂಡಾ ಹೊಂದಿದ್ದಾರೆ.ಇದರ ಉದ್ದೇಶ- ಇಡೀ ದೇಶದ ಜನಸಂಖ್ಯೆಯಲ್ಲಿ ಶೇ.20ರಷ್ಟು ಇರುವ ಮುಸ್ಲಿಮರ ಮತ ಸಿಗದಿದ್ದರೂ ಉಳಿದ ಶೇ.80ರಷ್ಟು ಮತಗಳಿರುವ ಹಿಂದುಗಳನ್ನು ಕೋಮುವಾದದ ನೆಲೆಯ ಮೇಲೆ ಉದ್ದೀಪಿಸಿ ಸುಲಭವಾಗಿ ಗೆಲ್ಲುವ ಗುರಿ ಸಾಧಿಸುವುದು. ಜತೆಗೆ, ದಕ್ಷಿಣ ಭಾರತದಲ್ಲಿ ತಮಗೆ ಹಾಲಿ ಮತಗಳು ತಕ್ಕಮಟ್ಟಿಗೆ ಬೀಳುತ್ತಿದ್ದರೂ ಅವು ಸೀಟುಗಳಾಗಿ ಪರಿವರ್ತನೆಯಾಗುತ್ತಿಲ್ಲ. ಹೀಗಾಗಿ ನೇರ ಅಧ್ಯಕ್ಷೀಯ ಚುನಾವಣೆಯಾದರೇ ಆ ಮತಗಳಿಗೂ ಮೌಲ್ಯ ದೊರೆತು ತಮ್ಮ ಗುರಿ ಸುಲಭವಾಗುವಂತೆ ಮಾಡಿಕೊಳ್ಳುವುದು ಎಂದು ವಿವರಿಸಿದರು.

ಮೋದಿ ಅವರಿಗೆ ಅಭಿವೃದ್ಧಿ ಬಗ್ಗೆ ಬದ್ಧತೆಯೇ ಇಲ್ಲ ಎಂದು ಆರೋಪಿಸಿದ ಅವರು, ದೇಶ ಸ್ವತಂತ್ರಗೊಂಡ ನಂತರದಿಂದ ಇದುವರೆಗಿನ 14 ಪ್ರಧಾನಿಗಳು 55 ಸಾವಿರ ಲಕ್ಷ ಕೋಟಿ ಸಾಲ ಮಾಡಿದ್ದರೆ, ಮೋದಿ ಅವರು ಕೇವಲ 10 ವರ್ಷದಲ್ಲಿ 113 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ವಾಜಪೇಯಿ ಸೇರಿದಂತೆ ಹಿಂದಿನ 14 ಪ್ರಧಾನಿಗಳ ಕಾಲದಲ್ಲಿ ಅಣೆಕಟ್ಟುಗಳು, ನವರತ್ನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಎಷ್ಟೆಲ್ಲ ಆಸ್ತಿ ನಿರ್ಮಾಣವಾಗಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರೂ ಅವರು ಗುಜರಾತಿನಲ್ಲಿ ವಲ್ಲಭಬಾಯಿ ಪಟೇಲರ ಪ್ರತಿಮೆಯೊಂದನ್ನು ಬಿಟ್ಟು ಒಂದೇ ಒಂದು ಕಾಯಂ ಎನಿಸುವ ಹೆಗ್ಗುರುತಿನ ಯೋಜನೆ ನೀಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೊಡುಗೆ ಎನಿಸುವ ಆಸ್ತಿ ನಿರ್ಮಾಣ ಮಾಡುವುದು ಬೇಡ. ಕಡೆ ಪಕ್ಷ ನಿರ್ಮಾಣವಾಗಿದ್ದ ಆಸ್ತಿಗಳನ್ನು ಉಳಿಸಿಕೊಳ್ಳದೆ ಪಿಎಸ್‌ಯುಗಳನ್ನು ಮಾರಾಟಮಾಡುತ್ತಿದ್ದಾರೆ ಎಂದು ದೂರಿದರು.ಮೋದಿಯ ಎಕ್ಸ್‌ಪೈರಿ ಡೇಟ್‌ ಮುಗಿದಿದೆ! ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹತ್ತಾರು ವಿಚಾರಗಳು ಇದ್ದರೂ ದೇಶದ ಜನತೆ ಮುಖ್ಯವಾಗಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮುಂದುವರೆಯಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮತ ಚಲಾಯಿಸಲಿದ್ದಾರೆ. 

ನನ್ನ ಪ್ರಕಾರ ಮೋದಿ ಎಂಬ ಔಷಧದ ಎಕ್ಸ್‌ಪೈರಿ ಡೇಟ್‌ ಮುಗಿದಿದೆ. ಹೀಗಾಗಿ ಬಿಜೆಪಿ ಪ್ರಚಂಡ ಸೋಲು ಕಾಣಲಿದೆ ಎಂದು ಹೇಳಿದರು.ಯಾವ ವ್ಯಕ್ತಿ ತಾನು ವ್ಯವಸ್ಥೆಗಿಂತ ದೊಡ್ಡವನು ಎಂದು ಭಾವಿಸಿ ಸರ್ವಾಧಿಕಾರ ಧೋರಣೆ ತೋರುತ್ತಾನೋ ಆಗ ಪ್ರಕೃತಿ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಮುಂದಾಗುತ್ತದೆ. ಇದು ಪ್ರಕೃತಿಯ ನಿಯಮ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜದ ಪ್ರತಿಯೊಬ್ಬರ ಖಾಸಗಿ ಬದುಕಿನ ಮೇಲೂ ದಾಳಿ ಮಾಡುತ್ತಿದೆ.

 ಪ್ರತಿಯೊಬ್ಬ ವ್ಯಾಪಾರಿಯನ್ನು ಕಳ್ಳನಂತೆ, ರಾಜಕಾರಣಿಯನ್ನು ಡಕಾಯಿತನಂತೆ ನೋಡುತ್ತಿದೆ. ರೈತರು ಹಾಗೂ ಮಾಧ್ಯಮಗಳನ್ನು ಶೋಷಿಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ, ನಾಯಕತ್ವ ಇಲ್ಲ. ನಾವೆಲ್ಲ ಕೆಲಸ ಮಾಡಿಲ್ಲ ಎಂಬಂತಹ ಎಲ್ಲ ವಿಚಾರಗಳು ಗೌಣವಾಗಿ ಸಮಾಜದ ಖಾಸಗಿ ಬದುಕಿಗೆ ಎರವಾಗುವ ಆಡಳಿತವನ್ನು ಪ್ರಕೃತಿಯೇ ಮುಗಿಸುತ್ತದೆ. ಹೀಗಾಗಿಯೇ ಮೋದಿ ಭಾಷಣಕ್ಕೆ ಈಗ ಜನ ಮರಳಾಗುತ್ತಿಲ್ಲ.

 ಜನರೇ ಮೋದಿ ಭಾಷಣ ಕೇಳಲು ಮುಂದಾಗುತ್ತಿಲ್ಲ. ಮೋದಿ ಅವರು ಜನ ಮನ್ನಣೆ ಕಳೆದುಕೊಂಡಿದ್ದಾರೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದ ಖಾಲಿ ಕುರ್ಚಿಗಳೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಅಲ್ಲದೆ, ಈ ದೇಶದಲ್ಲಿ ಸತತವಾಗಿ ಎರಡು ಬಾರಿ ಅಧಿಕಾರ ಹಿಡಿದವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ವಾಜಪೇಯಿ ಅವರು ಎರಡು ಬಾರಿ ಪ್ರಧಾನಿಯಾಗಿದ್ದರು. ಅನಂತರ ಅಧಿಕಾರ ಕಳೆದುಕೊಂಡರು. ಮನಮೋಹನ್‌ಸಿಂಗ್‌-ಸೋನಿಯಾ ಅವರು ಎರಡು ಬಾರಿ ಅಧಿಕಾರದಲ್ಲಿದ್ದರು ನಂತರ ಅಧಿಕಾರ ಕಳೆದುಕೊಂಡರು. ಅದೇ ಸ್ಥಿತಿ ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿಗೂ ಬರುತ್ತದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಜೆಪಿ 220 ಸ್ಥಾನ ಪಡೆದರೇ ಹೆಚ್ಚು ಎಂದ ತಮ್ಮದೇ ಆದ ಲೆಕ್ಕಾಚರ ನೀಡಿದ ಅವರು, ಲಕ್ಷದ್ವೀಪ ಸೇರಿದಂತೆ ದಕ್ಷಿಣದಲ್ಲಿ 131 ಸ್ಥಾನಗಳಿವೆ. ಇದರಲ್ಲಿ ಕರ್ನಾಟಕದಲ್ಲಿ 13-14 ಸೀಟು ಬಿಜೆಪಿ ಗೆಲ್ಲಬಹುದು. ತೆಲಂಗಾಣದಲ್ಲಿ 3-4 ಸೀಟು ಬಂದರೆ ಹೆಚ್ಚು. ಉಳಿದ ಕಡೆ ಬಿಜೆಪಿ ಅಸ್ತಿತ್ವವೇ ಇಲ್ಲ. ಒಟ್ಟಾರೆ 20 ಸ್ಥಾನ ಬಂದರೆ ಹೆಚ್ಚು. ಈ ಬಾರಿ ಬಿಜೆಪಿ ಸೋಲಲು ಆ ಪಕ್ಷದ ನಾಯಕರಲ್ಲಿನ ಒಳ ಜಗಳವೇ ಮುಖ್ಯ ಕಾರಣವಾಗಲಿದೆ. 

ಆ ಪಕ್ಷದ ಪ್ರತಿಯೊಬ್ಬ ನಾಯಕ ಹಾಗೂ ಅಭ್ಯರ್ಥಿಯು ತಾನು ಗೆಲ್ಲಬೇಕು ಹಾಗೂ ತನ್ನ ಪಕ್ಕದ ಬಿಜೆಪಿ ಅಭ್ಯರ್ಥಿ ಸೋಲಬೇಕು ಎಂದು ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಬಿಜೆಪಿಯ ಒಳಜಗಳವೇ ಮೋದಿಯನ್ನು ಪರಾಭವಗೊಳಿಸಲಿದೆ ಎಂದು ಪ್ರತಿಪಾದಿಸಿದರು.ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಖುದ್ದು ಪ್ರಧಾನಮಂತ್ರಿ ಕಚೇರಿಯಿಂದಲೇ ದೂರವಾಣಿ ಕರೆ ಹೋಗಿ ಗುಜರಾತಿನಲ್ಲೇ ಹೂಡಿಕೆ ಮಾಡಬೇಕು ಎಂದು ಬೆದರಿಗೆ ಹಾಕಿದ ಉದಾಹರಣೆಗಳು ಇವೆ ಎಂದು ಆರೋಪಿಸಿದರು.

ದಕ್ಷಿಣ ಭಾರತದಲ್ಲಿ ತಮಗೆ ಬೀಳುವ ಮತಗಳು ಸೀಟುಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಅರಿವು ಬಿಜೆಪಿಗೆ ಇರುವುದರಿಂದಲೇ ಅವರು ಪ್ರಧಾನಮಂತ್ರಿಯನ್ನು ನೇರವಾಗಿ ಆಯ್ಕೆ ಮಾಡುವ ನೇರ ಅಧ್ಯಕ್ಷೀಯ ಚುನಾವಣೆ ವ್ಯವಸ್ಥೆ ಜಾರಿಗೆ ತರುವ ಗುಪ್ತ ಅಜೆಂಡಾ ಹೊಂದಿದ್ದಾರೆ.ಇದರ ಉದ್ದೇಶ- ಇಡೀ ದೇಶದ ಜನಸಂಖ್ಯೆಯಲ್ಲಿ ಶೇ.20ರಷ್ಟು ಇರುವ ಮುಸ್ಲಿಮರ ಮತ ಸಿಗದಿದ್ದರೂ ಉಳಿದ ಶೇ.80ರಷ್ಟು ಮತಗಳಿರುವ ಹಿಂದುಗಳನ್ನು ಕೋಮುವಾದದ ನೆಲೆಯ ಮೇಲೆ ಉದ್ದೀಪಿಸಿ ಸುಲಭವಾಗಿ ಗೆಲ್ಲುವ ಗುರಿ ಸಾಧಿಸುವುದು.ಜತೆಗೆ, ದಕ್ಷಿಣ ಭಾರತದಲ್ಲಿ ತಮಗೆ ಹಾಲಿ ಮತಗಳು ತಕ್ಕಮಟ್ಟಿಗೆ ಬೀಳುತ್ತಿದ್ದರೂ ಅವು ಸೀಟುಗಳಾಗಿ ಪರಿವರ್ತನೆಯಾಗುತ್ತಿಲ್ಲ. 

ಹೀಗಾಗಿ ನೇರ ಅಧ್ಯಕ್ಷೀಯ ಚುನಾವಣೆಯಾದರೇ ಆ ಮತಗಳಿಗೂ ಮೌಲ್ಯ ದೊರೆತು ತಮ್ಮ ಗುರಿ ಸುಲಭವಾಗುವಂತೆ ಮಾಡಿಕೊಳ್ಳುವುದು ಎಂದು ವಿವರಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿವೃದ್ಧಿ ಬಗ್ಗೆ ಬದ್ಧತೆಯೇ ಇಲ್ಲ ಆರೋಪಿಸಿದ ಅವರು, ದೇಶ ಸ್ವತಂತ್ರಗೊಂಡ ನಂತರದಿಂದ ಇದುವರೆಗಿನ 14 ಪ್ರಧಾನಿಗಳು 55 ಸಾವಿರ ಲಕ್ಷ ಕೋಟಿ ಸಾಲ ಮಾಡಿದ್ದರೆ, ಮೋದಿ ಅವರು ಕೇವಲ 10 ವರ್ಷದಲ್ಲಿ 113 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ವಾಜಪೇಯಿ ಸೇರಿದಂತೆ ಹಿಂದಿನ 14 ಪ್ರಧಾನಮಂತ್ರಿಗಳ ಕಾಲದಲ್ಲಿ ಅಣೆಕಟ್ಟುಗಳು, ನವರತ್ನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಎಷ್ಟೆಲ್ಲ ಆಸ್ತಿ ನಿರ್ಮಾಣವಾಗಿದೆ. 

ಆದರೆ, ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದರೂ ಅವರು ಗುಜರಾತಿನಲ್ಲಿ ವಲ್ಲಭಬಾಯಿ ಪಟೇಲರ ಪ್ರತಿಮೆಯೊಂದನ್ನು ಬಿಟ್ಟು ಒಂದೇ ಒಂದು ಕಾಯಂ ಎನಿಸುವ ಹೆಗ್ಗುರುತಿನ ಯೋಜನೆ ನೀಡಲಿಲ್ಲ ಎಂದು ಆರೋಪಿಸಿದರು.ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೊಡುಗೆ ಎನಿಸುವ ಆಸ್ತಿ ನಿರ್ಮಾಣ ಮಾಡುವುದು ಬೇಡ. ಕಡೆ ಪಕ್ಷ ನಿರ್ಮಾಣವಾಗಿದ್ದ ಆಸ್ತಿಗಳನ್ನು ಉಳಿಸಿಕೊಳ್ಳದೆ ಪಿಎಸ್‌ಯುಗಳನ್ನು ಮಾರಾಟಮಾಡುತ್ತಿದ್ದಾರೆ ಎಂದು ದೂರಿದರು.

ಮೋದಿಯ ಎಕ್ಸ್‌ಪೈರಿ ಡೇಟ್‌ ಮುಗಿದಿದೆ! ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹತ್ತಾರು ವಿಚಾರಗಳು ಇದ್ದರೂ ದೇಶದ ಜನತೆ ಮುಖ್ಯವಾಗಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮುಂದುವರೆಯಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮತ ಚಲಾಯಿಸಲಿದ್ದಾರೆ. ನನ್ನ ಪ್ರಕಾರ ಮೋದಿ ಎಂಬ ಔಷಧದ ಎಕ್ಸ್‌ಪೈರಿ ಡೇಟ್‌ ಮುಗಿದಿದೆ. ಹೀಗಾಗಿ ಬಿಜೆಪಿ ಪ್ರಚಂಡ ಸೋಲು ಕಾಣಲಿದೆ ಎಂದು ಹೇಳಿದರು.

ಯಾವ ವ್ಯಕ್ತಿ ತಾನು ವ್ಯವಸ್ಥೆಗಿಂತ ದೊಡ್ಡವನು ಎಂದು ಭಾವಿಸಿ ಸರ್ವಾಧಿಕಾರ ಧೋರಣೆ ತೋರುತ್ತಾನೋ ಆಗ ಪ್ರಕೃತಿ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಮುಂದಾಗುತ್ತದೆ. ಇದು ಪ್ರಕೃತಿಯ ನಿಯಮ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜದ ಪ್ರತಿಯೊಬ್ಬರ ಖಾಸಗಿ ಬದುಕಿನ ಮೇಲೂ ದಾಳಿ ಮಾಡುತ್ತಿದೆ. ಪ್ರತಿಯೊಬ್ಬ ವ್ಯಾಪಾರಿಯನ್ನು ಕಳ್ಳನಂತೆ, ರಾಜಕಾರಣಿಯನ್ನು ಡಕಾಯಿತನಂತೆ ನೋಡುತ್ತಿದೆ. ರೈತರು ಹಾಗೂ ಮಾಧ್ಯಮಗಳನ್ನು ಶೋಷಿಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ, ನಾಯಕತ್ವ ಇಲ್ಲ. ನಾವೆಲ್ಲ ಕೆಲಸ ಮಾಡಿಲ್ಲ ಎಂಬಂತಹ ಎಲ್ಲ ವಿಚಾರಗಳು ಗೌಣವಾಗಿ ಸಮಾಜದ ಖಾಸಗಿ ಬದುಕಿಗೆ ಎರವಾಗುವ ಆಡಳಿತವನ್ನು ಪ್ರಕೃತಿಯೇ ಮುಗಿಸುತ್ತದೆ. ಹೀಗಾಗಿಯೇ ಮೋದಿ ಭಾಷಣಕ್ಕೆ ಈಗ ಜನ ಮರಳಾಗುತ್ತಿಲ್ಲ.

 ಜನರೇ ಮೋದಿ ಭಾಷಣ ಕೇಳಲು ಮುಂದಾಗುತ್ತಿಲ್ಲ. ಮೋದಿ ಅವರು ಜನ ಮನ್ನಣೆ ಕಳೆದುಕೊಂಡಿದ್ದಾರೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದ ಖಾಲಿ ಕುರ್ಚಿಗಳೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.ಅಲ್ಲದೆ, ಈ ದೇಶದಲ್ಲಿ ಸತತವಾಗಿ ಎರಡು ಬಾರಿ ಅಧಿಕಾರ ಹಿಡಿದವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ವಾಜಪೇಯಿ ಅವರು ಎರಡು ಬಾರಿ ಪ್ರಧಾನಿಯಾಗಿದ್ದರು. ಅನಂತರ ಅಧಿಕಾರ ಕಳೆದುಕೊಂಡರು. ಮನಮೋಹನ್‌ಸಿಂಗ್‌-ಸೋನಿಯಾ ಅವರು ಎರಡು ಬಾರಿ ಅಧಿಕಾರದಲ್ಲಿದ್ದರು ನಂತರ ಅಧಿಕಾರ ಕಳೆದುಕೊಂಡರು. ಅದೇ ಸ್ಥಿತಿ ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿರುವ ಮೋದಿಗೂ ಬರುತ್ತದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಜೆಪಿ 220 ಸ್ಥಾನ ಪಡೆದರೇ ಹೆಚ್ಚು ಎಂದ ತಮ್ಮದೇ ಆದ ಲೆಕ್ಕಾಚರ ನೀಡಿದ ಅವರು, ಲಕ್ಷದ್ವೀಪ ಸೇರಿದಂತೆ ದಕ್ಷಿಣದಲ್ಲಿ 131 ಸ್ಥಾನಗಳಿವೆ. ಇದರಲ್ಲಿ ಕರ್ನಾಟಕದಲ್ಲಿ 13-14 ಸೀಟು ಬಿಜೆಪಿ ಗೆಲ್ಲಬಹುದು. ತೆಲಂಗಾಣದಲ್ಲಿ 3-4 ಸೀಟು ಬಂದರೆ ಹೆಚ್ಚು. ಉಳಿದ ಕಡೆ ಬಿಜೆಪಿ ಅಸ್ತಿತ್ವವೇ ಇಲ್ಲ. ಒಟ್ಟಾರೆ 20 ಸ್ಥಾನ ಬಂದರೆ ಹೆಚ್ಚು. ಈ ಬಾರಿ ಬಿಜೆಪಿ ಸೋಲಲು ಆ ಪಕ್ಷದ ನಾಯಕರಲ್ಲಿನ ಒಳ ಜಗಳವೇ ಮುಖ್ಯ ಕಾರಣವಾಗಲಿದೆ. ಆ ಪಕ್ಷದ ಪ್ರತಿಯೊಬ್ಬ ನಾಯಕ ಹಾಗೂ ಅಭ್ಯರ್ಥಿಯು ತಾನು ಗೆಲ್ಲಬೇಕು ಹಾಗೂ ತನ್ನ ಪಕ್ಕದ ಬಿಜೆಪಿ ಅಭ್ಯರ್ಥಿ ಸೋಲಬೇಕು ಎಂದು ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಬಿಜೆಪಿಯ ಒಳಜಗಳವೇ ಮೋದಿಯನ್ನು ಪರಾಭವಗೊಳಿಸಲಿದೆ ಎಂದು ಪ್ರತಿಪಾದಿಸಿದರು.