ತೆಲಂಗಾಣದ ಭುವನಗಿರಿ ಚುನಾವಣಾ ಉಸ್ತುವಾರಿ ಉದಯಕುಮಾರ ಶೆಟ್ಟಿ

| Published : Apr 30 2024, 02:02 AM IST

ತೆಲಂಗಾಣದ ಭುವನಗಿರಿ ಚುನಾವಣಾ ಉಸ್ತುವಾರಿ ಉದಯಕುಮಾರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ತೆಲಂಗಾಣ ರಾಜ್ಯದ ಭುವನಗಿರಿ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಉದಯಕುಮಾರ್ ಶೆಟ್ಟಿ ಅವರನ್ನು ಭುವನಗಿರಿ ಜಿಲ್ಲಾ ಅಧ್ಯಕ್ಷ ಪಾಶಂ ಭಾಸ್ಕರ್ ಅವರು ಶಾಲು ಹೊದಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಬಿಜೆಪಿಯ ಮಂಗಳೂರು ವಿಭಾಗದ ಪ್ರಭಾರಿ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರನ್ನು ತೆಲಂಗಾಣ ರಾಜ್ಯದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಸೋಮವಾರ ತೆಲಂಗಾಣ ರಾಜ್ಯದ ಭುವನಗಿರಿ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಉದಯಕುಮಾರ್ ಶೆಟ್ಟಿ ಅವರನ್ನು ಭುವನಗಿರಿ ಜಿಲ್ಲಾ ಅಧ್ಯಕ್ಷ ಪಾಶಂ ಭಾಸ್ಕರ್ ಅವರು ಶಾಲು ಹೊದಿಸಿ ಗೌರವಿಸಿದರು.

ಭುವನಗಿರಿ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಪಾಪ ರಾವ್, ಚುನಾವಣಾ ಸಂಚಾಲಕ ಲಿಂಗಸ್ವಾಮಿ, ಜಿಲ್ಲಾ ಪ್ರಮುಖರು ಹಾಗೂ ಕರ್ನಾಟಕ ರಾಜ್ಯದಿಂದ ಚುನಾವಣೆ ನಿಮಿತ್ತ ಆಗಮಿಸಿದ ವಿಕಾಸ್ ಪುತ್ತೂರು ಹಾಗೂ ಕೊಡಗಿನ ರಾಬಿನ್ ದೇವಯ್ಯ ಇದ್ದರು.

ತೆಲಂಗಾಣ ರಾಜ್ಯದಲ್ಲಿ ಮೇ 13ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಉದಯಕುಮಾರ್ ಶೆಟ್ಟಿ ಅವರು ಭುವನಗಿರಿ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

* ರಘುಪತಿ ಭಟ್ ಶಿವಮೊಗ್ಗಕ್ಕೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಉಡುಪಿಯ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ ಅವರು ತೀರ್ಥಹಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರು. ರಘುಪತಿ ಭಟ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಯಾಗಿ ಕಾರ್ಯನಿರ್ವಹಿಸುತಿದ್ದಾರೆ.