ಮಕ್ಕಳಿಗೆ ಶರಣರ ತತ್ವಾದರ್ಶಗಳನ್ನು ತಿಳಿಸಿ: ಅಜೀತ್ ಮನ್ನಿಕೇರಿ

| Published : Feb 03 2025, 12:30 AM IST

ಮಕ್ಕಳಿಗೆ ಶರಣರ ತತ್ವಾದರ್ಶಗಳನ್ನು ತಿಳಿಸಿ: ಅಜೀತ್ ಮನ್ನಿಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಹನ್ನೆರಡನೆಯ ಶತಮಾನದಲ್ಲಿ ಶರಣರು ಲಿಂಗ ಪೂಜೆ ಮಾಡುತ್ತಿದ್ದ ಹಾಗೆ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಲಿಂಗವನ್ನು ಪೂಜಿಸುವ ಜೊತೆಗೆ ಶರಣರ ಬಗ್ಗೆ ತಿಳಿಹೇಳಬೇಕೆಂದು ಬಿಇಒ ಅಜೀತ್ ಮನ್ನಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಹನ್ನೆರಡನೆಯ ಶತಮಾನದಲ್ಲಿ ಶರಣರು ಲಿಂಗ ಪೂಜೆ ಮಾಡುತ್ತಿದ್ದ ಹಾಗೆ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಲಿಂಗವನ್ನು ಪೂಜಿಸುವ ಜೊತೆಗೆ ಶರಣರ ಬಗ್ಗೆ ತಿಳಿಹೇಳಬೇಕೆಂದು ಬಿಇಒ ಅಜೀತ್ ಮನ್ನಿಕೇರಿ ಹೇಳಿದರು.

ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಒಂದು ಸಮಾಜ ಮುಂದೆ ಬರಲು ಶಿಕ್ಷಣವಂತರಾಗಬೇಕು. ಆ ನಿಟ್ಟಿನಲ್ಲಿ ಮಡಿವಾಳ ಸಮಾಜದವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿಬೇಕೆಂದರು.

ಹಿರಿಯ ಮುಖಂಡ ಬಸವರಾಜ ಮಡಿವಾಳ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಶಿವಾನಂದ ಮಡಿವಾಳ ಮಾತನಾಡಿ, ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ತಹಸೀಲ್ದಾರ್ ಕಚೇರಿಯ ಸಿರಸ್ತೇದಾರ ಪರಶುರಾಮ ನಾಯಕ, ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ, ಪಿಎಸ್‍ಐ ಬಿ.ಎಚ್. ಕುಂಬಾರ, ಹೆಸ್ಕಾಂ ಕಚೇರಿಯ ಅಧಿಕಾರಿ ಪರಶುರಾಮ ಚವ್ಹಾಣ್ , ವಸತಿ ನಿಲಯ ಪಾಲಕ ಎಸ್.ಎಸ್. ಸೋರಗಾಂವಿ, ಸಮಾಜದ ಮುಖಂಡರಾದ ಬಸವರಾಜ ಆಗಸರ, ರವಿ ಮಡಿವಾಳರ, ಮಂಜುನಾಥ ಮಡಿವಾಳರ, ಜಗದೀಶ ಮಡಿವಾಳರ, ಶ್ರೀಶೈಲ ಮಡಿವಾಳರ, ಬಸವರಾಜ ಮಡಿವಾಳರ, ಪುಂಡಲೀಕ ಮಡಿವಾಳರ, ಸಂಜು ಮಡಿವಾಳರ, ಹನುಮಂತ ಮಡಿವಾಳರ, ಸುರೇಶ ಮಡಿವಾಳರ, ಸಂತೋಷ ಮಡಿವಾಳ, ಈರಪ್ಪ ಢವಳೇಶ್ವರ, ಗುರುನಾಥ ಗಂಗನ್ನವರ, ಸುರೇಶ ನಾಯಕ, ಸಂಗಪ್ಪ ಕಾಳಿಗುದ್ದಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.