ದೇಗುಲಗಳು ಲೋಕಕಲ್ಯಾಣಕ್ಕೆ ಶಕ್ತಿಪೀಠವಾಗಿದೆ. ಗ್ರಾಮಗಳಲ್ಲಿ ಒಗ್ಗಟ್ಟು, ಐಕ್ಯತೆ ಮೂಡಲು ಶ್ರದ್ಧಾಕೇಂದ್ರ ಅವಶ್ಯವಿದೆ. ನಮ್ಮ ಬದುಕು ನಡೆ ನುಡಿಯನ್ನು ತಿದ್ದಿ ತೀಡಲು ಸಂಸ್ಕಾರ ಕಲಿಸಲು ಭಗವಂತನ ಆರಾಧನೆ ಕಾರಣವಾಗಿದೆ.
ಕಿಕ್ಕೇರಿ:
ಸನಾತನ ಸಂಸ್ಕೃತಿಯ ನಮ್ಮ ನಾಡಿನಲ್ಲಿ ಧರ್ಮ, ಸಂಸ್ಕೃತಿ ಉಳಿಯಲು ದೇಗುಲಗಳು ಪ್ರಮುಖ ಪಾತ್ರ ವಹಿಸಿದೆ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.ಹೋಬಳಿಯ ಶೆಟ್ಟಹಳ್ಳಿಯಲ್ಲಿ ಜರುಗಿದ ನೂತನ ಹುರುಚಲಮ್ಮ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ದೇಗುಲ ಅಭಿವೃದ್ಧಿಗಾಗಿ 50 ಸಾವಿರ ರು. ದೇಣಿಗೆ ನೀಡಿ ಮಾತನಾಡಿ, ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಲಭಿಸಲು ದೇಗುಲಗಳ ಶಕ್ತಿಯೇ ಕಾರಣ ಎಂದರು.
ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲಗಳು ಲೋಕಕಲ್ಯಾಣಕ್ಕೆ ಶಕ್ತಿಪೀಠವಾಗಿದೆ. ಗ್ರಾಮಗಳಲ್ಲಿ ಒಗ್ಗಟ್ಟು, ಐಕ್ಯತೆ ಮೂಡಲು ಶ್ರದ್ಧಾಕೇಂದ್ರ ಅವಶ್ಯವಿದೆ. ನಮ್ಮ ಬದುಕು ನಡೆ ನುಡಿಯನ್ನು ತಿದ್ದಿ ತೀಡಲು ಸಂಸ್ಕಾರ ಕಲಿಸಲು ಭಗವಂತನ ಆರಾಧನೆ ಕಾರಣವಾಗಿದೆ ಎಂದರು.ಮಹಿಳೆಯರು ಪೂರ್ಣ ಕುಂಭದೊಂದಿಗೆ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ದೇವಿಗೆ 108 ಕಳಸದ ಗಂಗಾಜಲಾಭಿಷೇಕ ನೆರವೇರಿಸಲಾಯಿತು. ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಭಕ್ತರಿಗೆ ಅನ್ನದಾಸೋಹ ಜರುಗಿತು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಡಾಲುರವಿ, ಸಮಾಜ ಸೇವಕ ಮೊಟ್ಟೆ ಮಂಜು, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ರಘು, ಅಶೋಕ್, ಸುಂದರ್, ಗ್ರಾಮ ಮುಖಂಡರು, ಸುತ್ತಮುತ್ತಲ ಗ್ರಾಮದ ಭಕ್ತರು ಇದ್ದರು.ಉಚಿತ ಹೋಲಿಗೆ ಯಂತ್ರ ತರಬೇತಿ ಶಿಬಿರ ಸಮಾರೋಪಶ್ರೀರಂಗಪಟ್ಟಣ:
ಪಟ್ಟಣದಲ್ಲಿ ರೋಟರಿ ಸಂಸ್ಥೆ ಹಾಗೂ ಶ್ರೀರಂಗನಾಯಕಿ ಸಮಾಜ ಮತ್ತು ಕಾಮಧೇನು ಸ್ವಸಹಾಯ ಸ್ತ್ರೀ ಸಮಾಜದಿಂದ ಮೂರು ತಿಂಗಳ ಉಚಿತ ಹೋಲಿಗೆ ಯಂತ್ರ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಿತು.ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರಾಘವೇಂದ್ರ ಮಾತನಾಡಿ, ಹೊಲಿಗ ತರಬೇತಿಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದರು.
ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದುಕೊಂಡರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕಾಮಧೇನು ಸ್ವಸಹಾಯ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ರೋಟರಿ ಸಂಸ್ಥೆ ಕಾರ್ಯದರ್ಶಿ ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಸರಸ್ವತಿ, ನಿರ್ದೇಶಕಿ ಗಾಯಿತ್ರಿ, ನಳಿನಿ, ಗುಣಶೇಖರಿ, ತರಬೇತಿದಾರರಾದ ರೂಪ ಸಂಘದ ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಇದ್ದರು.