ಜಗತ್ತಿನ ಸರ್ವರ ಉದ್ದಾರಕ್ಕೆ ಅವತಾರ ತಾಳಿದ ಸೂರ್ಯ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಶಾಂತಿ ಮತ್ತು ಕ್ಷಮೇಯ ಸಂದೇಶವನ್ನು ಸಾರುವ ಯೇಸುಕ್ರಿಸ್ತನ ಜನ್ಮ ದಿನ ಮನುಕುಲಕ್ಕೆ ಪಾಠವಾಗಿದ್ದು ಅದನ್ನು ನಾವು ನಿರಂತರವಾಗಿ ಅನುಸರಿಸಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಸುಭಾಷ್ ನಗರದ ದಿವ್ಯ ಕರುಣೆಯ ದೇವಾಲಯದಲ್ಲಿ ಫಾದರ್ ಸಿ.ರಾಯಪ್ಪ ಮತ್ತು ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಶುಭಾಷಯ ಕೋರಿ ಮಾತನಾಡಿದ ಅವರು ತನ್ನ ಜೀವಿತಾವಧಿಯಲ್ಲಿ ಸರ್ವರಿಗೂ ಒಳಿತನ್ನೇ ಬಯಸಿದ್ದ ಆ ಮಹಾದೇವ ಜಗತ್ತಿಗೆ ಮಾದರಿ ಎಂದರು. ಕ್ರೈಸ್ತ ಧರ್ಮದ ನಂಬಿಕೆಯ ಪ್ರಕಾರ ಯೇಸು ಮಹಾಪ್ರಭು ಮೇರಿ ಮತ್ತು ಜೋಸೇಫ್ ದಂಪತಿಗಳ ಮಗನಾಗಿ ಬೆತ್ಲೆಹೇಮ್ ನಲ್ಲಿ ಜನಿಸಿ ಜಗತ್ತಿನ ಸರ್ವರ ಉದ್ದಾರಕ್ಕೆ ಅವತಾರ ತಾಳಿದ ಸೂರ್ಯ ಎಂದು ಅವರು ಹೇಳಿದರು. ದಿವ್ಯಕರುಣೆಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ನೆರೆದಿದ್ದವರಿಗೆ ಕೇಕ್ ವಿತರಿಸಿ ಕ್ರಿಸ್ ಮಸ್ ಶುಭಾಷಯ ಕೋರಿದರು. ಪುರಸಭೆ ಮಾಜಿ ಅಧ್ಯಕ್ಷ ಶಿವುನಾಯಕ್, ಮಾಜಿ ಸದಸ್ಯ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ನಗರಾಧ್ಯಕ್ಷ ಎಂ.ಜೆ. ರಮೇಶ್, ಕಾರ್ಯದರ್ಶಿ ರಾಜೇಗೌಡ, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಆದರ್ಶ, ಫಿಲೀಪ್, ಕಿರಣ್, ಪ್ರಸನ್ನಕುಮಾರ್ ಇದ್ದರು.