ಸಾರಾಂಶ
ಮಾಗಡಿ: ಪುರಾತನ ಐತಿಹಾಸಿಕ ದೇವಸ್ಥಾನ ಜೀರ್ಣೋದ್ಧಾರ ಮಾಡುವುದರಿಂದ ಗ್ರಾಮಕ್ಕೆ ಒಳಿತಾಗಲಿದೆ ಎಂದು ನಡುವಿನ ಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಸಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಮಾಗಡಿ: ಪುರಾತನ ಐತಿಹಾಸಿಕ ದೇವಸ್ಥಾನ ಜೀರ್ಣೋದ್ಧಾರ ಮಾಡುವುದರಿಂದ ಗ್ರಾಮಕ್ಕೆ ಒಳಿತಾಗಲಿದೆ ಎಂದು ನಡುವಿನ ಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಸಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕಲ್ಯಾಣ ದೇವರ ಮಠದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪುರಾತನ ದೇವಸ್ಥಾನವನ್ನು ಗ್ರಾಮಸ್ಥರೆಲ್ಲರೂ ಸೇರಿ ಮತ್ತೊಮ್ಮೆ ಜೀರ್ಣೋದ್ಧಾರ ಮಾಡಿರುವುದು ಉತ್ತಮ ಕೆಲಸ. ಜೀರ್ಣೋದ್ಧಾರ ಮಾಡುವುದರಿಂದ ದೇವರಿಗೆ ಸಾಕಷ್ಟು ಶಕ್ತಿ ಬರಲಿದ್ದು ಮತ್ತು ಗ್ರಾಮಕ್ಕೆ ಒಳಿತಾಗುವ ನಿಟ್ಟಿನಲ್ಲಿ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರವಾಗಬೇಕು ಎಂದು ತಿಳಿಸಿದರು.ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ದೇವಸ್ಥಾನ ಜೀರ್ಣೋದ್ಧಾರ ಮಾಡಲು ಸ್ವಾಮೀಜಿಗಳ ಮೊರೆ ಹೋಗಿದ್ದು ಸ್ವಾಮೀಜಿಗಳ ಇಚ್ಛೆಯಂತೆ ಜೀರ್ಣೋದ್ಧಾರ ಸಮಿತಿಯಿಂದ ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭಿಸಲಾಗುವುದು. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನೊಣವಿನಕೆರೆ ಶ್ರೀಗಳು ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಗುರುಲಿಂಗಪ್ಪ, ಕಾರ್ಯದರ್ಶಿ ಸದಾಶಿವಯ್ಯ, ಸದಸ್ಯರಾದ ರವಿಕುಮಾರ್, ಜಯರಾಮಯ್ಯ, ಸಿದ್ದಲಿಂಗಯ್ಯ, ರೇಣುಕಪ್ಪ, ರೇವಣಸಿದ್ದಯ್ಯ, ಸುನೀಲ್, ಮಹಾಲಿಂಗಯ್ಯ, ಗಂಗಣ್ಣ, ಶಂಕರ್ ಇತರರು ಭಾಗವಹಿಸಿದ್ದರು. 31ಮಾಗಡಿ1:ಮಾಗಡಿ ತಾಲೂಕಿನ ಕಲ್ಯಾಣ ದೇವರಮಠ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಸಿಕೇಂದ್ರದ ಶಿವಯೋಗೇಶ್ವರ ಸ್ವಾಮೀಜಿ ಭೇಟಿ ನೀಡಿ ಆಶೀರ್ವಾದ ನೀಡಿದರು.