ಸಾರಾಂಶ
ರಟ್ಟೀಹಳ್ಳಿ: ಸನಾತನ ಸಂಸ್ಕೃತಿಯಲ್ಲಿ ಮಠ- ಮಂದಿರಗಳು, ಆಚಾರ ವಿಚಾರಗಳು ಮನುಷ್ಯನಿಗೆ ನೆಮ್ಮದಿ ನೀಡುವ ಸ್ಥಳಗಳು. ಅವುಗಳ ಅಭಿವೃದ್ಧಿ ನಮ್ಮ ಗುರಿಯಾಗಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಪಿ.ಡಿ. ಬಸನಗೌಡ್ರ ಅಭಿಪ್ರಾಯಪಟ್ಟರು.ಪಟ್ಟಣದ ಕೋಟೆ ಓಣಿಯಲ್ಲಿರುವ ಕರಿಬಸಜ್ಜಯ್ಯ ದೇವಸ್ಥಾನದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ನೂತನ ಪಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋಟೆ ಭಾಗದಲ್ಲಿರುವ ಕರಬಸಜ್ಜಯ್ಯನವರ ದೇವಸ್ಥಾನ ಪಟ್ಟಣದ ಸುತ್ತಮುತ್ತಲಿನ ಸಾವಿರಾರು ಭಕ್ತರನ್ನು ಹೊಂದಿದ್ದು, ದೇವಸ್ಥಾನ ನಿರ್ಮಾಣಕ್ಕೆ ಅನೇಕ ವರ್ಷಗಳ ಶ್ರಮದ ಫಲವಾಗಿ ₹30 ಲಕ್ಷ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಿದ್ದು, ಅದು ಕೇವಲ ಭಕ್ತರಿಂದ ಕ್ರೋಡಿಕರಿಸಿ ನಿರ್ಮಾಣ ಮಾಡಿರುವುದು ಅತ್ಯಂತ ಹೆಮ್ಮೇಯ ಸಂಗತಿ ಎಂದರು.ದೇವಸ್ಥಾನ ಟ್ರಸ್ಟ್ ಕಮಿಟಿಯವರು ದೇವಸ್ಥಾನದಿಂದ ಕುಮದ್ವತಿ ನದಿಯವರೆಗೆ ಭಕ್ತರ ಅನುಕೂಲಕ್ಕಾಗಿ ರಸ್ತೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದ್ದು, ಸದ್ಯದರಲ್ಲೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಚುನಾವಣೆ ನಂತರ ಅವರ ಬೇಡಿಕೆಯನ್ನು ನಮ್ಮೆಲ್ಲ ಸದಸ್ಯರ ಹಾಗೂ ಶಾಸಕರ ಗಮನ ಸೆಳೆದು ಆದಷ್ಟು ಬೇಗ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.ಪಪಂ ಸದಸ್ಯ ರವಿ ಹದಡೇರ ಮಾತನಾಡಿ, ಪಕ್ಷಾತೀತವಾಗಿ ಪಟ್ಟಣದ ಸಮಗ್ರ ಅಭಿವೃದ್ಧಿ ಮಾಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಜನತೆಗೆ ಮೂಲ ಸೌಕರ್ಯಗಳಾದ ಕರೆಂಟ್, ನೀರು, ರಸ್ತೆ, ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.ಎಸ್.ಎಂ. ಪೊಲೀಸಗೌಡ್ರ, ಎಸ್.ಬಿ. ಗೊಣಗೇರಿ, ಜಿ.ಎಸ್. ಓಲೇಕಾರ, ರವೀಂದ್ರ ಎಚ್.ಎಂ., ಅಶೋಕ ಕೊಂಡ್ಲಿ, ಚನ್ನವೀರ ಚಕ್ರಸಾಲಿ, ಅಬ್ಬಾಸ ಗೋಡಿಹಾಳ, ಪಪಂ ಸದಸ್ಯ ರವಿ ಮುದಿಯಪ್ಪನವರ, ವೀರನಗೌಡ ಪ್ಯಾಟಿಗೌಡ್ರ, ಬಸವರಾಜ ಆಡಿನವರ, ಮಲ್ಲಮ್ಮ ಕಟ್ಟೆಕಾರ, ಶಿವಕುಮಾರ ಉಪ್ಪಾರ, ಬಸವರಾಜ ಕಟ್ಟಿಮನಿ, ಮಖಬೂಲ್ ಮುಲ್ಲಾ, ಶ್ರೀದೇವಿ ಬೈರೋಜಿಯವರ, ಅಂಜುಳಾ ಅಗಡಿ, ಲಕ್ಷ್ಮೀ ಚಿಕ್ಕಮೊರ, ಲಲಿತಾ ಚನ್ನಗೌಡ್ರ ಇದ್ದರು.