ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳು

| Published : Jul 20 2025, 01:15 AM IST

ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಭಾರತದ ಸನಾತನ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಹಾಗೂ ನಮ್ಮ ಪರಂಪರೆ ಮತ್ತು ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕರು ಎ ಮಂಜು ತಿಳಿಸಿದರು. ಇಂದಿನ ದಿನಗಳಲ್ಲಿ ಅನೇಕ ಒತ್ತಡಗಳಲ್ಲಿ ನಾವು ಕೆಲವು ಸಮಯ ಬದುಕಿನಲ್ಲಿ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ನಾವು ಹಿಡಿದ ಕೆಲಸಗಳು ಕೈಗೂಡುವುದಲ್ಲದೆ ಮನಸ್ಸಿಗೆ, ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಸಹಕಾರ ದೊರೆಯುತ್ತದೆ ಎಂದರು.

ರಾಮನಾಥಪುರ: ನಮ್ಮ ಭಾರತದ ಸನಾತನ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಹಾಗೂ ನಮ್ಮ ಪರಂಪರೆ ಮತ್ತು ದೇವಾಲಯಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕರು ಎ ಮಂಜು ತಿಳಿಸಿದರು.

ರಾಮನಾಥಪುರದ ಕಾವಲು ಅಮ್ಮ ದೇವಾಲಯದಲ್ಲಿ ಅಷಾಢ ಮಾಸದ ಜಾತ್ರಾ ಮಹೋತ್ಸವದ ಪೂಜೆಯಲ್ಲಿ ಭಾಗವಹಿದ ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅನೇಕ ಒತ್ತಡಗಳಲ್ಲಿ ನಾವು ಕೆಲವು ಸಮಯ ಬದುಕಿನಲ್ಲಿ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ನಾವು ಹಿಡಿದ ಕೆಲಸಗಳು ಕೈಗೂಡುವುದಲ್ಲದೆ ಮನಸ್ಸಿಗೆ, ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಸಹಕಾರ ದೊರೆಯುತ್ತದೆ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ನರಸಿಂಹಮೂರ್ತಿ, ಪುರೋಹಿತರು ಸ್ವಾಮಿಯವರು, ಶ್ರೀನಾಥ್ , ಗುಂಡಣ್ಣ, ಮೋಹನ್, ಕೃಷ್ಣ, ಗ್ರಾಮ ಪಂಚಾಯತಿ ಮಾದೇಶ್, ಉಪಾಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.