ದೇವಾಲಯಗಳು ಮನುಷ್ಯನ ಶ್ರದ್ಧಾ ಕೇಂದ್ರಗಳು

| Published : Jan 08 2024, 01:45 AM IST / Updated: Jan 08 2024, 02:02 PM IST

ಸಾರಾಂಶ

ಶೆಟ್ಟಿಕೊಪ್ಪ ಸಮೀಪದ ಅರಸಿನಗೆರೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಾಯದ ಆವರಣ ಸ್ವಚ್ಛತಾ ಕಾರ್ಯಕ್ರಮದಲ್ಲಿ ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳಾಗಿವೆ ಎಂದು ಧ.ಗ್ರಾ.ಯೋಜನೆ ಶೆಟ್ಟಿಕೊಪ್ಪ ವಲಯ ಮೇಲ್ವೀಚಾರಕ ಸತೀಶ್‌ ತಿಳಿಸಿದರು.

ನರಸಿಂಹರಾಜಪುರ: ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳಾಗಿವೆ ಎಂದು ಧ.ಗ್ರಾ.ಯೋಜನೆ ಶೆಟ್ಟಿಕೊಪ್ಪ ವಲಯ ಮೇಲ್ವೀಚಾರಕ ಸತೀಶ್‌ ತಿಳಿಸಿದರು.

ಭಾನುವಾರ ಶೆಟ್ಟಿಕೊಪ್ಪ ಸಮೀಪದ ಅರಸಿನಗೆರೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಾಯದ ಆವರಣ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಕರ ಸಂಕ್ರಾಂತಿ ಪ್ರಯುಕ್ತ ಸ್ವಚ್ಛತಾ ಸಪ್ತಾಹ ಹಮ್ಮಿಕೊಂಡಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ದೇಗುಲಗಳು ಆಕರ್ಷಣೆಯ ಕೇಂದ್ರಗಳಾಗಬೇಕು. ಅಲ್ಲಿನ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಅಭಿಲಾಶೆಯು ಇದೇ ಆಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾ ಕೇಂದ್ರಗಳಲ್ಲಿ ವೀರೇಂದ್ರ ಹೆಗಡೆ ಅ‍ವರ ಮಾರ್ಗದರ್ಶನದಂತೆ ಸ್ವಚ್ಛ ಮಾಡುತ್ತೇವೆ ಎಂದರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಮಹೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ರೇವಣ ಸಿದ್ದೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ.ಎನ್‌.ಸುಧಾಕರ್‌, ಕಾರ್ಯದರ್ಶಿ ಎ.ಡಿ.ಉಮೇಶ್‌, ಗೌರವಾಧ್ಯಕ್ಷ ಎ.ಎಸ್‌. ಮಂಜುನಾಥ್‌ ಹಾಗೂ ಸಮಿತಿ ಸದಸ್ಯ ಕೀರ್ತನ್‌, ವಿಪತ್ತು ನಿರ್ವಹಣಾ ಘಟಕದ ಪಿ.ಮಂಜುನಾಥ್‌, ಪ್ರಶಾಂತ್‌, ಬಾಬು, ಧ.ಗ್ರಾ.ಯೋಜನೆಯ ಕಡಹಿನಬೈಲು ಒಕ್ಕೂಟದ ಸೇವಾ ಪ್ರತಿನಿಧಿ ಸುದರ್ಶನ್‌,ಮಹಿಳಾ ಘಟಕದ ಸದಸ್ಯರು ಇದ್ದರು.