ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುತ್ತವೆ: ನನ್ಯ ಅಚ್ಚುತ ಮೂಡೆತ್ತಾಯ

| Published : Apr 26 2024, 12:50 AM IST

ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುತ್ತವೆ: ನನ್ಯ ಅಚ್ಚುತ ಮೂಡೆತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮಂಗಳವಾರ ನಡೆದ ಎರಡನೇ ದಿನದ ಧಾರ್ಮಿಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದೇವಸ್ಥಾನಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಜನರನ್ನು ಒಟ್ಟು ಸೇರಿಸುತ್ತದೆ. ಜೀನವಕ್ಕೆ ಪೂರಕವಾದ ಸಂಸ್ಕಾರಗಳ ಸಂದೇಶ ನೀಡಲಿದೆ. ಎಲ್ಲ ವರ್ಗದ ಜನರನ್ನು ಒಟ್ಟು ಸೇರಿಸಿ ಊರಿಗೆ ಒಗ್ಗಟ್ಟು ತರುವ ಕೆಲಸ ದೇವಸ್ಥಾನದ ಮೂಲಕ ನಡೆಯುತ್ತಿದೆ ಎಂದು ಶ್ರೀಕ್ಷೇತ್ರ ಹನುಗಿರಿಯ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಅವರು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮಂಗಳವಾರ ನಡೆದ ಎರಡನೇ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರ ನಡೆಸಿ, ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ಜನರು ಪುನೀತರಾಗುವ ಸುಸಂದರ್ಭದಲ್ಲಿದ್ದೇವೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕುಂಠಿತವಾಗದೆ ಭಕ್ತಾದಿಗಳಿಂದ ಕ್ಷೇತ್ರ ಬೆಳಗುವ ಕಾರ್ಯ ನಿರಂತರವಾಗಿರಬೇಕು. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕ್ಷೇತ್ರಕ್ಕೆ ಆಗಮಿಸಿ, ಕ್ಷೇತ್ರದ ಅಂದ, ಚಂದ ಉಳಿಸುವ ಕಾರ್ಯವಾಗಬೇಕು ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೆ.ಎಸ್. ರವೀಂದ್ರನಾಥ ರೈ ಬಳ್ಳಮಜಲು, ಉದ್ಯಮಿ ಹರ್ಷಕುಮಾರ್ ರೈ ಮಾಡಾವು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿದರ್, ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಸುಧಾ ನಾಗೇಶ್ ರಾವ್, ಉದ್ಯಮಿ ಶಿವಶಂಕರ ಭಟ್ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಸತೀಶ್ ಗೌಡ, ನಿವೃತ್ತ ಎಸ್.ಐ ರಾಮ ನಾಯ್ಕ, ಶಿವರಾಮ ಕಾರಂತ ಶಿವಕೃಪಾ ಆರ್ಯಾಪು, ಯಮುನಾ ಬೋರ್‌ವೆಲ್ಸ್ ಮಾಲಕಿ ದಿವ್ಯಾ ಕೃಷ್ಣ ಶೆಟ್ಟಿ, ಕೃಷಿಕ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಪಣಿರಾಜ್ ಜೈನ್ ಗುತ್ತಿನಮನೆ, ಮಂಜಪ್ಪ ರೈ ಬಾರಿಕೆ ಮನೆ, ಗಂಗಾಧರ ಅಮೀನ್ ಹೊಸಮನೆ, ಸಂತೋಷ್ ರೈ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಗಜೀವನ್ ದಾಸ್ ರೈ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಮತ್ತು ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.