ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 10 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 10 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.ಮಂಡ್ಯ, ಬೀದರ್, ಮೈಸೂರು, ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಬೆಂಗಳೂರು ನಗರ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ 10 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 47 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿ ಒಟ್ಟು ₹35.31 ಕೋಟಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 10 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?1.ಪಿ.ಕೃಷ್ಣಮೂರ್ತಿ (ಶಾಖಾಧೀಕ್ಷಕ, ಎಲೆಕ್ಟ್ರಾನಿಕ್‌ಸಿಟಿ ಆರ್‌ಟಿಓ ಕಚೇರಿ):7 ಕಡೆ ದಾಳಿ, 7 ನಿವೇಶನ, 4 ವಾಸದ ಮನೆ, 5.30 ಎಕರೆ ಕೃಷಿ ಜಮೀನು, ₹22 ಲಕ್ಷ ನಗದು, ₹32 ಲಕ್ಷ ಮೌಲ್ಯದ ಚಿನ್ನ, ₹22 ಲಕ್ಷ ಮೌಲ್ಯದ ವಾಹನ, ₹16 ಲಕ್ಷ ಬೆಲೆಬಾಳುವ ಇತರೆ ವಸ್ತು ಸೇರಿ ಒಟ್ಟು ₹4.26 ಕೋಟಿ ಮೌಲ್ಯದ ಆಸ್ತಿ.
2.ಸಿ.ರಾಮಸ್ವಾಮಿ (ರಾಜಸ್ವ ನಿರೀಕ್ಷಕ, ಟೌನ್ ಮುನ್ಸಿಪಾಲಿಟಿ, ಹೂಟಗಳ್ಳಿ, ಮೈಸೂರು):3 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು, ₹1.56 ಲಕ್ಷ ನಗದು, ₹86.26 ಲಕ್ಷ ಮೌಲ್ಯದ ಚಿನ್ನ, ₹14.80 ಲಕ್ಷ ಮೌಲ್ಯದ ವಾಹನ, ₹10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು ₹2.77 ಕೋಟಿ ಮೌಲ್ಯದ ಆಸ್ತಿ.
3.ಜೆ.ಪ್ರಭು (ಸಹಾಯಕ ನಿರ್ದೇಶಕ, ದಾವಣಗೆರೆ ಎಪಿಎಂಸಿ):4 ಕಡೆ ದಾಳಿ, 5 ನಿವೇಶನ, 3 ವಾಸದ ಮನೆ, 3 ಎಕರೆ ಕೃಷಿ ಜಮೀನು, ₹7.20 ಲಕ್ಷ ನಗದು, ₹85.60 ಲಕ್ಷ ಮೌಲ್ಯದ ಚಿನ್ನ, ₹12 ಲಕ್ಷ ಮೌಲ್ಯದ ವಾಹನ, ₹40.50 ಲಕ್ಷ ಮೌಲ್ಯದ ಇತರೆ ಹಾಗೂ ಗೃಹೋಪಯೋಗಿ ವಸ್ತು ಸೇರಿ ಒಟ್ಟು ₹2.49 ಕೋಟಿ ಮೌಲ್ಯದ ಆಸ್ತಿ.
4.ಸಿ.ಪುಟ್ಟಸ್ವಾಮಿ (ಸಮುದಾಯ ಸಂಘಟನಾಧಿಕಾರಿ, ಮಂಡ್ಯ ಟೌನ್ ನಗರಸಭೆ ಕಾರ್ಯಾಲಯ):3 ಕಡೆ ದಾಳಿ, 8 ನಿವೇಶನ, 2 ವಾಸದ ಮನೆ, 12 ಎಕರೆ ಕೃಷಿ ಜಮೀನು, ₹1.75 ಲಕ್ಷ ನಗದು, ₹25 ಲಕ್ಷ ಮೌಲ್ಯದ ಚಿನ್ನ, ₹33 ಲಕ್ಷ ಮೌಲ್ಯದ ವಾಹನ, ₹29.25 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿ ಒಟ್ಟು ₹4.37 ಕೋಟಿ ಮೌಲ್ಯದ ಆಸ್ತಿ.
5.ಪ್ರೇಮ್ ಸಿಂಗ್( ಮುಖ್ಯ ಅಭಿಯಂತರ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಚೇರಿ, ಕಾಲುವೆ ವಿಭಾಗ-1, ಭೀಮರಾಯನಗುಡಿ, ಶಹಾಪುರ, ಯಾದಗಿರಿ ಜಿಲ್ಲೆ):4 ಕಡೆ ದಾಳಿ, 4 ನಿವೇಶನಗಳು, 1 ವಾಸದ ಮನೆ, 24.30 ಎಕರೆ ಕೃಷಿ ಜಮೀನು, ₹62 ಲಕ್ಷ ಬ್ಯಾಂಕ್ ಠೇವಣಿ, ₹50.75 ಲಕ್ಷ ಮೌಲ್ಯದ ಚಿನ್ನ, ₹42.48 ಲಕ್ಷ ಮೌಲ್ಯದ ವಾಹನ, ₹8.83 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹4.07 ಕೋಟಿ ಮೌಲ್ಯದ ಆಸ್ತಿ.
6.ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ( ಕಾರ್ಯಪಾಲಕ ಅಭಿಯಂತರ, ಡಿಯುಡಿಸಿ ಹಾವೇರಿ ಜಿಲ್ಲೆ):6 ಕಡೆ ದಾಳಿ, 14 ನಿವೇಶನ, 3 ವಾಸದ ಮನೆ, ₹10.44 ಲಕ್ಷ ನಗದು, ₹25.40 ಲಕ್ಷ ಮೌಲ್ಯದ ಚಿನ್ನ, ₹15 ಲಕ್ಷ ಮೌಲ್ಯದ ವಾಹನ, ₹1.18 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು ₹5.36 ಕೋಟಿ ಮೌಲ್ಯದ ಆಸ್ತಿ.
7.ಸುಭಾಷ್ ಚಂದ್ರ ನಾಟೀಕರ್( ಸಹಾಯಕ ಪ್ರಾಧ್ಯಾಪಕ, ಸಮಾಜಶಾಸ್ತ್ರ ವಿಭಾಗ, ಕವಿವಿ, ಧಾರವಾಡ):6 ಕಡೆ ದಾಳಿ, 5 ನಿವೇಶನಗಳು, 3 ವಾಸದ ಮನೆ, 18.21 ಎಕರೆ ಕೃಷಿ ಜಮೀನು, ₹1.12 ಲಕ್ಷ ನಗದು, ₹6.75 ಲಕ್ಷ ಮೌಲ್ಯದ ಚಿನ್ನ, ₹37 ಲಕ್ಷ ಮೌಲ್ಯದ ವಾಹನಗಳು, ₹8 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು ₹3.11 ಕೋಟಿ ಮೌಲ್ಯದ ಆಸ್ತಿ.
8. ಸತೀಶ್ ರಾಮಣ್ಣ ಕಟ್ಟಿಮನಿ(ಹಿರಿಯ ಪಶು ಪರಿವೀಕ್ಷಕ, ಪ್ರಾಥಮಕ ಪಶು ಆಸ್ಪತ್ರೆ, ಹುಯಿಲಗೋಳ, ಗದಗ ಜಿಲ್ಲೆ):5 ಕಡೆ ದಾಳಿ, 2 ವಾಸದ ಮನೆ, 4 ಎಕರೆ ಕೃಷಿ ಜಮೀನು, ₹17.16 ಲಕ್ಷ ನಗದು, ₹74.80 ಲಕ್ಷ ಮೌಲ್ಯದ ಚಿನ್ನ, ₹25 ಲಕ್ಷ ಮೌಲ್ಯದ ವಾಹನ, ₹36.60 ಲಕ್ಷ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಠೇವಣಿ, ಷೇರು ಸೇರಿ ಒಟ್ಟು ₹2.09 ಕೋಟಿ ಮೌಲ್ಯದ ಆಸ್ತಿ.
9.ಡಿ.ಎಂ.ಗಿರೀಶ್ (ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ, ಮಡಿಕೇರಿ ಉಪ ವಿಭಾಗ, ಕೊಡಗು ಜಿಲ್ಲೆ):4 ಕಡೆ ದಾಳಿ, 4 ನಿವೇಶನ, 1 ವಾಸದ ಮನೆ, ₹5.53 ಲಕ್ಷ ನಗದು, ₹1.81 ಕೋಟಿ ಮೌಲ್ಯದ ಚಿನ್ನ, ₹9.08 ಲಕ್ಷ ಮೌಲ್ಯದ ವಾಹನ, ₹40 ಲಕ್ಷ ಮೌಲ್ಯದ ಗೃಹೋಪಯೋಗಿ ಮತ್ತು ಇತರೆ ವಸ್ತು ಸೇರಿ ಒಟ್ಟು ₹4.26 ಕೋಟಿ ಮೌಲ್ಯದ ಆಸ್ತಿ.
10.ಸಿ.ಎನ್.ಲಕ್ಷ್ಮೀಪತಿ ( ಪ್ರಥಮ ದರ್ಜೆ ಸಹಾಯಕ, ಸಿಮ್ಸ್ ಮೆಡಿಕಲ್ ಕಾಲೇಜು, ಶಿವಮೊಗ್ಗ):5 ಕಡೆ ದಾಳಿ, 3 ವಾಸದ ಮನೆ, 3.20 ಎಕರೆ ಕೃಷಿ ಜಮೀನು, ₹12.01 ಲಕ್ಷ ನಗದು, ₹23.29 ಲಕ್ಷ ಮೌಲ್ಯದ ಚಿನ್ನ, ₹23.04 ಲಕ್ಷ ಮೌಲ್ಯದ ವಾಹನ, ₹27.47 ಲಕ್ಷ ಮೌಲ್ಯದ ಗೃಹೋಪಯೋಗಿ ಮತ್ತು ಇತರೆ ವಸ್ತು ಸೇರಿ ಒಟ್ಟು ₹2.49 ಕೋಟಿ ಮೌಲ್ಯದ ಆಸ್ತಿ.
------ಬಾಕ್ಸ್-
ಯಾವುದು ಎಷ್ಟೆಷ್ಟು ಪತ್ತೆ?ನಿವೇಶನಗಳು, ಮನೆಗಳು, ಕೃಷಿ ಭೂಮಿ- ₹22.31 ಕೋಟಿ ಮೌಲ್ಯ
ನಗದು- ₹78.40 ಲಕ್ಷಚಿನ್ನಾಭರಣಗಳು- ₹5.91 ಕೋಟಿ ಮೌಲ್ಯ
ವಾಹನಗಳು- ₹2.33 ಕೋಟಿ ಮೌಲ್ಯಇತರೆ ಬೆಲೆಬಾಳುವ ವಸ್ತುಗಳು- ₹3.96 ಕೋಟಿ ಮೌಲ್ಯ