ಮೃತನನ್ನು ಪಟ್ಟಣದ ನಾಗದೇವಿ ರಸ್ತೆಯ ನಿವಾಸಿ ಉಮೇಶ ನಾರಾಯಣ ಹರ್ಮಲಕರ್(೬೨) ಎಂದು ಗುರುತಿಸಲಾಗಿದೆ.
ಕುಮಟಾ: ಅತಿವೇಗದಿಂದ ಚಲಾಯಿಸಿಕೊಂಡು ಬಂದ ಲಾರಿಯೊಂದು ರಸ್ತೆಯಂಚಿಗೆ ವ್ಯಾಪಾರ ಮಾಡುತ್ತಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಎಪಿಎಂಸಿ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುರುವಾರ ನಡೆದಿದೆ.
ಮೃತನನ್ನು ಪಟ್ಟಣದ ನಾಗದೇವಿ ರಸ್ತೆಯ ನಿವಾಸಿ ಉಮೇಶ ನಾರಾಯಣ ಹರ್ಮಲಕರ್(೬೨) ಎಂದು ಗುರುತಿಸಲಾಗಿದೆ. ಮಂಗಳೂರಿಗೆ ಗಾಜುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಯು ಎಪಿಎಂಸಿ ಎದುರಿನ ಇಳಿಜಾರಿನ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಂಚಿನ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಚಾಲಕ ಬಗ್ಗೋಣದ ವಸಂತ ಮಾದೇವ ನಾಯ್ಕ ಗಾಯಗೊಂಡಿದ್ದಾರೆ.ಇದೇ ವೇಳೆ ಲಾರಿಯು ಪಕ್ಕದಲ್ಲಿದ್ದ ಎಳನೀರು ರಾಶಿಯ ಮೇಲೆ ಹರಿದು ವ್ಯಾಪಾರ ಮಾಡುತ್ತಿದ್ದ ಉಮೇಶ ನಾರಾಯಣ ಹರ್ಮಲಕರ್‌ಗೆ ಡಿಕ್ಕಿ ಹೊಡೆದಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಲಗೇಜ್ ರಿಕ್ಷಾ ಚಾಲಕ ಬಗ್ಗೋಣದ ವಸಂತ ಮಾದೇವ ನಾಯ್ಕ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಅಪಘಾತಕ್ಕೆ ಕಾರಣನಾದ ಆರೋಪಿ ಲಾರಿ ಚಾಲಕ ಹಾಗೂ ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದೇ, ರಸ್ತೆಯಲ್ಲಿ ಡಿವೈಡರ್ ಅಳವಡಿಸದೇ ಇರುವ ಐಆರ್‌ಬಿ ಕಂಪನಿ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವಾಹನ ಬಡಿದು ವ್ಯಕ್ತಿ ಸಾವು
ಕುಮಟಾ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಅಪರಿಚಿತ ವಾಹನ ಬಡಿದು ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಮಿರ್ಜಾನದ ನಾಗೂರ ಕ್ರಾಸ್ ಬಳಿ ಬುಧವಾರ ನಡೆದಿದೆ.ಮಿರ್ಜಾನ ಎತ್ತಿನಬೈಲ ನಿವಾಸಿ ಚಾಲಕ ವೃತ್ತಿಯ ಭರತ ನಕುಲ ಪಟಗಾರ(೩೫) ಮೃತ ವ್ಯಕ್ತಿ. ನಾಗೂರ ಕ್ರಾಸ್ ಬಳಿ ಹೆದ್ದಾರಿ ದಾಟುವಾಗ ಅಪರಿಚಿತ ವಾಹನವು ಅತಿವೇಗದಿಂದ ಬಂದು ಗುದ್ದಿ ಪರಾರಿಯಾಗಿದೆ. ಇದರಿಂದ ತಲೆ ಹಾಗೂ ಮೈಗೆ ತೀವ್ರ ಗಾಯಗೊಂಡ ಭರತ ಪಟಗಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮೃತನ ತಂದೆ ನಕುಲ ಗಣೇಶ ಪಟಗಾರ ನೀಡಿದ ದೂರಿನಂತೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.