ತೆಂಕನಿಡಿಯೂರು: ಭಜನಾ ಸಂಘ, ನೂತನ ಗರ್ಭಗುಡಿ ಉದ್ಘಾಟನೆ

| Published : May 15 2025, 01:44 AM IST

ಸಾರಾಂಶ

ತೆಂಕನಿಡಿಯೂರಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ನೂತನ ಗರ್ಭಗುಡಿ ಹಾಗೂ ಭಜನಾ ಮಂದಿರದ ಉದ್ಘಾಟನೆಯು ಇತ್ತೀಚೆಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ವಿಶ್ವನಾಥ್ ಪುರೋಹಿತ್ ಮಾರ್ಗದರ್ಶನದಲ್ಲಿ ನೆರವೇರಿತು. ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೆಂದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕನಿಡಿಯೂರಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ನೂತನ ಗರ್ಭಗುಡಿ ಹಾಗೂ ಭಜನಾ ಮಂದಿರದ ಉದ್ಘಾಟನೆಯು ಇತ್ತೀಚೆಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ವಿಶ್ವನಾಥ್ ಪುರೋಹಿತ್ ಮಾರ್ಗದರ್ಶನದಲ್ಲಿ ನೆರವೇರಿತು.

ಈ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೆಂದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಅವರು ಆಶೀರ್ವಚನ ನೀಡಿ, ಭಜನಾ ಮಂದಿರಗಳು, ಬಾಲಸಂಸ್ಕಾರ ಕೇಂದ್ರಗಳು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ನಮ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಿಂದೆ ಬಾಲಸಂಸ್ಕಾರ ಕೇಂದ್ರಗಳಲ್ಲಿ ಕಲಿತ ಮಕ್ಕಳೇ ಕಾರ್ಯಕರ್ತರಾಗಿ ಮುನ್ನಡೆಸುತ್ತಿರುವುದು ಅಭಿನಂದನಾರ್ಹ. ನೂತನ ಗರ್ಭಗುಡಿ ನಿರ್ಮಾಣದಲ್ಲಿ ತೊಡಗಿಸಿಕೊಂಡ ಸರ್ವರಿಗೂ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಭಜನಾ ಸಂಘದ ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಆನೆಗುಂದಿ ಗುರು ಸೇವಾ ಪರಿಷತ್ ತೆಂಕನಿಡಿಯೂರು ಮಂಡಲದ ಅಧ್ಯಕ್ಷ ದಯಾನಂದ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಗರ್ಭಗುಡಿ ಹಾಗೂ ಭಜನಾಮಂದಿರದ ಕಟ್ಟಡದ ದಾನಿ ಎಂ. ವಾಸುದೇವ ಆಚಾರ್ಯರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಸುಶೀಲ ವಾದಿರಾಜ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರ ಅಧ್ಯಕ್ಷ ಪ್ರದೀಪ್ ಆಚಾರ್ಯ ಹಾಗೂ ತೆಂಕನಿಡಿಯೂರು ಕೂಡುವಳಿಕೆಯ ಗ್ರಾಮ ಮೊಕ್ತೇಸರ ಪ್ರದೀಪ ಆಚಾರ್ಯ ತೆಂಕನಿಡಿಯೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್‌ ಕೆ. ಮುರಳೀಧರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮೇಶ್ ಜೆ. ಆಚಾರ್ಯ ಸ್ವಾಗತಿಸಿ, ರವೀಂದ್ರ ಆಚಾರ್ಯ ವಂದಿಸಿದರು. ಸುಷ್ಮಾ ರಾಜೇಶ್ ಆಚಾರ್ಯ ನಿರೂಪಿಸಿದರು. ರತ್ನಾವತಿ ಜೆ. ಬೈಕಾಡಿ, ಸುಚಿತ್ರ, ಮಾಧವ ಕೆ ಆಚಾರ್ಯ ಉಪಸ್ಥಿತರಿದ್ದರು.