ಮಹಾಲಿಂಗಪುರ ಪಟ್ಟಣದ ಕೋಳಿಗುಡ್ಡ ಅವರ ಕ್ರಿಕೆಟ್ ಮೈದಾನದಲ್ಲಿ ರೆಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಅಂತರ ಶಿಬಿರ ಬಾಲಕರ ೧೪ರ ಒಳಗಿನ ವೇಮನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಗಣ್ಯರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಕೋಳಿಗುಡ್ಡ ಅವರ ಕ್ರಿಕೆಟ್ ಮೈದಾನದಲ್ಲಿ ರೆಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಅಂತರ ಶಿಬಿರ ಬಾಲಕರ ೧೪ರ ಒಳಗಿನ ವೇಮನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಗಣ್ಯರು ಚಾಲನೆ ನೀಡಿದರು.ಪಟ್ಟಣದ ಡಾ.ಅಶೋಕ ದಿನ್ನಿಮನಿ ಮಾತನಾಡಿ, ಸುಮಾರು ಮೂರು ದಶಕಗಳ ಹಿಂದೆ ಮಹಾಲಿಂಗಪುರ ಪಟ್ಟಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಆಟದ ಸೊಬಗು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸಿತ್ತು. ತದನಂತರ ಬಂದ ಟೆನ್ನಿಸ್ ಬಾಲ್ ಕಲಾತ್ಮಕ (ಶಾಸ್ತ್ರೀಯ) ಆಟವನ್ನೇ ನುಂಗಿ ಹಾಕಿತು ಎಂದರೆ ಆಶ್ಚರ್ಯವಿಲ್ಲ ಎಂದು ಹೇಳಿದರು.
ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೆದರ್ ಬಾಲ್ ಆಟಕ್ಕಿರುವಷ್ಟು ಮಾನ್ಯತೆ ಟೆನ್ನಿಸ್ ಬಾಲ್ ಗಿಲ್ಲದೆ ಇರುವುದರಿಂದ ಸ್ಥಳೀಯ ಆಟಗಾರರು ಲೆದರ್ ಬಾಲ್ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಿ ಮಹಾಲಿಂಗಪುರದಲ್ಲಿಯೇ ರೆಡ್ಡಿಸ್ ಕ್ರಿಕೆಟ್ ಅಕಾಡೆಮಿ ಲೆದರ್ ಬಾಲ್ ತರಬೇತಿ ನೀಡುತ್ತಿದ್ದು, ಸ್ಥಳೀಯ ಪ್ರತಿಭೆಗಳು ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.ಮುಖ್ಯ ಅತಿಥಿಗಳಾದ ಬಂದು ಪಕಾಲಿ, ಸಾಗರ ಮಠದ ಮಾತನಾಡಿ, ಆಯೋಜಿಸಿರುವ ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆವರೆಗೆ ಹಚ್ಚಿದರೆ, ಮುಂದೆ ತಾವು ಮಾಡುವ ಸಾಧನೆಗೆ ಮೈಲಿಗಲ್ಲಾಗುತ್ತದೆ ಎಂದು ಹೇಳಿದರು.
ಈ ಪಂದ್ಯಾವಳಿಗೆ ೮ ಅಕಾಡೆಮಿ ತಂಡಗಳಾದ ರೆಡ್ಡಿ ಕ್ರಿಕೆಟ್ ಮಹಾಲಿಂಗಪುರ, ರಾಯಲ್ ಹಾರೂಗೇರಿ, ಕೆ.ಜೆ. ಸೋಮಯ್ಯ ಸಮೀರವಾಡಿ, ಸಿಬಿಎಸ್ಸಿ ಅಂಕಲಿ, ದ.ವಾಲ್ ಕ್ರಿಕೆಟ್ ರಾಯಬಾಗ, ರಾಯಲ್ ಕ್ರಿಕೆಟ್ ಕುಡಚಿ, ಎಸ್.ಕೆ. ಕ್ರಿಕೆಟ್ ಬೆಳಗಾವಿ ಮತ್ತು ಡಾ.ಸಿದ್ಧಾಂತ ದಾನಿಗೊಂಡ ತೇರದಾಳ ತಂಡ ಆಹ್ವಾನಿಸಲಾಗಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ ಜತೆಗೆ ವೇಮನ್ ಟ್ರೋಫಿ ನೀಡಲಾಗುತ್ತದೆ. ಅಲ್ಲದೆ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಗೌರವಿಸಲಾಗುವುದು. ನಿಗದಿತ ೨೦ ಓವರ್ ಗಳದ್ದಾಗಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರ ಮಹೇಶ ರೆಡ್ಡಿ, ಮಹಾದೇವ ಕಡಬಲ್ಲವರ, ಮನೋಹರ ಶಿರೋಳ, ಆನಂದ ಪಟ್ಟಣಶೆಟ್ಟಿ, ವೈ.ವೈ. ಗಚ್ಚನ್ನವರ, ಮೀರಾ ತಟಗಾರ,ರಾಜೇಂದ್ರ ನಾವಿ, ರಾಜು ಜವಳಗಿ, ರವಿ ಖೋತ, ಮಂಜುನಾಥ ರೇಣಕೆ, ರವಿ ಕಟಗಿ, ರಾಜೇಂದ್ರ ಕಟಗಿ, ಸಂತೋಷ ಜಮಖಂಡಿ, ಆನಂದ ಮಕ್ಕಳಗೇರಿಮಠ, ವಿಶಾಲ ಹೂಗಾರ ಇದ್ದರು. ತಂಡಗಳ ತರಬೇತುದಾರ ಪ್ರವೀಣ ಜಾಧವ, ರಾಘವೇಂದ್ರ ಜಾಧವ, ಗಾಯಕ ಚನ್ನಪ್ಪ ಹುನ್ನೂರ ಸ್ವಾಗತಿಸಿದರು. ಆಟಗಾರ ಪ್ರೀತಮ್ ಗಟ್ಟೆಪ್ಪನ್ನವರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.