ಟೆನ್ನಿಸ್‌ ಬಾಲ್‌ ಕ್ರಿಕೆಟ್‌: ಸಿದ್ದಾಪುರ ಸಂತ ಜೊಸೇಫರ ಚರ್ಚ್ ಪ್ರಥಮ

| Published : Jan 17 2024, 01:47 AM IST

ಟೆನ್ನಿಸ್‌ ಬಾಲ್‌ ಕ್ರಿಕೆಟ್‌: ಸಿದ್ದಾಪುರ ಸಂತ ಜೊಸೇಫರ ಚರ್ಚ್ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರ ಸಂತ ಜೊಸೇಫರ ಚರ್ಚ್ ಪ್ರಥಮ ಬಹುಮಾನದೊಂದಿಗೆ 50 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸಿದ್ದಾಪಪುರ ಫ್ಲೋರೆನ್ಸ್ ಚರ್ಚ್ ದ್ವಿತೀಯ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೊಡಗು ಜಿಲ್ಲಾ ರೋಮನ್ ಕೆಥೋಲಿಕ್ ಅಸೋಸಿಯೇಷನ್ ಹಾಗೂ ಇಲ್ಲಿನ ಜಯವೀರಮಾತೆ ದೇವಾಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರ ಸಂತ ಜೊಸೇಫರ ಚರ್ಚ್ ಪ್ರಥಮ ಬಹುಮಾನದೊಂದಿಗೆ 50 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ದ್ವಿತೀಯ ಸ್ಥಾನವನ್ನು ಸಿದ್ದಾಪಪುರ ಫ್ಲೋರೆನ್ಸ್ ಚರ್ಚ್ ಪಡೆದು 30 ಸಾವಿರ ರು. ನಗದಿನೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು. ಮಹಿಳೆಯರಿಗೆ ನಡೆದ ಥ್ರೋ ಬಾಲ್ ಸ್ಪರ್ಧೆಯಲ್ಲಿ ಅಬ್ಬೂರುಕಟ್ಟೆ ಲಾರೆನ್ಸ್ ಚರ್ಚ್ ಗೆಲುವು ದಾಖಲಿಸಿ 10 ಸಾವಿರ ರು. ನಗದಿನೊಂದಿಗೆ ಟ್ರೋಫಿ, ದ್ವಿತೀಯ ಸ್ಥಾನವನ್ನು ಕುಶಾಲನಗರದ ಸಬಾಸ್ಟಿಯನ್‌ ಚರ್ಚ್ ಪಡೆದು 5 ಸಾವಿರ ರು. ನಗದಿನೊಂದಿಗೆ ಟ್ರೋಫಿ ಪಡೆಯಿತು.

ಪುರುಷರ ಹಗ್ಗ ಜಗ್ಗಾಟದಲ್ಲಿ ಮೊದಲ ಬಹುಮಾನ ನಾಪೊಕ್ಲು ಸಂತ ಮೇರಿ ಚರ್ಚ್ ಪಡೆದು 10 ಸಾವಿರ ರು. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ 5 ಸಾವಿರ ರು. ನಗದಿನೊಂದಿಗೆ ಟ್ರೋಫಿ ತನ್ನದಾಗಿಸಿತು.

ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವ ವಹಿಸಿದ್ದರು. ವೇದಿಕೆಯಲ್ಲಿ ಓಎಲ್‍ವಿ ಚರ್ಚ್ ಫಾದರ್ ಎಂ. ರಾಯಪ್ಪ, ಸುಂಟಿಕೊಪ್ಪ ಶ್ರೀ ಸಾಮಾನ್ಯ ಆಯೋಗದ ಫಾದರ್ ಸ್ವಾಮಿ ಅರುಳ್ ಸೆಲ್ವಕುಮಾರ್, ಹಟ್ಟಿಹೊಳೆ ಚರ್ಚ್ ಫಾದರ್ ಗಿಲ್ಬರ್ಟ್ ಡಿಸಿಲ್ವ, ಮಡಿಕೇರಿ ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಿರಿಲ್ ಮೋರಸ್, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ, ಕ್ರೈಸ್ತ ಸೇವಾಸಂಘದ ಜಿಲ್ಲಾಧ್ಯಕ್ಷ ಬೇಬಿ ಮ್ಯಾಥ್ಯೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.