ಸಾರಾಂಶ
ಮೇಲುಕೋಟೆ:
ಕ್ರೀಡಾ ಚಟುವಟಿಕೆಯ ಪ್ರೋತ್ಸಾಹಕ್ಕಾಗಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಪ್ರಧಾನ ಸಹಕಾರದಲ್ಲಿ ಮೂರು ದಿನಗಳ ಕಾಲ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನಡೆಯಿತು.ರಾಮಾನುಜಾರ್ಯರ ಕ್ರಿಕೆಟ್ ಕಪ್ ಆಯೋಜನೆಗೆ ಸಿಎಸ್ಪಿ ಒಂದು ಲಕ್ಷ ರು. ನೀಡಿದ್ದರು. ಪಂದ್ಯಾವಳಿ ವೇಳೆ ಭೇಟಿ ನೀಡಿದ ಮಾಜಿ ಸಚಿವರ ಪುತ್ರ ಶಿವರಾಜು ಆಯೋಜಕರಿಗೆ ಬಹುಮಾನದ ಮೊತ್ತ ಹಸ್ತಾಂತರಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಪಂದ್ಯಾವಳಿಯಲ್ಲಿ ಪಾಂಡವಪುರ ಪಾಂಡವ ಕ್ರಿಕೆಟರ್ಸ್ ಪ್ರಥಮ ಬಹುಮಾನ ಪಡೆಯುವ ಮೂಲಕ ಒಂದು ಲಕ್ಷ ರು. ನಗದು ಮತ್ತು ರಾಮಾನುಜಾ ಕಪ್ ತನ್ನದಾಗಿಸಿಕೊಂಡಿತು. ಚಿನಕುರಳಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನಗಳಿಸಿ 50 ಸಾವಿರ ರು. ಪಡೆದರೆ, ಮೇಲುಕೋಟೆ ಸಿಎಸ್ಪಿ ಬಾಯ್ಸ್ ತೃತೀಯ ಸ್ಥಾನ ಗಳಿಸಿ 25 ಸಾವಿರ ರು. ಬಹುಮಾನ ಪಡೆದರು. ಸೂರಿ ಕುಳ್ಳ ತಂಡ 4ನೇ ಸ್ಥಾನದೊಂದಿಗೆ 10 ಸಾವಿರ ರು. ನಗದು ಬಹುಮಾನಕ್ಕೆ ಪಾತ್ರವಾಯಿತು.ಮೇಲುಕೋಟೆ ಕಿರಣ್‌ಗೌಡ ನ್ಯಾಮನಹಳ್ಳಿ ಶಿವು, ಕದಲಗೆರೆ ಅನಿಲ್ ಜಂಟಿಯಾಗಿ ಪಂದ್ಯಾವಳಿ ಆಯೋಜಿಸಿದ್ದರು. ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೈದಾನದಲ್ಲಿ ನಡೆದ ಟೆನ್ನಿಸ್‌ಬಾಲ್ ಟೂರ್ನಮೆಂಟ್‌ನಲ್ಲಿ ರಾಮಾನುಜಾಚಾರ್ಯರ ಕಪ್‌ಗಾಗಿ ಇಡೀ ಜಿಲ್ಲೆಯಿಂದ 15 ಕ್ರಿಕೆಟ್ ತಂಡಗಳು ಭಾಗವಹಿಸಿ ರೋಚಕ ಸೆಣಸಾಟ ನಡೆಸಿದವು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಅವ್ವಗಂಗಾಧರ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ಬಸವರಾಜು, ಪಾರ್ಥ ಮತ್ತಿತತರು ಭಾಗವಹಿಸಿದ್ದರು.ಮನೆಯಲ್ಲಿ ಪತ್ತೆಯಾದ ರಕ್ತದ ಕಲೆಗಳು ಮಾನವನದ್ದು: ತನಿಖೆಯಲ್ಲಿ ಬೆಳಕಿಗೆ
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಹೊಂಬಾಳೇಗೌಡನದೊಡ್ಡಿ ಗ್ರಾಮದ ಮನೆಯಲ್ಲಿ ಕಳೆದ ಅ.27ರಂದು ಪತ್ತೆಯಾದ ರಕ್ತದ ಕಲೆಗಳು ಮಾನವನದು ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಸತೀಶ್ ಮತ್ತು ಸೌಮ್ಯ ದಂಪತಿ ಮನೆ ಸ್ನಾನದ ಗೃಹ ಮತ್ತು ವರಾಂಡ ಸೇರಿದಂತೆ ಹಲವೆಡೆ ರಕ್ತದ ಕಲೆಗಳು ಕಂಡು ಬಂದಿತ್ತು. ಈ ಬಗ್ಗೆ ಮನೆಯವರು ಯಾವುದೋ ಪ್ರಾಣಿ ರಕ್ತ ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದರು.ಸ್ಥಳಕ್ಕೆ ಧಾವಿಸಿದ ಬೆಸಗರಹಳ್ಳಿ ಪೊಲೀಸರು ಶ್ವಾನನದಳ ಮತ್ತು ಬೆರಳಚ್ಚುತಜ್ಞರ ಸಹಾಯದಿಂದ ರಕ್ತದ ಕಲೆಗಳ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಕಳುಹಿಸಿದ್ದರು. ಈಗ ಸತೀಶ್ ಮನೆಯಲ್ಲಿ ದೊರೆತ ರಕ್ತದ ಕಲೆ ಮಾನವನ ರಕ್ತ ಎಂದು ಬೆಳಕಿಗೆ ಬಂದಿರುವುದು ಒಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.
ಮತ್ತೊಂದು ಮೂಲದ ಪ್ರಕಾರ ಸತೀಶ್ ಮತ್ತು ಆತನ ಸಹೋದರ ನಡುವೆ ಆಸ್ತಿ ವಿಚಾರದಲ್ಲಿ ವಿವಾದವಿದೆ. ಹೀಗಾಗಿ ಸಹೋದರರು ಯಾರು ಮನೆ ಕಡೆ ಬರಬಾರದು ಎಂದು ಹೆದರಿಕೆ ಹುಟ್ಟಿಸುವ ಉದ್ದೇಶದಿಂದ ಮನೆಯಲ್ಲಿ ರಕ್ತದ ಕಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಪೊಲೀಸರ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.;Resize=(128,128))
;Resize=(128,128))