ಸಾರಾಂಶ
ಸಿದ್ದರಾಮಯ್ಯನವರು ಮಂಡಿಸಿದ ಕೊರತೆ ಬಜೆಟ್‌ನಲ್ಲಿ ಕೇವಲ ಕಾರ್ಯಕ್ರಮ ಘೋಷಿಸಲಾಗಿದೆ. ಆದರೆ, ಇದನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ಇಲ್ಲ. ಹೀಗಾಗಿ, ಹಣ ಹೇಗೆ ಹೊಂದಿಸುತ್ತಾರೆ ಎಂಬುದು ಗೊತ್ತಿಲ್ಲ. ಹೇಗೆ ಈಡೇರಿಸುತ್ತಾರೆ ಎಂಬ ಭರವಸೆಯೂ ಇಲ್ಲ. ಯಾವುದೇ ಸ್ಪಷ್ಟ ಮುನ್ನೋಟ ಇಲ್ಲದ, ವಾಸ್ತವಿಕ ನೆಲೆಯಿಂದ ತೀರಾ ದೂರ ಇರುವ ನಿರಾಶದಾಯಾಕ ಬಜೆಟ್ ಇದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯಾವುದೇ ಸ್ಪಷ್ಟ ಮುನ್ನೋಟ ಇಲ್ಲದ, ವಾಸ್ತವಿಕ ನೆಲೆಯಿಂದ ತೀರಾ ದೂರ ಇರುವ ನಿರಾಶದಾಯಾಕ ಬಜೆಟ್ ಇದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದ್ದಾರೆ.ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೊರತೆ ಬಜೆಟ್‌ನಲ್ಲಿ ಕೇವಲ ಕಾರ್ಯಕ್ರಮ ಘೋಷಿಸಲಾಗಿದೆ. ಆದರೆ, ಇದನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ಇಲ್ಲ. ಹೀಗಾಗಿ, ಹಣ ಹೇಗೆ ಹೊಂದಿಸುತ್ತಾರೆ ಎಂಬುದು ಗೊತ್ತಿಲ್ಲ. ಹೇಗೆ ಈಡೇರಿಸುತ್ತಾರೆ ಎಂಬ ಭರವಸೆಯೂ ಇಲ್ಲ ಎಂದಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವ ಕುರಿತು ನಿರೀಕ್ಷಿಸಲಾಗಿತ್ತು. ಆದರೆ ಹಣ ಒದಗಿಸುವುದು ಇರಲಿ, ಈ ಹಿಂದೆ ಸಕ್ಕರೆ ಬೈಲು ಆನೆ ಬಿಡಾರ, ನಗರದ ಬಿದನೂರು ಕೋಟೆ, ಅಲ್ಲಮ ಪ್ರಭು ಜನ್ಮಸ್ಢಳ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿದ್ದ ೩೬ ಕೋಟಿ ರು.ಗಳನ್ನು ಸರ್ಕಾರ ವಾಪಸ್ಸು ಪಡೆದಿತ್ತು. ಆದರೆ ಇದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಟೀಕಿಸಿದ್ದಾರೆ. ಜೊತೆಗೆ ಆನ್ ಗೋಯಿಂಗ್ ವರ್ಕ್ ಗಳಿಗೂ ಅನುದಾನ ಒದಗಿಸಿಲ್ಲ ಎಂದಿದ್ದಾರೆ.ಶಿವಮೊಗ್ಗ ನಗರ- ಬೊಮ್ಮನಕಟ್ಟೆ ಬಡಾವಣೆಯ ನಡುವಿನ ರೈಲು ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾಪ ಮಾಡಲಾಗಿದೆ. ಆದರೆ, ಈ ಹಿಂದೆಯೇ ಸಿಆರ್ ಎಫ್ ಫಂಡ್‌ನಲ್ಲಿ ಸುಮಾರು ₹50 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾಪವನ್ನು ಕಳುಹಿಸಿದ್ದೆ. ಈಗ ಇದನ್ನೇ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಎಂದಿದ್ದಾರೆ.
- - - - ಫೋಟೋ:ಬಿ.ವೈ. ರಾಘವೇಂದ್ರ, ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರ