ಬೇಡಿಕೆ ಈಡೇರಿಸದಿದ್ದರೇ 2024-25ನೇ ಸಾಲಿನ ಕ್ರೀಡಾಕೂಟ ಬಹಿಷ್ಕಾರ

| Published : Jun 24 2024, 01:31 AM IST

ಸಾರಾಂಶ

ದೈಹಿಕ ಶಿಕ್ಷಣ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೇ 2024-25ನೇ ಸಾಲಿನ ಕ್ರೀಡಾಕೂಟವನ್ನು ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು, ಬೆಳಗಾವಿ ಗ್ರಾಮೀಣ ಘಟಕದ ಸದಸ್ಯರು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಸರ್ಕಾರ ಪರಿಗಣಿಸಿ ಮುಖ್ಯ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ದೈಹಿಕ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ದೈಹಿಕ ಶಿಕ್ಷಕ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ದೈಹಿಕ ಶಿಕ್ಷಣದ ಪ್ರತ್ಯೇಕ ನಿರ್ದೇಶನಾಲಯದ ಸ್ಥಾಪಿಸಬೇಕಿದೆ. ಇದರಿಂದ ದೈಹಿಕ ಶಿಕ್ಷಕರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ. ಕೂಡಲೇ ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು.ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸಾವಿರಾರು ದೈಹಿಕ ಶಿಕ್ಷಕ ಹುದ್ದೆಗಳು ಖಾಲಿಯಿರುವ ಹುದ್ದೆಗಳನ್ನು ಶೀಘ್ರ ತುಂಬಿದಲ್ಲಿ ದೈಹಿಕ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ಜತೆ ನಿರುದ್ಯೋಗಿಗಳಿಗೆ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮ್ಯಾನೇಜರ್ ಉಮೇಶ್ ಬಾಳೆಕುಂದ್ರಿ ಸುಪ್ರಿಡೆಂಟ್ ಎಂ.ಎನ್.ದೊಡ್ಡಮನಿ, ದೈಹಿಕ ಶಿಕ್ಷಣ ಪರೀಕ್ಷಕರಾದ ಸಾಧನಾ ಬದ್ರಿ, ತಾಲೂಕು ಸಂಘದ ಅಧ್ಯಕ್ಷ ಪಿ.ಕೆ.ಶಳಕೆ, ಗೌರವಾಧ್ಯಕ್ಷ ವಿ.ಟಿ.ಕುಕಡೋಳ್ಕರ, ಖಜಾಂಚಿ ಬಿ.ಎಲ್.ಕುಂಬಾರ್, ಪ್ರಧಾನ ಕಾರ್ಯದರ್ಶಿ ಕೆ.ಐ.ಹೈಬತ್ತಿ, ಸದಸ್ಯರುಗಳಾದ ಆರ್.ಎಲ್.ಪಾಟೀಲ್, ಎ.ವಿ.ಹುಲಜಿ, ಆರ್.ಎನ್.ಪಾಟೀಲ ಹಾಗೂ ಇನ್ನಿತರರು ಉಪಸಿತರಿದ್ದರು.