ಸಾರಾಂಶ
ಬೆಳಗಾವಿ : ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬೆಳಗಾವಿಯಲ್ಲಿ ಬರೋಬ್ಬರಿ 25 ಗಂಟೆ ಕಾಲ ಶಾಂತಿಯುತವಾಗಿ ನೆರವೇರಿದೆ.
ಹುತಾತ್ಮಚೌಕ್‌ದಲ್ಲಿ ಮಂಗಳವಾರಸಂಜೆ 5 ಗಂಟೆಗೆ ಶಾಸಕ ಅಭಯ ಪಾಟೀಲ ಅವರು ಗಣೇಶ ಮೂರ್ತಿಗಳ ವಿಸರ್ಜನಾ ಮೆರಣಿಗೆಗೆ ಚಾಲನೆ ನೀಡಿದ್ದರು. ಬುಧವಾರ ಸಂಜೆ 6 ಗಂಟೆಗೆ ಮಹಾನಗರ ಪಾಲಿಕೆಯ ಗಣೇಶನ್ನು ವಿಸರ್ಜಿಸುವ ಮೂಲಕ ಗಣೇಶನಿಗೆ ವಿದಾಯ ಹೇಳಲಾಯಿತು.ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಡಗರ, ಸಂಭ್ರಮದಿಂದ ನೆರವೇರಿದೆ.
ಮಂಗಳವಾರ ತಡ ರಾತ್ರಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗಣೇಶ ಮೂರ್ತಿಗಳ ವೀಕ್ಷಣೆಗೆ ಜಿಲ್ಲೆಯಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರು ರಸ್ತೆಯಇಕ್ಕೆಲ್ಲಗಳಲ್ಲಿ ನಿಂತು ವೀಕ್ಷಿಸಿದರು. ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಭಕ್ತರ ಜಯಘೋಷಣೆಗಳೊಂದಿಗೆ ಗಣೇಶನಿಗೆ ಸಂಭ್ರಮದಿಂದ ವಿದಾಯಹೇಳಲಾಯಿತು.
ಕೆಲ ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗ ಬದಲಿಸಿದ ಪೊಲೀಸರ ಕ್ರಮ ಗಣೇಶ ಉತ್ಸವಮಂಡಳಗಳ ಪದಾಧಿಕಾರಿಗಳ ಆಕ್ರೋಶಕ್ಕೆಕಾರಣವಾಯಿತು. ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿತು. ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.