ಭಗತ್ ಸಿಂಗ್ ಯುವಕ ಸಂಘದ ಆಯೋಜಿಸಿದ 6ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಭಗತ್ ಸಿಂಗ್ ಯುವಕ ಸಂಘದ ಆಯೋಜಿಸಿದ 6ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರೆಯಿತು.ಅತ್ತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ಗೋಣಿಕೊಪ್ಪಲು ಗ್ರಾಪಂ ಸದಸ್ಯ ಬಿ.ಎನ್ ಪ್ರಕಾಶ್ ಮಾಡಿದ ಬೌಲಿಂಗ್‌ಗೆ, ಬ್ಯಾಟ್ ಬಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.ನಾಲ್ಕು ದಿನಗಳು ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 16 ತಂಡಗಳು ಭಾಗವಹಿಸಲಿವೆ, ಗುರುವಾರ ಅಂತಿಮ ಪಂದ್ಯಾಟ ನಡೆಯಲಿದೆ.ವಿಜೇತ ತಂಡಗಳಿಗೆ, ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಸಿಂಗಿ ಮಾಹಿತಿ ನೀಡಿದರು. ಪತ್ರಕರ್ತ, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಯುವಕರ ಮನಸುಗಳನ್ನು ಏಕಚಿತ್ತವಾಗಿ ಬಿಗಿಗೊಳಿಸಲು ಕ್ರೀಡೆ ಸಹಕಾರಿ ಎಂದರು.ದುಷ್ಟಗಳಿಂದ ದೂರಉಳಿದು ಮನಸ್ಸನ್ನು ಶಾಂತಿಯ ಕಡೆ ಕೊಂಡೊಯ್ಯಲು ಕ್ರೀಡೆ ಸಹಕಾರಿ, ಯುವ ಸಮುದಾಯ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜೀವನದ ಒತ್ತಡಗಳನ್ನು ಕರಗಿಸಬೇಕು. ಜೊತೆಗೆ ತಮ್ಮ ಬೆನ್ನ ಹಿಂದೆ ಬರುವ ಕಿರಿಯರನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ, ಭಗತ್ ಸಿಂಗ್ ಯುವಕ ಸಂಘ ಕ್ರೀಡಾ ಚಟುವಟಿಕೆಯ ಮೂಲಕ ಯುವಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದರು.ಗಾ. ಪಂ ಸದಸ್ಯ ಬಿ.ಎನ್ ಪ್ರಕಾಶ್ ಮಾತನಾಡಿ, ಕ್ರೀಡೆಯ ಮೂಲಕ ಯುವಕರಲ್ಲಿ ಆರೋಗ್ಯ ಪೂರ್ಣ ಬದುಕನ್ನು ಕಟ್ಟಿಕೊಡುವ ಚಿಂತನೆಯೊಳಗೆ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ ಎಂದರು.ಪತ್ರಕರ್ತ ವಿ.ವಿ ಅರುಣ್ ಕುಮಾರ್, ದಾನಿಗಳಾದ ಮನು ಅರ್ವತೋಕು, ಊಂಬಾಯಿ, ಶಶಿ, ಪೂವಯ್ಯ, ಶ್ರೀನಿವಾಸ್ ಮತ್ತು ಭಗತ್ ಸಿಂಗ್ ಯುವಕ ಸಂಘದ ಉಪಾಧ್ಯಕ್ಷ ಕಣ್ಣನ್ ವೇಣು, ಕ್ರೀಡಾ ಸಂಚಾಲಕ ಸಂತೋಷ್ ಪಿಟ್ಟೆ, ಭಗತ್ ಸಿಂಗ್ ಯುವಕ ಸಂಘದ ನಿರ್ದೇಶಕರುಗಳಾದ, ಹರಿಶ್ , ಪುಷ್ಷ ಮನೋಜ್, ಸುರೇಶ್, ಎ. ಡಿ ಮಂಜುನಾಥ್, ರವಿ ಸ್ಕಂದ, ನಿತಿನ್ ಆಳ್ವ, ಸಂಜಯ್, ರವಿ ಟಿಂಬರ್, ಅಭಿ, ವಿನ್ಯಾ ಮನೋಜ್, ಅಪ್ಪಜೋಗಿ, ಸುದಿ, ಅಕ್ಷಯ್, ಶಿವು ಮತ್ತು 16 ತಂಡಗಳ ಮಾಲೀಕರು, ನಾಯಕರು, ಕ್ರೀಡಾಪಟುಗಳು ಇದ್ದರು.