ಮುಂಗಡ ಪತ್ರ ದೇಶದ ಅಭಿವೃದ್ಧಿ ತೋರಿಸುವ ದಿಕ್ಸೂಚಿ-ನದೀಮುಲ್ಲಾ

| Published : Feb 09 2024, 01:45 AM IST

ಮುಂಗಡ ಪತ್ರ ದೇಶದ ಅಭಿವೃದ್ಧಿ ತೋರಿಸುವ ದಿಕ್ಸೂಚಿ-ನದೀಮುಲ್ಲಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದ ಪ್ರತಿಯೊಂದು ದೇಶ ತಮ್ಮ ಹಣಕಾಸು ಸಂಪನ್ಮೂಲಗಳಿಂದ ಕಲ್ಯಾಣ ರಾಷ್ಟ್ರ ಕಟ್ಟಲು ಪರಿಶ್ರಮಿಸುತ್ತಿವೆ. ಅಂತಹ ಹಣಕಾಸು ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವ ಹಾಗೂ ಯಾವ ರೀತಿ ವೆಚ್ಚ ಮಾಡುವುದು ಎಂಬುದು ತಿಳಿಯಲು ಮುಂಗಡ ಪತ್ರ ಒಂದು ದಿಕ್ಸೂಚಿಯಾಗುವುದು ಎಂದು ಎಂ.ಎಂ. ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎಂ. ನದೀಮುಲ್ಲಾ ಹೇಳಿದರು.

ಗದಗ: ಪ್ರಪಂಚದ ಪ್ರತಿಯೊಂದು ದೇಶ ತಮ್ಮ ಹಣಕಾಸು ಸಂಪನ್ಮೂಲಗಳಿಂದ ಕಲ್ಯಾಣ ರಾಷ್ಟ್ರ ಕಟ್ಟಲು ಪರಿಶ್ರಮಿಸುತ್ತಿವೆ. ಅಂತಹ ಹಣಕಾಸು ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವ ಹಾಗೂ ಯಾವ ರೀತಿ ವೆಚ್ಚ ಮಾಡುವುದು ಎಂಬುದು ತಿಳಿಯಲು ಮುಂಗಡ ಪತ್ರ ಒಂದು ದಿಕ್ಸೂಚಿಯಾಗುವುದು ಎಂದು ಎಂ.ಎಂ. ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎಂ. ನದೀಮುಲ್ಲಾ ಹೇಳಿದರು.

ಅವರು ನಗರದ ಪಂ. ಪಂಚಾಕ್ಷರ ಗವಾಯಿಗಳವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಹಾಗೂ ಯೋಜನಾ ವೇದಿಕೆ ಆಶ್ರಯದಲ್ಲಿ ಇತ್ತೀಚಿಗೆ ಕೇಂದ್ರ ಮುಂಗಡ ಪತ್ರ-ಒಂದು ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಗಡ ಪತ್ರವು ಒಂದು ದೇಶದ ಹಣಕಾಸಿನ ಸ್ಥಿತಿಗತಿ ಹಾಗೂ ಆ ಸರ್ಕಾರದ ಆರ್ಥಿಕ ಕಾರ್ಯಕ್ರಮಗಳನ್ನು ವಿವರಿಸುವ ವಿಹಂಗಮ ನೋಟವಾಗಿರುತ್ತದೆ. ಇತ್ತೀಚಿಗೆ ಕೇಂದ್ರ ಸರ್ಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ₹ 48 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದಾರೆ. ದೇಶ ಯುವಕರಿಗೆ, ಬಡವರಿಗೆ, ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿರುವ ಮುಂಗಡ ಪತ್ರ ಒಂದೆಡೆಯಾದರೆ, ಸುಮಾರು ಹನ್ನೊಂದು ಲಕ್ಷ ಕೋಟಿ ರು. ಸಾಲದ ಬಡ್ಡಿಗೆ ವ್ಯಯವಾಗುತ್ತಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ. ದೇಶ ಸಾರ್ವಜನಿಕ ಸಾಲದ ಸುಳಿಯಿಂದ ಹೊರಬರಬೇಕು. ಅಂದಾಗ ಸಮಗ್ರ ಆರ್ಥಿಕ ಅಭಿವೃದ್ಧಿಯಾದಂತೆ ಎಂದರು.ಪ್ರಾಸ್ತಾವಿಕವಾಗಿ ಡಾ. ವಿ.ವಿ. ನಿಂಗೋಜಿ ಮಾತನಾಡಿ, ಮುಂಗಡ ಪತ್ರ ಬೆಳೆದು ಬಂದ ಬಗೆ, ಅವರ ರಚನೆ, ಮಂಡನೆಯನ್ನು ಕುರಿತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಜಿ.ಎಸ್. ಯತ್ನಟ್ಟಿ, ಸುಭಾಸ ಓಂಕಾರ ಉಪಸ್ಥಿತರಿದ್ದರು. ಮಂಜುನಾಥ ಬಡಿಗೇರ ಸ್ವಾಗತಿಸಿದರು. ಮಂಜುಳಾ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಕಟಾರೆ ವಂದಿಸಿದರು.