ಬೀರೂರುಮಹಿಳೆಯರನ್ನು ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಮತ್ತು ಸ್ನೇಹ ಮತ್ತು ಸೇವೆ ಧ್ಯೇಯವನ್ನಿಟ್ಟುಕೊಂಡು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದು ಇನ್ನರ್ ವ್ಹೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ತಿಳಿಸಿದರು.
ರೋಟರಿ ಭವನದಲ್ಲಿ ಇನ್ನರ್ ವ್ಹೀಲ್ ಆಯೋಜಿಸಿದ್ದ ಸಭೆ
ಕನ್ನಡಪ್ರಭ ವಾರ್ತೆ, ಬೀರೂರುಮಹಿಳೆಯರನ್ನು ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಮತ್ತು ಸ್ನೇಹ ಮತ್ತು ಸೇವೆ ಧ್ಯೇಯವನ್ನಿಟ್ಟುಕೊಂಡು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದು ಇನ್ನರ್ ವ್ಹೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ತಿಳಿಸಿದರು.ಪಟ್ಟಣದ ರೋಟರಿ ಭವನದಲ್ಲಿ ಇನ್ನರ್ ವ್ಹೀಲ್ ಆಯೋಜಿಸಿದ್ದ ಸಭೆಗೆ ದಿಢೀರ್ ಹಾಜರಾಗಿ ಇನ್ನರ್ ವ್ಹೀಲ್ ನ ಕಾರ್ಯ ವೈಕರಿ ಬಗ್ಗೆ ತಿಳಿಸಿದರು. ಇದು ರೋಟರಿ ಕ್ಲಬ್ನ ಅಂಗಸಂಸ್ಥೆ. ಮಹಿಳೆಯರಲ್ಲಿನ ಪ್ರತಿಭೆ ಹೊರಹಾಕುವ, ಸಂಘಟನೆ ಶಕ್ತಿ ಬೆಳೆಸುವ, ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಮಾಡುವುದು ಕ್ಲಬ್ ಉದ್ದೇಶ. ಸೇವೆಗೆ ಭಾಷೆ, ಪ್ರದೇಶದ ತಾರತಮ್ಯ ಇಲ್ಲ. ಕ್ಲಬ್ ಸದಸ್ಯರಲ್ಲಿ ನಾಯಕತ್ವ ಗುಣ ಬೆಳೆಸಲಾಗುತ್ತದೆ. ಸಾಮಾಜಿಕ ಸೇವೆ ಯನ್ನು ಮಾಡುವ ಇಚ್ಛೆಯುಳ್ಳ ಮಹಿಳೆಯರು ಕ್ಲಬ್ ಸದಸ್ಯತ್ವ ಪಡೆಯಲು ಮುಕ್ತ ಅವಕಾಶ ಇದೆ. ಮಹಿಳೆಯರು ಇದರ ಸದುಪಯೋಗ ಪಡೆಯಬೇಕೆಂದರು.
ಬೀರೂರು ಪಟ್ಟಣ ಇನ್ನರ್ ವ್ಹೀಲ್ ಅಧ್ಯಕ್ಷೆ ಸವಿತಾರಮೇಶ್ ಮಾತನಾಡಿ, ಸಂಸ್ಥೆ ಜಿಲ್ಲಾಧ್ಯಕ್ಷರು ದಿಡೀರ್ ಭೇಟಿ ನೀಡಿ ನಮ್ಮನ್ನೆಲ್ಲ ಜಾಗೃತಿ ಗೊಳಿಸುತ್ತಿರುವುದು ಸ್ವಾಗತಾರ್ಹ. ಪಟ್ಟಣದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ವಿವಿಧ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ತನ್ನದೆ ಆದ ಛಾಪು ಮೂಡಿಸುವ ಜೊತೆ ವಿವಿಧ ಸಂಘ ಸಂಸ್ಥೆಗಳಿಂದ ಹೆಸರು ಗಳಿಸಿದೆ. ಇದಕ್ಕೆ ನನ್ನೆಲ್ಲ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರ ಕಾರಣ, ಇನ್ನು ಹೆಚ್ಚು ಸಮಾಜ ಸೇವೆಯ ಮೂಲಕ ಸಂಸ್ಥೆ ಗೌರವವನ್ನು ಹೆಚ್ಚಿಸೋಣ ಎಂದರು.ಇದೆ ಸಂಧರ್ಭದಲ್ಲಿ ಬೀರೂರಿನ ಪ್ರತಿಭೆ ಕುಮಾರಿ ಸೀತಾರ ಅವರ ವಿಶ್ವ ದಾಖಲೆ ಸಾಧನೆ ಗೆ ಕ್ಲಬ್ ನಿಂದ ಅಭಿಂದಿಸಲಾಯಿತು. ಈ ಸಂರ್ಭದಲ್ಲಿ ಕಾರ್ಯದ ರ್ಶಿ ಭಾಗ್ಯನಾರಾಯಣ್, ಅರುಣಾ ರವಿಕುಮಾರ್, ಮಧು ಶಿವಸ್ವಾಮಿ, ನಳಿನ ವಿಶ್ವನಾಥ, ಶಿಲ್ಪಾ ವಿಕ್ರಂ ಸೇರಿದಂತೆ ಮತ್ತಿತರ ಸದಸ್ಯರು ಹಾಜರಿದ್ದರು.25 ಬೀರೂರು 2ಬೀರೂರಿನ ರೋಟರಿ ಭವನದಲ್ಲಿ ನಡೆದ ಇನ್ನರ್ ವ್ಹೀಲ್ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಭೇಟಿ ನೀಡಿದರು. ಬೀರೂರು ಪಟ್ಟಣ ಅಧ್ಯಕ್ಷೆ ಸವಿತಾ ರಮೇಶ್ ಕಾರ್ಯದರ್ಶಿ ಭಾಗ್ಯನಾರಾಯಣ್ ಸೇರಿದಂತೆ ಮತ್ತಿತರಿದ್ದರು.