ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಜೆಪಿ ಮುಖಂಡ ನಿಜಗುಣರಾಜು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮೇಲೆ ಮಾಡಿರುವ ಆರೋಪ ನೂರಕ್ಕೆ ನೂರು ಸುಳ್ಳು ಮತ್ತು ರಾಜಕೀಯ ಪ್ರೇರಿತವಾದದ್ದು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಅಂದಿನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ ಕುಮಾರ್ ಬಳಿ ಪೊಲೀಸರು ಹಣ ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ಮರು ತನಿಖೆಗೆ ಆದೇಶಿಸಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇ ಸಿ.ಪುಟ್ಟರಂಗಶೆಟ್ಟರು ಈ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿ ಲೋಕಾಯುಕ್ತಕ್ಕೂ ಹೋಗಿ ಸ್ಪಷ್ಟನೆ ನೀಡಿ ಪ್ರಕರಣ ಮುಗಿದಿದೆ ಎಂದರು.ಲೋಕಾಯುಕ್ತ ಕೋರ್ಟ್ ಈ ಕೆಲವು ಪ್ರಕರಣಗಳಲ್ಲಿ ಕೆಲವು ಸಣ್ಣಪುಟ್ಟ ಲೋಪದೋಷಗಳಿವೆ ಮರು ಪರಿಶೀಲಿಸಿ ಎಂದು ಹೇಳಿದೆ ಅಂತಹ ಹತ್ತಾರು ಪ್ರಕರಣಗಳಲ್ಲಿ ಇದು ಒಂದು, ಆದರೆ ಯಾವ ಅಂಶದಲ್ಲಿ ಲೋಪವಿದೆ ಎಂದು ಹೇಳಿಲ್ಲ ಅಥವಾ ಪುಟ್ಟರಂಗಶೆಟ್ಟರನ್ನೇ ತನಿಖೆ ಮಾಡಿ ಎಂದು ಹೇಳಿಲ್ಲ. ಯಾವ ಪೂರ್ಣ ವಿವರ ತಿಳಿಯದೇ ಆರೋಪ ಮಾಡಿ ತೇಜೋವಧೆ ಮಾಡುವುದು ಸರಿಯಲ್ಲ, ಜೊತೆಗೆ ನಿಜಗುಣ ರಾಜು ಅವರಿಗೆ ಶಾಸಕರನ್ನು ಆರೋಪಿಸುವ ನೈತಿಕತೆಯೇ ಇಲ್ಲ ಎಂದರು.ನಾಲ್ಕು ಬಾರಿ ಜನರಿಂದ ಆಯ್ಕೆಯಾಗಿರುವ ಶಾಸಕರ ಆರೋಪ ಮಾಡುವ ಮೊದಲು ತಾನು ಸರಿಯಾಗಿ ಇದ್ದೇನೆ ಎಂಬುದನ್ನು ಅರಿಯಬೇಕು. ಇವರು ನಡೆಸುತ್ತಿರುವ ರೆಸಾರ್ಟ್ ಕಾನೂನು ಬಾಹಿರವಾಗಿದೆ. ಸಮಕ್ಷಮ ಪ್ರಾಧಿಕಾರದಿಂದ ಲೈಸನ್ಸ್ ಪಡೆದಿಲ್ಲ, ಅಭಿವೃದ್ಧಿ ದುಡ್ಡು ಕಟ್ಟಿಲ್ಲ, ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿಲ್ಲ, ಇದರಿಂದಾಗಿ ಅಲ್ಲಿ ರಸ್ತೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಸಾರ್ವಜನಿಕರ ಕಾಳಜಿ ಇಲ್ಲದ ನಿಜಗುಣರಾಜು ರಾಜಕಾರಣದಲ್ಲಿರುವುದು ಅನಾಲಾಯಕ್ ಎಂದರು.ಶಾಸಕರು ರಾಜೀನಾಮೆ ಕೊಡುವುದಿಲ್ಲ, ಸಿದ್ದರಾಮಯ್ಯನವರು ಇವರ ರಾಜೀನಾಮೆಯನ್ನು ಕೇಳುವುದಿಲ್ಲ. ಪುಟ್ಟರಂಗಶೆಟ್ಟಿ ಅವರು ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ಕುಂಠಿತವಾಗಿದೆ ಎಂದು ಅರೋಪಿಸಿರುವುದು ಸತ್ಯಕ್ಕೆ ದೂರವಾದ ಆರೋಪ ಎಂದರು.
ಸಿದ್ದರಾಮಯ್ಯನವರ ನಿಕಟವರ್ತಿಗಳಲ್ಲಿ ಒಬ್ಬರಾಗಿರುವ ಸಿ. ಪುಟ್ಟರಂಗಶೆಟ್ಟರು ಈ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಿಜಗುಣರಾಜು ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಕಾರಿನಿಂದ ಇಳಿದು ಕನ್ನಡಕ ತೆಗೆದು ನೋಡಿಕೊಂಡು ಬಂದು ಹೇಳಲಿ ಎಂದರು.ಕಳೆದ ಎರಡು ವರ್ಷದ ಅವಧಿಯಲ್ಲಿ 100 ಕೋಟಿ ಅನುದಾನ ತಂದು ಚನ್ನಪ್ಪನಪುರದ ಬಳಿ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಬೇಡಗುಳಿ ರಸ್ತೆ, ಕೆ.ಗುಡಿ ರಸ್ತೆ, ಕಾಳನಹುಂಡಿ ರಸ್ತೆ, ಭೋಗಾಪುರ ರಸ್ತೆ, ಜ್ಯೋತಿಗೌಡನಪುರ ರಸ್ತೆ, ದೊಡ್ಡಮೋಳೆ ರಸ್ತೆ, ಸಿಮ್ಸ್ ಆಸ್ಪತ್ರೆ ರಸ್ತೆ, ಕೆಂಪನಪುರ ರಸ್ತೆ, ಕ್ರೀಡಾಂಗಣದ ಬಳಿ ಮಹಿಳಾ ವಸತಿ ನಿಲಯ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.ಈಗ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ನಗರದಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದ್ದು ಅಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುತ್ತಾರೆ, ಇದ್ಯಾವುದು ಅಭಿವೃದ್ದಿ ಕಾರ್ಯಗಳಲ್ಲವೇ ಸುಮ್ಮನೇ ರಾಜಕೀಯ ಪ್ರೇರಿತ ಆರೋಪ ಮಾಡಬಾರದು, ಬಿಜೆಪಿ ಅವಧಿಯಲ್ಲಿ ಯಾವ ಅನುದಾನವು ಜಿಲ್ಲೆಗೆ ಹಾಗು ಜಿಲ್ಲಾ ಕೇಂದ್ರಕ್ಕೆ ಬಂದಿಲ್ಲ ಎಂದರು.ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಸತ್ತಿ ರಸ್ತೆಯಿಂದ ನ್ಯಾಯಾಲಯದ ವರೆಗಿನ ರಸ್ತೆ ಅಭಿವೃದ್ದಿ ನೆನೆಗುದಿಗೆ ಬಿದ್ದಿರುವುದು ನಿಜಗುಣರಾಜು ಅವರಿಂದಲೇ ರಸ್ತೆ ಅಭಿವೃದ್ದಿಗೆ 10 ಅಡಿ ಜಾಗ ಬಿಡದೇ ಸತಾಯಿಸುತ್ತಿದ್ದಾರೆ, ರೆಸಾರ್ಟ್‌ಗೆ ಅನುಸರಿಸಬೇಕಾದ ಯಾವ ನಿಯಮವನ್ನು ಪಾಲಿಸದೇ ಕಾನೂನು ಬಾಹಿರವಾಗಿ ರೆಸಾರ್ಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರದಾನಕಾರ್ಯದರ್ಶಿ ಚಿಕ್ಕಮಹದೇವ, ಮುಖಂಡರಾದ ಉಮೇಶ್, ಶಿವಮೂರ್ತಿ, ನಲ್ಲೂರು ಸೋಮೇಶ್ವರ್, ರಮೇಶ್‌ನಾಯಕ್, ಸ್ವಾಮಿ ಇದ್ದರು.--------9ಸಿಎಚ್‌ಎನ್51ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿದರು.--------------