ಸಾರಾಂಶ
ಹಳಿಯಾಳ: ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಮಂಜೂರಾತಿಯು ಸರಳವಾಗಿ ಯಾವುದೇ ಖರ್ಚಿಲ್ಲದೇ ಪಾರದರ್ಶಕವಾಗಿ ನಡೆಯಬೇಕು. ಆಡಳಿತದಲ್ಲಿ ನನ್ನ ಕೈ ಬಾಯಿ ಸ್ವಚ್ಛ ಇಟ್ಟುಕೊಂಡೇ ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಯಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಇತ್ತೀಚೆಗೆ ತಾಲೂಕು ಆಡಳಿತ ಸೌಧದಲ್ಲಿ ನಡೆದ ಹಳಿಯಾಳ- ಜೋಯಿಡಾ ತಾಲೂಕುಗಳ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಮೇಲಧಿಕಾರಿಗಳು ಪ್ರಾಮಾಣಿಕ ಇದ್ದಾರೆ. ಆದರೆ ಅವರ ಕಣ್ತಪ್ಪಿಸಿ ಕೆಲವು ಕೆಳಮಟ್ಟದ ಸಿಬ್ಬಂದಿ ಮಾಡುವ ಅವ್ಯವಹಾರಗಳಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಬಗರ್‌ಹುಕುಂ ಸಾಗುವಳಿ ಜಮೀನು ಸಕ್ರಮೀಕರಣ ಮಂಜೂರಾತಿ ಹಕ್ಕು ಪಡೆದುಕೊಂಡ ರೈತರಿಗೆ ಮುಟೇಶನ್ ಎಂಟ್ರಿ ಮಾಡಲು, ಖಾತೆ ಮಾಡಲು ಯಾರಾದರೂ ಹಣ ಕೇಳಿದರೆ ತಲೆದಂಡ ನಿಶ್ಚಿತ ಎಂದರು.ಸಭೆಯಲ್ಲಿ ನಮೂನೆ 57ರಲ್ಲಿ ಸ್ವೀಕೃತಗೊಂಡ ಅರ್ಜಿಗಳ ಪರಿಶೀಲನೆ ನಡೆಸಿದ ಶಾಸಕರು, ತಾಲೂಕಿನ 15 ಅರ್ಜಿದಾರ ರೈತರಿಗೆ ಮತ್ತು ಜೋಯಿಡಾ ತಾಲೂಕಿನ 7 ಅರ್ಜಿದಾರ ರೈತರಿಗೆ ಬಗರ್‌ಹುಕುಂ ಸಾಗುವಳಿ ಜಮೀನು ಸಕ್ರಮೀಕರಣ ಮಂಜೂರಾತಿಯನ್ನು ನೀಡಿದರು.ಮಂಜೂರಾತಿ ಪಡೆದವರು: ಹಳಿಯಾಳ ತಾಲೂಕಿನ ದೇಮಕ್ಕಾ ಸುಭಾಸ ಮಿರಾಶಿ ಗುಂಡೊಳ್ಳಿ, ದೊಡ್ಡಕೊಪ್ಪ ಗ್ರಾಮದ ಇಂದಿರಾ ಫಕೀರ ಚೊರ್ಲೆಕರ, ಮಹಾದೇವ ರಾಮಾ ಸುಳಗೇಕರ, ಸಹದೇವ ರಾಮಾ ಸುಳಗೇಕರ, ಮೈಕಲ್ ಗುಸ್ತಿನ ಸಿದ್ದಿ, ವಾಸುದೇವ ರಾಮಾ ಸುಳಗೇಕರ, ರುಕ್ಮಾ ಬಾಬು ಮುಂಡವಾಡಕರ, ಹಂದಲಿ ಗ್ರಾಮದ ಅರ್ಜುನ ಅನಂತ ಗುಂಡುಪ್ಕರ, ಗೋಕುಳ ನಾರಾಯಣ ಪಾಟೀಲ, ಮಹೇಶ ಗಂಗಾರಾಮ ಗೌಡಾ, ಪುಂಡಲೀಕ ಲಕ್ಷ್ಮಣ ಗೌಡಾ, ಮನೋಜ ಮಾರುತಿ ಗುಂಡುಪ್ಕರ, ನಾರಾಯಣ ಯಶ್ವಂತ ಪಾಳಾ, ಶಾಂತವ್ವಾ ಭೀಮರಾಯ ಬಂಡಿನಗರ ಮಾಲವಾಡ, ಚಂದ್ರಕಾಂತ ಭೀಮಣ್ಣ ಬಡಿಗೇರ ಮುಂಡ್ಕಿ ಅವರು ಸೇರಿದಂತೆ 15 ರೈತರಿಗೆ ಸಕ್ರಮೀಕರಣ ಮಂಜೂರಾತಿ ದೊರೆಯಿತು.
ಜೋಯಿಡಾ ತಾಲೂಕು: ಅವುರ್ಲಿ ಗ್ರಾಮದ ವಾಮನ ಗುಂಡು ದೇವದಾಸ, ಉರ್ಮಿಳಾ ಮಧುಕರ ದೇಸಾಯಿ, ವಿರ್ನೋಲಿ ಗ್ರಾಮದ ನವಲು ಜನ್ನು ಘಾರೆ, ಬೈರು ಜನ್ನು ಘಾರೆ, ವೆಂಕಟೇಶ ನರಸಿಂಹ ನಾಯಕ, ಗಜಾನನ ಕೃಷ್ಣ ಪೈ, ಪಾಂಡುರಂಗ ರಾಮಚಂದ್ರ ಮಾವುಸ್ಕರ ಸೇರಿದಂತೆ ಒಟ್ಟು 7 ಅರ್ಜಿದಾರ ರೈತರಿಗೆ ಸಕ್ರಮೀಕರಣ ಮಂಜೂರಾತಿ ನೀಡಲಾಯಿತು.ಸಭೆಯಲ್ಲಿ ಹಳಿಯಾಳ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಜೋಯಿಡಾ ತಹಸೀಲ್ದಾರ್ ಮಂಜುನಾಥ ಮುನವಳ್ಳಿ, ಶಿರಸ್ತೇದಾರ ಲಕ್ಷ್ಮಣ ಪರೋಡಕರ, ಕಂದಾಯ ನಿರೀಕ್ಷಕ ಅನಿಲ ಪರಬತ್, ಕಿರಣ ಜಕ್ಕಲಿ, ಸೆಂಡ್ರಾ ಡಾಯಸ್, ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಸುಭಾಸ್ ಕೊರ್ವೆಕರ, ಎಚ್.ಬಿ. ಪರಶುರಾಮ, ಜ್ಯೂಲಿಯಾನಾ ಫರ್ನಾಂಡೀಸ್ ಇತರರು ಇದ್ದರು.