ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಿಡದಿ ರೈತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ರಾಜಕೀಯ ಪಕ್ಷಗಳ ಹಣಾಹಣಿಗೆ ಅಖಾಡ ಸಜ್ಜುಗೊಂಡಿದೆ.

ಬಿಡದಿ ಸೊಸೈಟಿ ಚುನಾವಣೆಯನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೆ, ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಅಧಿಕಾರ ಗದ್ದುಗೆ ಹಿಡಿಯಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಉಭಯ ಪಕ್ಷಗಳ ನಾಯಕರು ಸ್ಪರ್ಧೆ ಬಯಸಿದ್ದ ಬಂಡಾಯಗಾರರ ಮನವೊಲಿಸಿ ಉಮೇದುವಾರಿಕೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಪಕ್ಷ, ಜಾತಿ ಹಾಗೂ ಸಂಬಂಧಿಕರ ಆಧಾರದ ಮೇಲೆ ಮತದಾರರ ಮನವೊಲಿಸುವ ಕಸರತ್ತು ಪ್ರಾರಂಭಿಸಿದ್ದಾರೆ. ಈಗಾಗಲೇ ಪ್ರಮುಖ ಮುಖಂಡರ ಸಭೆಗಳು ಮಾತ್ರವಲ್ಲದೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರು ತಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಬಮೂಲ್‌ನಿಂದ ಹೈನುಗಾರರಿಗೆ ಬೋನಸ್, ರೈತರಿಗೆ ಬೆಳೆ ಸಾಲ ಸೌಲಭ್ಯ ನೀಡಿದ್ದನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡರೆ, ಜೆಡಿಎಸ್ - ಬಿಜೆಪಿ ಪಕ್ಷಗಳ ಮುಖಂಡರು ತಮ್ಮ ಸರ್ಕಾರಗಳ ಅವಧಿಯಲ್ಲಿನ ರೈತ ಪರ ಯೋಜನೆಗಳು, ರೈತ ವಿರೋಧಿ ಬಿಡದಿ ಟೌನ್ ಯೋಜನೆಯನ್ನು ದಾಳವಾಗಿ ಉಪಯೋಗಿಸಿಕೊಂಡು ಮತದಾರರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.

ಕಣದಲ್ಲಿ 29 ಅಭ್ಯರ್ಥಿಗಳು:


ಬಿಡದಿ ರೈತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಏಪ್ರಿಲ್ 12ರಂದು ಚುನಾವಣೆ ನಡೆಯಲಿದ್ದು, 12 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 29 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. 12 ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ ಬಯಸಿ 54 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಭಾನುವಾರ ನಾಮಪತ್ರಗಳ ಪರಿಶೀಲನೆ ನಡೆದು ಎಲ್ಲ ನಾಮಪತ್ರಗಳು ಅಂಗೀಕಾರವಾಗಿದ್ದವು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರದಂದು 54 ಮಂದಿ ಪೈಕಿ 25 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದರು. ಅಂತಿಮವಾಗಿ 29 ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆಗಳನ್ನು ಸಹ ನೀಡಲಾಗಿದೆ.

ಸಾಲಗಾರರಲ್ಲದ ಕ್ಷೇತ್ರದ 1 ಸಾಮಾನ್ಯ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು, ಸಾಲಗಾರರ ಕ್ಷೇತ್ರದ 5 ಸಾಮಾನ್ಯ ಸ್ಥಾನಗಳಿಗೆ 11 ಅಭ್ಯರ್ಥಿಗಳು, ಮಹಿಳೆಗೆ ಮೀಸಲಿರುವ 2 ಸ್ಥಾನಗಳಿಗೆ 5 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ 3 ಅಭ್ಯರ್ಥಿಗಳು, ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ 3 ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಹಿಂದುಳಿದ ವರ್ಗ ಎ1 ಸ್ಥಾನ ಇಬ್ಬರು ಮತ್ತು ಪರಿಶಿಷ್ಟ ಪಂಗಡ1 ಸ್ಥಾನಕ್ಕೆ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ.

ಬಾಕ್ಸ್ ....................

ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ:

ಚುನಾವಣೆಯಲ್ಲಿ ಮತದಾನ ಮಾಡಲು ಗುರುತಿನ ಚೀಟಿ ಕಡ್ಡಾಯವಾಗಿದೆ. ಕಾರ್ಡ್ ಪಡೆಯದವರು ಚುನಾವಣೆಗೂ ಮುನ್ನ ಸಂಘದ ಕಚೇರಿಗೆ ಭಾವಚಿತ್ರ ದೊಂದಿಗೆ ಭೇಟಿನೀಡಿ ಗುರುತಿನ ಚೀಟಿ ಪಡೆಯಬೇಕು. ಚುನಾವಣೆ ವೇಳಾಪಟ್ಟಿಯನ್ನು ಈಗಾಗಲೇ ಎಲ್ಲಾ ಅರ್ಹ ಮತದಾರರಿಗೆ ಅಂಚೆ ಮೂಲಕ ಕಳುಹಿಸಲಾಗಿದ್ದು ತಲುಪದೆ ಇರುವ ಸದಸ್ಯ ಮತದಾರರು ಇದನ್ನೇ ಚುನಾವಣೆ ವೇಳಾಪಟ್ಟಿ ಎಂದು ಪರಿಗಣಿಸಿ ಏ.12ರಂದು ನಡೆಯುವ ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.

ಛತ್ರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಬಿ.ಕೆ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್‌...........

ಕಣದಲ್ಲಿರುವ ಅಭ್ಯರ್ಥಿಗಳ ವಿವರ:

ಮೀಸಲು ಕ್ಷೇತ್ರಕಾಂಗ್ರೆಸ್ ಬೆಂಬಲಿತ ಜೆಡಿಎಸ್ಬಿಜೆಪಿ ಬೆಂಬಲಿತಇತರೆ

ಸಾಲಗಾರರಲ್ಲದ ಕ್ಷೇತ್ರಹೇಮಂತ್‌ ಕುಮಾರ್‌ಡಿ.ನಿತ್ಯಾನಂದಬಸವರಾಜು,

ಸಾಲಗಾರರ ಕ್ಷೇತ್ರಎಸ್.ಜೀವನ್ಎಚ್.ಎಲ್.ಚಂದ್ರುಅನಂತ

ದೊಡ್ಡರೇವಯ್ಯ, ಬಿ.ಎನ್.ಪ್ರ ಸನ್ನಕುಮಾರ್,

ಎಚ್.ಎನ್.ಮಧುಕುಮಾರ್, ಗುರುಮಲ್ಲೇಶಯ್ಯ, ವಿ.ಆರ್.ಮಹೇಶ್, ಬಿ.ಮಂಜುನಾಥ್, ಸತ್ಯಮೂರ್ತಿ, ಎಚ್.ಎನ್.ರವಿಕುಮಾರ್.

ಸಾಮಾನ್ಯ ಮಹಿಳೆಎನ್.ಅನ್ನಪೂರ್ಣೇಶ್ವರಿಎಸ್.ಸವಿತಾ ಲೀಲಾವತಿ @ನೀಲಮ್ಮಸಿ.ಟಿ.ಶೋಭಾಜಯಲಕ್ಷ್ಮಮ್ಮ,

ಹಿಂದುಳಿದ ವರ್ಗಎ ಕೆ.ಪಿ.ಬಾಲಕೃಷ್ಣಚಿಕ್ಕದೊಡ್ಡಯ್ಯ,

ಹಿಂದುಳಿದ ವರ್ಗ ಬಿಬಿ.ಎಸ್.ಸಂತೋಷ್ಬಿ.ಪಿ.ರಾಮುಶಿವಣ್ಣ

ಪರಿಶಿಷ್ಟ ಜಾತಿಆರ್.ರಮೇಶ್ಟಿ.ಕೆ.ಲೋಕೇಶ್ವಿ.ತುಳಸಿರಾಮ

ಪರಿಶಿಷ್ಟ ಪಂಗಡಕೆಂಗಲ್‌ ಹನುಮಂತಯ್ಯಎಂ.ಪುಷ್ಪರಾಜು