ಸಾರಾಂಶ
ನಮ್ಮ ಸಮಾಜ ಆಧುನಿಕತೆಯತ್ತ ಸಾಗುತ್ತಿದೆಯಾದರೂ ಸಹ ಹೆಣ್ಣು ಬ್ರೂಣ ಹತ್ಯೆ ಇನ್ನು ಜೀವಂತವಾಗಿರುವುದು ಗಮನಿಸಿದರೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಆತಂಕ ಕಾಡುತ್ತಿದೆ. ಯಾವುದೇ ರೀತಿಯ ಭೇದ ಭಾವ ಮಾಡದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಸರಿಸಮಾನವಾಗಿ ಕಾಣಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಮಂಡ್ಯ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮಿ ಚೌಧರಿ ಪ್ರಶಂಸೆ ವ್ಯಕ್ತಪಡಿಸಿದರು.ಮಂಡ್ಯ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ನಿಡಘಟ್ಟ ಬಳಿ ಕುರುಬರ ಸಂಘದ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಭ್ರೂಣ ಹತ್ಯೆ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರು ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಅಲ್ಲದೇ, ಇವುಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಸಲಹೆ ನೀಡಿದರು.ನಮ್ಮ ಸಮಾಜ ಆಧುನಿಕತೆಯತ್ತ ಸಾಗುತ್ತಿದೆಯಾದರೂ ಸಹ ಹೆಣ್ಣು ಬ್ರೂಣ ಹತ್ಯೆ ಇನ್ನು ಜೀವಂತವಾಗಿರುವುದು ಗಮನಿಸಿದರೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಆತಂಕ ಕಾಡುತ್ತಿದೆ. ಯಾವುದೇ ರೀತಿಯ ಭೇದ ಭಾವ ಮಾಡದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಸರಿಸಮಾನವಾಗಿ ಕಾಣಬೇಕು ಎಂದರು.
ರಾಜ್ಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ದೌರ್ಜನ ನಡೆದರು ಸಹ ಸಮಾಜ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಮಹಿಳಾ ಆಯೋಗಕ್ಕೆ ದೂರು ನೀಡಿ ಸಹಕರಿಸುವಂತೆ ಸಲಹೆ ನೀಡಿದರು.ಈ ವೇಳೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮರಿಹೆಗಡೆ, ಮುಖಂಡರಾದ ನಾಗರಾಜ್, ಸಂದೀಪ್, ಉಮೇಶ್, ಚಿಕ್ಕಮ್ಮ ಉಪಸ್ಥಿತರಿದ್ದರು.