ಸಾರಾಂಶ
ಎಂಎಸ್ ಸಿಲ್ವರ್ ವಿಸ್ಪರ್ ನೌಕೆ 186 ಮೀಟರ್ ಉದ್ದ, 6.20 ಮೀಟರ್ ಡ್ರಾಫ್ಟ್ ಮತ್ತು 28,258 ಒಟ್ಟು ಟನ್‌ಗಳನ್ನು ಹೊಂದಿದೆ. ಈ ಹಡಗು ಅಂತರಾಷ್ಟ್ರೀಯ ಪ್ರವಾಸದಲ್ಲಿದ್ದು, ಕೇಪ್ ಟೌನ್, ಮುಂಬೈ, ಮಂಗಳೂರು, ಕೊಲಂಬೊ ಪ್ರವಾಸ ನಡೆಸುತ್ತಿದೆ. ನೌಕೆಯಲ್ಲಿನ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ನವ ಮಂಗಳೂರು ಬಂದರಿಗೆ ಈ ಋತುವಿನ ಮೊದಲ ಪ್ರವಾಸಿ ನೌಕೆಯಾದ ಮೆ. ಸಿಲ್ವರ್ ವಿಸ್ಪರ್ ಮಂಗಳವಾರ ಆಗಮಿಸಿದೆ. ಈ ನೌಕೆಯನ್ನು ಬರ್ತ್ ನಂ. 4 ರಲ್ಲಿ ಸ್ವಾಗತಿಸಲಾಯಿತು.ಈ ಐಷಾರಾಮಿ ಬಹಮಿಯನ್ ಧ್ವಜದ ಹಡಗು ಮುಂಬೈನಿಂದ ಆಗಮಿಸಿತ್ತು. ಇದರಲ್ಲಿ 299 ಪ್ರಯಾಣಿಕರು ಮತ್ತು 296 ಸಿಬ್ಬಂದಿ ಇದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನೌಕೆಯ ಕ್ಯಾಪ್ಟನ್‌ಗೆ ಸ್ಮರಣಿಕೆ ನೀಡಿದರು. ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಇದ್ದರು.
ಎಂಎಸ್ ಸಿಲ್ವರ್ ವಿಸ್ಪರ್ ನೌಕೆ 186 ಮೀಟರ್ ಉದ್ದ, 6.20 ಮೀಟರ್ ಡ್ರಾಫ್ಟ್ ಮತ್ತು 28,258 ಒಟ್ಟು ಟನ್‌ಗಳನ್ನು ಹೊಂದಿದೆ. ಈ ಹಡಗು ಅಂತರಾಷ್ಟ್ರೀಯ ಪ್ರವಾಸದಲ್ಲಿದ್ದು, ಕೇಪ್ ಟೌನ್, ಮುಂಬೈ, ಮಂಗಳೂರು, ಕೊಲಂಬೊ ಪ್ರವಾಸ ನಡೆಸುತ್ತಿದೆ. ನೌಕೆಯಲ್ಲಿನ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.ಪ್ರಯಾಣಿಕರು ಮೂಡುಬಿದಿರೆಯ ಸಾವಿರ ಕಂಬಗಳ ಬಸದಿ, ಕದ್ರಿ ಮಂಜುನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್ ಮತ್ತು ಪಿಲಿಕುಳದ ಕುಶಲಕರ್ಮಿಗಳ ಗ್ರಾಮ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು.